ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಧಮ್‌ ಇದ್ದರೆ 'ಕಮಲ' ಅರಳುವುದನ್ನು ನಿಲ್ಲಿಸಿ: ಕಾಂಗ್ರೆಸ್‌ಗೆ ಬೊಮ್ಮಾಯಿ ಸವಾಲು

|
Google Oneindia Kannada News

ದೊಡ್ಡಬಳ್ಳಾಪುರ, ಸೆಪ್ಟೆಂಬರ್ 10: ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ 2023ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಬಿಜೆಪಿಯ ವಿಜಯ ಕೇಳಿಸಲಿದೆ ಎಂದು ಹೇಳಿದ್ದಾರೆ.

ಯಡಿಯೂಪ್ಪ ರಾಜಹುಲಿ, ಕರ್ನಾಟಕದ ಕಿತ್ತೂರ ರಾಣಿ ಚೆನ್ನಮ್ಮ ಶೋಭ ಕರಂದ್ಲಾಜೆ, ಫೈಯರ್ ಬ್ರಾಂಡ್ ಸಿಟಿ ರವಿ ಸೇರಿದಂತೆ ವೇದಿಯ ಮೇಲಿದ್ದವರಿಗೆ ಬಿರುದುಗಳನ್ನು ನೀಡಿ ಹೊಗಳಿದರು ಸಿಎಂ ಬೊಮ್ಮಾಯಿ.

ಕಾಂಗ್ರೆಸ್‌ಗೆ ವಿಧಾನಸಭೆಯಲ್ಲಿಯೇ ತಕ್ಕ ಉತ್ತರ ಕೊಡುತ್ತೇವೆ: ಯಡಿಯೂರಪ್ಪಕಾಂಗ್ರೆಸ್‌ಗೆ ವಿಧಾನಸಭೆಯಲ್ಲಿಯೇ ತಕ್ಕ ಉತ್ತರ ಕೊಡುತ್ತೇವೆ: ಯಡಿಯೂರಪ್ಪ

2019ರಲ್ಲಿ ಬಿಜೆಪಿ ಹೆಚ್ಚಿನ ಸ್ಥಾನವನ್ನು ಪಡೆಯಿತು. ಕಾಂಗ್ರೆಸ್‌ನ ಅಧಿಕಾರದ ಲಾಲಸೆ ಮತ್ತು ಸಂವಿಧಾನ ವಿರೋಧಿಯಾಗಿ ಕೆಲಸ ಮಾಡಿ ಹಿಂಬಾಗಿಲ ಮೂಲಕ ಅಧಿಕಾರವನ್ನು ನಡೆಸಿದ್ದರು. ಸಿದ್ದರಾಮಣ್ಣ ರಾಜಕೀಯ ನೈತಿಕತೆ ಎಲ್ಲಿತ್ತು. ಅವರಪ್ಪನಾಣೆ ಅಧಿಕಾರಕ್ಕೆ ಬರಲ್ಲ ಎಂದು ಅವರೊಂದಿಗೆ ಕೈಜೋಡಿಸಿದ್ದೇವೆ. 17 ಜನ ರಾಜೀನಾಮೆಯನ್ನು ಕೊಟ್ಟು ಬಂದಿದ್ದರು. ಜನರ ಬಳಿಯಲ್ಲಿ ಮತ್ತೆ ಹೋಗುತ್ತೇವೆ ಎಂದು ಹೇಳಿ ಜನರಬಳಿ ಹೋಗಿ ಗೆದ್ದು ಬಂದರು.

CM Basavaraj Bommai challenged to the Congress to stop us from coming to power

ಕೋವಿಡ್ ಸಮಯದಲ್ಲಿ ಸಾಕಷ್ಟು ತೊಂದರೆಯಾಗಿತ್ತು. ಬಿಎಸ್‌ವೈ ನೇತೃತ್ವದಲ್ಲಿ ಕೋವಿಡ್ ಸಮರ್ಥವಾಗಿ ಎದುರಿಸಿದ್ದೇವು. ಕೇಂದ್ರದಲ್ಲೂ ಮೋದಿ ನೇತೃತ್ವದಲ್ಲಿ 138 ಕೋಟಿ ಜನರಿಗೆ ಕೋವಿಡ್‌ ಲಸಿಕೆ ನೀಡಿದ್ದೇವು. ಕಾಂಗ್ರೆಸ್ ಅಧಿಕಾರದಲ್ಲಿದ್ದರೇ ಜನರನ್ನು ನರಕಕ್ಕೆ ತಳ್ಳುತ್ತಿದ್ದರು. ಅನ್ನಭಾಗ್ಯವನ್ನು 30 ರಿಂದ 7 ಕೆಜಿಗೆ ಇಳಿಸಿದ್ದಿರಿ. ಮತ್ತೆ 4 ಕೆಜಿಗೆ ಇಳಿಸಿ ಚುನಾವಣೆಯಲ್ಲಿ 7 ಕೆಜಿ ಮಾಡಲಾಯ್ತು. ಅಕ್ಕಿ ಮೋದಿಯದ್ದು ಚೀಲ ಕಾಂಗ್ರೆಸ್‌ನದ್ದು ಅನ್ನಭಾಗ್ಯದಲ್ಲಿ ಕನ್ನ ಹಾಕಲಾಗಿದೆ ಎಂದು ಕಾಂಗ್ರೆಸ್‌ಗೆ ಕುಟುಕಿದ ಸಿಎಂ ಬೊಮ್ಮಾಯಿ.

