ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

BJP Janaspandana : 'ಜನಸ್ಪಂದನ' ಯಶಸ್ವಿಗಾಗಿ ಸಿಎಂ ಆಂಜನೇಯ ಸ್ವಾಮಿಗೆ ಪೂಜೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ಬಿಜೆಪಿ ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿದೆ. ಬಿಜೆಪಿಯ ಜನಸ್ಪಂದನ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದ ಪರವಾಗಿ ಸ್ಮೃತಿ ಇರಾನಿ ಆಗಮಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಮೂರು ವರ್ಷದ ಸಾಧನೆಯನ್ನು ಜನತೆಯ ಮುಂದಿಡಲು ಪಕ್ಷ ಮತ್ತು ಸರ್ಕಾರ ಸಜ್ಜಾಗಿದ್ದು. ಜನಸ್ಪಂದನ ಸಮಾವೇಶಕ್ಕೆ ತೆರಳುವ ಮುನ್ನ ಸಿಎಂ ಮಾತನಾಡಿದ್ದಾರೆ.

ಇದಕ್ಕೂ ಮುನ್ನ ಅವರು ಜನಸ್ಪಂದನ ಯಶಸ್ವಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಲಬ್ರೂಯಿ ಅತಿಥಿ ಗೃಹದ ಬಳಿ ಇರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, "ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಸುಮಾರು ಎರಡು ಲಕ್ಷಕ್ಕೂ ಅಧಿಕ ಜನ ಸೇರುವ ಸಾಧ್ಯತೆ ಇದೆ. ಆ ಭಾಗದಲ್ಲಿ ಉತ್ತಮವಾಗಿ ಪಕ್ಷ ಸಂಘಟನೆ ಆಗಿದೆ. ಬರುವ ದಿನಗಳಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ ಪಕ್ಷ ಉತ್ತಮ ಫಲಿತಾಂಶ ಪಡೆಯಲಿದೆ. ಸ್ಮೃತಿ ಇರಾನಿ ಅವರು ಬರುತ್ತಿದ್ದಾರೆ. ನಮ್ಮ ಮೂರು ವರ್ಷಗಳ ಸಾಧನೆಗಳನ್ನ ಜನರ ಮುಂದೆ ಇಡುತ್ತೇವೆ. ಈಗಾಗಲೇ ಜನರಿಗೆ ಹಲವು ವಿಶೇಷ ಯೋಜನೆ ನೀಡಿದ್ದೇವೆ.ಇಂದು ಯೋಜನೆಗಳ ಪ್ರಗತಿ ಮತ್ತು ಎಷ್ಟು ಜನರಿಗೆ ತಲುಪಿವೆ ಅನ್ನೋದರ ಬಗ್ಗೆ ಮಾಹಿತಿ ನೀಡ್ತೀವಿ" ಎಂದು ತಿಳಿಸಿದ್ದಾರೆ.

CM Basavaraj Bommai do Pooja to Anjaneya Swamy for the success of Janaspandana

ಬಿಜೆಪಿಯ ಹೈಕಮಾಂಡ್ ಬರುವ ನಿರೀಕ್ಷೆಯನ್ನು ಹೊಂದಿತ್ತು. ಆದರೆ ದೊಡ್ಡಬಳ್ಳಾಪುದ ಸಮಾವೇಶ 3 ಸಲ ಮುಂದೂಡಿಕೆಯಾಗಿತ್ತು. ಸಿದ್ದರಾಮಯ್ಯ ಜನ್ಮದಿನೋತ್ಸವದ ದಿನವೇ ಆಯೋಜನೆಯ ಆಲೋಜನೆಯನ್ನು ಮಾಡಿತ್ತು. ಇನ್ನು ಪ್ರವೀಣ್ ನೆಟ್ಟಾರು ಕೊಲೆಯಿಂದ ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬಿಜೆಪಿ ಕಾರ್ಯಕರ್ತರೇ ಪಕ್ಷದ ವಿರುದ್ದವೇ ತಿರುಗಿಬಿದ್ದ ಪರಿಣಾಮ ಆ ವೇಳೆಯಲ್ಲಿಯೂ ಸಮಾವೇಶವನ್ನು ಮುಂದೂಡಿಕೆ ಮಾಡಲಾಗಿತ್ತು. ಇನ್ನು ಸೆಪ್ಟೆಂಬರ್ 8 ರಂದು ನಡೆಯಬೇಕಿದ್ದ ಸಮಾವೇಶ ಉಮೇಶ್ ಕತ್ತಿ ಸಾವಿನಿಂದ ಮುಂದೂಡಿಕೆ ಆಗಿತ್ತು. ಇಂದು ಸಮಾವೇಶ ನಡೆಯುತ್ತಿದ್ದು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಛತ್ತಿಸ್‌ಘಡದ ಕಾರ್ಯಕ್ರಮದ ನಿಮಿತ್ತ ದೊಡ್ಡಬಳ್ಳಾಪುಕ್ಕೆ ಆಗಮಿಸುತ್ತಿಲ್ಲ. ಕೇಂದ್ರ ಸರ್ಕಾರದ ಪರವಾಗಿ ಕೇವಲ ಸ್ಮೃತಿ ಇರಾನಿ ಮಾತ್ರವೇ ಆಗಮಿಸುತ್ತಿದ್ದಾರೆ.

CM Basavaraj Bommai do Pooja to Anjaneya Swamy for the success of Janaspandana

ಬಿಜೆಪಿಯ ಮೂರು ವರ್ಷದ ಸಾಧನೆಯ ಅನಾವರಣಕ್ಕಾಗಿ ಸಕಲ ರೀತಿಯಲ್ಲೂ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಯಡಿಯೂರಪ್ಪ ಸರ್ಕಾರದ 2 ವರ್ಷದ ಸಾಧನೆ ಮತ್ತು ಬೊಮ್ಮಾಯಿ ಸರ್ಕಾರದ ಒಂದು ವರ್ಷದ ಸಾಧನೆಯು ರಿಪೋರ್ಟ್ ತೆರೆದುಕೊಳ್ಳಲಿದೆ.

English summary
The party and the government are ready to present the achievement of three years of BJP government to the people. The CM spoke before leaving for the Janaspandan convention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X