Kalasipalya Bus Stand : ಕೊನೆಗೂ ಉದ್ಘಾಟನೆಯಾದ 63.17 ಕೋಟಿ ರೂಪಾಯಿ ವೆಚ್ಚದ ಕಲಾಸಿಪಾಳ್ಯ ಬಸ್ ನಿಲ್ದಾಣ

ಆರು ವರ್ಷಗಳಿಂದ ನಿರ್ಮಾಣಗೊಳ್ಳುತ್ತಿದ್ದ ಕಲಾಸಿಪಾಳ್ಯ ಟ್ರಾಫಿಕ್ ಮತ್ತು ಟ್ರಾನ್ಸಿಟ್ ಮ್ಯಾನೇಜ್‌ಮೆಂಟ್ ಸೆಂಟರ್ (ಟಿಟಿಎಂಸಿ), ನಾಲ್ಕು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.

ಬೆಂಗಳೂರು, ಫೆಬ್ರವರಿ. 24: ಕಲಾಸಿಪಾಳ್ಯದಲ್ಲಿ ನೂತನವಾಗಿ ನಿರ್ಮಿಸಿದ ಬಸ್ ನಿಲ್ದಾಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ (ಫೆಬ್ರವರಿ 24) ರಂದು ಉದ್ಘಾಟಿಸಿದರು. ನಿಲ್ದಾಣದಲ್ಲಿ ಬಸ್ ಸೇವೆಗೆ ಚಾಲನೆ ನೀಡುವ ಮಾಡುವ ಉದ್ಘಾಟನೆ ಮಾಡಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈ ಯೋಜನೆಗೆ 63.17 ಕೋಟಿ ರೂಪಾಯಿ ವೆಚ್ಚ ಮಾಡಿದೆ.

ಆರು ವರ್ಷಗಳಿಂದ ನಿರ್ಮಾಣಗೊಳ್ಳುತ್ತಿದ್ದ ಕಲಾಸಿಪಾಳ್ಯ ಟ್ರಾಫಿಕ್ ಮತ್ತು ಟ್ರಾನ್ಸಿಟ್ ಮ್ಯಾನೇಜ್‌ಮೆಂಟ್ ಸೆಂಟರ್ (ಟಿಟಿಎಂಸಿ), ನಾಲ್ಕು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಈ ನಿಲ್ದಾಣದಲ್ಲಿ ನಗರ ಸಾರಿಗೆ ಬಸ್ಸುಗಳು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ದೂರದ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳನ್ನು ಓಡಿಸಲು ಸ್ಥಳಾವಕಾಶವಿದೆ. ಒಂದು ಬಾರಿಗೆ 30 ಬಸ್‌ಗಳು ಈ ಸ್ಥಳದಿಂದ ನಿರ್ವಹಿಸಬಹುದು. ಹೊಸದಾಗಿ ನಿರ್ಮಿಸಲಾಗಿರುವ ಪಾರ್ಕಿಂಗ್‌ನಲ್ಲಿ 144 ಕಾರುಗಳು ಮತ್ತು 100 ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವಿದೆ. ಮಹಿಳೆಯರಿಗೆ ವಿಶ್ರಾಂತಿ ಕೊಠಡಿಗಳು, ತಿನಿಸುಗಳು ಮತ್ತು ಕುಡಿಯುವ ನೀರಿನ ಸೌಲಭ್ಯಗಳೂ ಇಲ್ಲಿವೆ.

CM Basavaraj Bommai inaugurates Kalasipalya bus stand

ನಗರದ ಹೃದಯ ಭಾಗದಲ್ಲಿರುವ ಕಲಾಸಿಪಾಳ್ಯ ಪ್ರದೇಶದ ಜನದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಿಟಿ ಬಸ್ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು, ಬಿಎಂಟಿಸಿ 2016 ರಲ್ಲಿ ಹೊಸ ನಿಲ್ದಾಣದ ನಿರ್ಮಾಣವನ್ನು ಪ್ರಾರಂಭಿಸಿತು. 2016 ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಟರ್ಮಿನಲ್​ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ್ದರು. ಇದು 2021 ರಲ್ಲಿ ಬಹುತೇಕ ಸಿದ್ಧವಾಗಿತ್ತು. ಆದರೆ, ಕೊರೊನಾ ಕಾರಣದಿಂದ ನಗದು ಕೊರತೆಯಿಂದ ಬಳಲುತ್ತಿರುವ ಬಿಎಂಟಿಸಿ ಗುತ್ತಿಗೆದಾರರ ಬಾಕಿ ಪಾವತಿಸಲು ಕಷ್ಟವಾಯಿತು ಹೀಗಾಗಿ ನೆರವು ಕೋರಿ ರಾಜ್ಯ ಸರ್ಕಾರವನ್ನು ಸಂಪರ್ಕಿಸಿತ್ತು.

CM Basavaraj Bommai inaugurates Kalasipalya bus stand

ಆರು ವರ್ಷಗಳ ಸುದೀರ್ಘ ಅವಧಿಯ ನಂತರ ಈ ಕಲಾಸಿಪಾಳ್ಯ ಬಸ್ ನಿಲ್ದಾಣ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಈ ಟರ್ಮಿನಲ್‌ನಿಂದ ಮೆಜೆಸ್ಟಿಕ್, ಕೋರಮಂಗಲ, ಎಲೆಕ್ಟ್ರಾನಿಕ್ಸ್ ಸಿಟಿ, ಅತ್ತಿಬೆಲೆ, ಸರ್ಜಾಪುರ, ಕನಕಪುರ ರಸ್ತೆ ಮತ್ತಿತರ ಕಡೆಗಳಿಗೆ ಬಿಎಂಟಿಸಿ ಸಿಟಿ ಬಸ್ ಸೇವೆ ಒದಗಿಸುತ್ತಿದೆ. ಇಲ್ಲಿಗೆ ಕೆಆರ್ ಮಾರ್ಕೆಟ್ ಮೆಟ್ರೊ ನಿಲ್ದಾಣವು ಹತ್ತಿರದಲ್ಲಿದೆ. ಇಲ್ಲಿಗೆ ಕೆಆರ್ ಮಾರ್ಕೆಟ್ ಮೆಟ್ರೊ ನಿಲ್ದಾಣವು ಹತ್ತಿರದಲ್ಲಿದೆ. , ಟಿಟಿಎಂಸಿ ಜನನಿಬಿಡ ಪ್ರದೇಶವನ್ನು ಸಾರಿಗೆ ಕೇಂದ್ರವಾಗಿ ಪರಿವರ್ತಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+