ಡಬಲ್ ಎಂಜಿನ್ ಸರ್ಕಾರ ಬೇಕು ಹೊರತು ಡಬಲ್ ಸ್ಟೇರಿಂಗ್ ಸರ್ಕಾರವಲ್ಲ: ಸುಧಾಕರ್ಡಬಲ್ ಎಂಜಿನ್ ಸರ್ಕಾರ ಬೇಕು ಹೊರತು ಡಬಲ್ ಸ್ಟೇರಿಂಗ್ ಸರ್ಕಾರವಲ್ಲ: ಸುಧಾಕರ್

ಕಾಂಗ್ರೆಸ್ ಹಗರಣ ಕುರಿತು ವಾಗ್ದಾಳಿ ನಡೆಸಿದ ಕಾಂಗ್ರೆಸ್ ಗೆ ಮಾತಿನಲ್ಲೇ ಕುಟುಗಿದೆ. ಕಾಂಗ್ರೆಸ್‌ನದ್ದು ಶೇ100 ಸರ್ಕಾರ ಎಂದು ಬೊಮ್ಮಾಯಿ ವಾಗ್ದಾಳಿ. ನಮ್ಮ ಕಾಲದಲ್ಲಿ ಹಿರಿಯ ಅಧಿಕಾರಿಯಿದ್ದರು ಕ್ರಮವನ್ನು ಕೈಗೊಂಡಿದ್ದೇವೆ. ಕಾಂಗ್ರೆಸ್‌ ನ ದುಷ್ಟ ನಾಟಕ ಕರ್ನಾಟಕದಲ್ಲಿ ನಡೆಯುವುದಿಲ್ಲ. 2023ಕ್ಕೆ ಈ ನಾಟಕಕ್ಕೆ ತೆರೆ ಎಳೆಯಬೇಕು.

CM Basavaraj Bommai challenged to the Congress to stop us from coming to power

ಬಿಎಸ್ ಯಡಿಯುರಪ್ಪ ಸರ್ಕಾರ ಮಾಡಿದ್ದ ಉತ್ತಮ ಕೆಲಸವನ್ನು ಮುಂದುವರೆಸಿದ್ದೇವೆ. ರೈತ ಸಿರಿ, ವಿದ್ಯಾಸಿರಿ , ಮಾಸಿಕ ವೇತನ ಹೆಚ್ಚಳ ಮಾಡಲಾಗಿದೆ. ವಿದ್ಯೆ ಮತ್ತು ಕೃಷಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಯಶಸ್ವಿನಿ ಯೋಜನೆ, ಹಾಲು ಉತ್ಪಾದಕರಿಗೆ ಕ್ಷೀರಾಭಿವೃದ್ದಿ ಬ್ಯಾಂಕ್ ತೆರೆಯಲಾಗುತ್ತಿದೆ. ಎಸ್‌ಸಿ ಎಸ್ಟಿ ಜನರಿಗೆ 75 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಸ್ವಂ ಉದ್ಯೋಗ ತರಬೇತಿ ನೀಡಲಾಗುತ್ತಿದೆ. ಯುವಕರಿಗಾಗಿ ವಿವೇಕಾನಂದ ಯೋಜನ ತರಲಾಗಿದೆ. ಎತ್ತಿನಹೊಳೆ ಯೋಜನೆ ಪ್ರಾರಂಭ ಮಾಡಿದ್ದೇ ನಾವು, ನಾವೇ 3000 ಕೋಟಿ ಹಣವನ್ನು ನೀಡಿದ್ದೇವೆ. ಇದೇ ವರ್ಷ ಎತ್ತಿನ ಹೊಳೆ ನೀರನ್ನು ಹರಿಸುತ್ತೇವೆ ಎಂದು ಸಿಎಂ ಘೋಷಿಸಿದರು.

ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಸ್ಯಾಟಲೈಟ್ ಟೌನ್ ಆಗಿ ಅಭಿವೃದ್ದಿಯನ್ನು ಮಾಡುತ್ತೇವೆ. ಎಲ್ಲಾ ರಂಗದಲ್ಲೂ ರಾಜ್ಯ ಮುಂದೆ ಬರಬೇಕು ನವ ಕರ್ನಾಟಕದ ಕನಸು ಬಿಚ್ಚಿಟ್ಟ ಸಿಎಂ ಬೊಮ್ಮಾಯಿ. ನಿಮಗೆ ತಾಕತ್ತಿದ್ದರೆ, ಧಮ್‌ ಇದ್ದರೆ ನಾವು ಅಧಿಕಾರಕ್ಕೆ ಬರುವುದನ್ನು ನಿಲ್ಲಿಸಿ ಎಂದು ಸಿಎಂ ಕಾಂಗ್ರೆಸ್ ಸವಾಲು ಹಾಕಿದ್ದಾರೆ.

English summary
CM Bommai said in the BJP's public relations program that the BJP party will once again come to power in the 2023 elections. He said that BJP's victory will be heard on the third floor of Vidhan Sabha,Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X