ಯುಗಾದಿ ಪ್ರಯುಕ್ತ ಲಲಿತಕಲಾ ಮಂದಿರದಲ್ಲಿ ಶಾಸ್ತ್ರೀಯ ಸಂಜೆ
ಬೆಂಗಳೂರು, ಮಾರ್ಚ್ 25: ಸಂಗೀತಾಸಕ್ತರೆಲ್ಲರೂ ಸೇರಿ ಯುಗಾದಿ ಹಬ್ಬದ ಅಂಗವಾಗಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಏಪ್ರಿಲ್ 6ರಂದು ಬನಶಂಕರಿ 2 ನೇ ಹಂತದಲ್ಲಿರುವ ಲಲಿತಕಲಾ ಮಂದಿರದಲ್ಲಿ ಕಾರ್ಯಕ್ರಮ ಜರುಗಲಿದೆ. ಸಂಜೆ 5.30ರಿಂದ ಕಾರ್ಯಕ್ರಮ ಆರಂಭವಾಗಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ವಿದ್ವಾನ್ ಎಸ್ ಶಂಕರ್ ಅವರಿಂದ ಗಾಯನ ಮೂಡಿಬರಲಿದ್ದು, ಹಾರ್ಮೊನಿಯಂನಲ್ಲಿ ವಿ. ಬಿ ರಘುರಾಂ, ಮೃದಂಗದಲ್ಲಿ ವಿದ್ವಾನ್ ಬಿಸಿ ಮಂಜುನಾಥ್, ಘಟದಲ್ಲಿ ಆರ್‌ಆರ್ ಪ್ರತಾಪ್, ಎಎಸ್‌ಎನ್ ಸ್ವಾಮಿ ಖಂಜಿರದೊಂದಿಗೆ ಸಾಥ್ ನೀಡಲಿದ್ದಾರೆ.

ಶಾಸ್ತ್ರೀಯ ಸಂಗೀತದ ಹುಟ್ಟು ಬಹಳ ಹಳೆಯ ಧರ್ಮ ಗ್ರಂಥ ಹಿಂದೂ ಸಂಪ್ರದಾಯದ ಒಂದು ಭಾಗವಾದ ವೇದದಲ್ಲಿ ಕಂಡು ಬರುತ್ತದೆ. ಸಂಗೀತಾಸಕ್ತರೆಲ್ಲರೂ ಆಗಮಿಸಿ ಸಂಗೀತ ಸಂಜೆಯನ್ನು ಇನ್ನಷ್ಟು ಅಂದಗಾಣಿಸಿ.












Click it and Unblock the Notifications