ಖುಷಿ ಸುದ್ದಿ: ಬೆಂಗಳೂರಿನ ಮೊದಲ ಕಾರ್ ರೇಸಿಂಗ್ ಟ್ರ್ಯಾಕ್ ಆರಂಭ!
ಬೆಂಗಳೂರು, ಜೂನ್. 03: ಸಿಲಿಕಾನ್ ಸಿಟಿಯ ಜನರಲ್ಲಿ ಹಲವರು ರೇಸಿಂಗ್ ಇಷ್ಟಪಡುವವರಿದ್ದಾರೆ. ಅವರಿಗೊಂದು ಸಿಹಿ ಸುದ್ದಿಯಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಡಾ ಶಿವರಾಮ ಕಾರಂತ್ ಲೇಔಟ್‌ನಲ್ಲಿ ಬೆಂಗಳೂರಿನ ಮೊದಲ ಮೋಟಾರ್‌ಸ್ಪೋರ್ಟ್ ರೇಸ್ ಟ್ರ್ಯಾಕ್ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.
ದೇವನಹಳ್ಳಿಯಲ್ಲಿ ನಗರದ ಏಕೈಕ ರೇಸ್ ಟ್ರ್ಯಾಕ್ 2026ರ ವೇಳೆಗೆ ಸಿದ್ಧಗೊಳ್ಳುವ ನಿರೀಕ್ಷೆಯಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮತ್ತು ರೇಸ್ ಟ್ರ್ಯಾಕ್ ಫಲಪ್ರದವಾಗುವ ಕುರಿತು ನಡೆಯುತ್ತಿರುವ ಚರ್ಚೆಗಳು ನಡೆದರೆ, ಈ ವರ್ಷವೇ ನವೆಂಬರ್ ವೇಳೆಗೆ ಶಿವರಾಮ ಕಾರಂತ ಲೇಔಟ್‌ನಲ್ಲಿ ರೇಸ್ ಟ್ರ್ಯಾಕ್ ಸಿದ್ಧಗೊಳ್ಳಬಹುದು.

ಹೆಸರು ಹೇಳಿಕೊಳ್ಳು ಬಯಸದ ಭಾರತದಲ್ಲಿ ಕಾರ್ ರೇಸಿಂಗ್ ಈವೆಂಟ್‌ಗಳ ಆಯೋಜಕರೊಬ್ಬರು. ನವೆಂಬರ್‌ನೊಳಗೆ ಟ್ರ್ಯಾಕ್ ರಚಿಸಲು ಸೋಮಶೆಟ್ಟಿ ಹಳ್ಳಿಯ ಉದ್ದೇಶಿತ 25 ಎಕರೆ ಕ್ರೀಡಾಂಗಣದ ಸುತ್ತಲಿನ ಲೇಔಟ್‌ನಲ್ಲಿ 2.5 ಕಿಮೀ ಜಾಗವನ್ನು ಹೊಂದಿದ್ದಾರೆ ಎಂದು ಬಿಡಿಎ ಮೂಲಗಳನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
"2.5 ಕಿಮೀ ಜಾಗವು ಕ್ರೀಡಾಂಗಣವನ್ನು ಸುತ್ತುವರೆದಿರುವ ಲೂಪ್ ರೂಪದಲ್ಲಿರುತ್ತದೆ. ಈವೆಂಟ್‌ನ ಅವಧಿಯಲ್ಲಿ ಮಾತ್ರ ಅವರು ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ. ಕೆಲವು ದಿನಗಳವರೆಗೆ ಅವರ ಸ್ವಾಧಿನದಲ್ಲಿ ಇರುತ್ತದೆ. ಓಟಕ್ಕೆ ಅಗತ್ಯವಾದ ಉನ್ನತೀಕರಣ ಮತ್ತು ರೇಸಿಂಗ್‌ಗೆ ಬ್ಯಾರಿಕೇಡಿಂಗ್ ಮತ್ತು ಇತರ ಕೆಲಸಗಳನ್ನು ಮಾಡಲಾಗುತ್ತದೆ" ಎಂದಿದ್ದಾರೆ.
"ರೇಸಿಂಗ್ ಇಲ್ಲದೆ ಇದ್ದಾಗ, ಬಿಡಿಎ ಮಂಜೂರು ಮಾಡಿದವರಿಗೆ ರಸ್ತೆ ಮುಕ್ತವಾಗಲಿದೆ. ಇನ್ನು ಕ್ರೀಡಾಂಗಣ ನಿರ್ಮಾಣವಾಗಬೇಕಿದೆ, ಆದರೆ ಅದಕ್ಕೆ ಈಗಾಗಲೇ ಜಾಗವನ್ನು ಮೀಸಲಿಡಲಾಗಿದೆ" ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಉದ್ದೇಶಿತ ಕ್ರೀಡಾಂಗಣದ ಸುತ್ತಲಿನ ರಸ್ತೆಗಳನ್ನು ಬಹು ಕ್ರೀಡಾ ಸೌಲಭ್ಯಕ್ಕೆ ನೀಡಲಾಗಿದೆ. ಈಗಾಗಲೇ ಕ್ರೀಡಾಂಗಣಕ್ಕೆ ಜಾಗ ಮೀಸಲಿಡಲಾಗಿದೆ. ಇದನ್ನು ನಿರ್ಮಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಡಿಎ ಅಧ್ಯಕ್ಷರಿಗೆ ರೇಸಿಂಗ್ ಈವೆಂಟರ್ಸ್‌ನಿಂದ ಪತ್ರ
"ಭವಿಷ್ಯದ ಈವೆಂಟ್‌ಗಳಿಗೆ ಇಲ್ಲಿ ಸ್ಥಳಾವಕಾಶವನ್ನು ಪಡೆಯಲು ರೇಸಿಂಗ್ ಈವೆಂಟ್‌ಗಳ ಸಂಘಟಕರು ಇತ್ತೀಚೆಗೆ ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರಿಗೆ ವನವಿ ನೀಡಿದ್ದಾರೆ" ಎಂದು ಬಿಡಿಎ ಉನ್ನತ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಸಂಘಟಕರು ಬೆಂಗಳೂರಿನ ಇತರ ಪ್ರದೇಶಗಳನ್ನು ಗುರುತಿಸಿದ್ದರು, ಆದರೆ ಕೊನೆಗೆ ಡಾ ಶಿವರಾಮ ಕಾರಂತ್ ಲೇಔಟ್ ಅನ್ನು ಫೈನಲ್ ಮಾಡಿದ್ದಾರೆ" ಎಂದಿದ್ದಾರೆ.

ಡಾ ಶಿವರಾಮ ಕಾರಂತ್ ಲೇಔಟ್ 3,546 ಎಕರೆಗಳನ್ನು ಒಳಗೊಂಡಿದೆ, 17 ಹಳ್ಳಿಗಳಲ್ಲಿ ವ್ಯಾಪಿಸಿದೆ. ಸೈಟ್ ಹಂಚಿಕೆಗಾಗಿ ಅಧಿಸೂಚನೆಯೊಂದಿಗೆ ಮುಂದುವರಿಯಲು ಕರ್ನಾಟಕ ಹೈಕೋರ್ಟ್‌ನಿಂದ ಹಸಿರು ನಿಶಾನೆಗೆ ಕಾಯುತ್ತಿದೆ. ಇಂಡಿಯನ್ ರೇಸಿಂಗ್ ಲೀಗ್ ಈವೆಂಟ್‌ಗಳು ಮತ್ತು ಫಾರ್ಮುಲಾ 4-ಸಂಬಂಧಿತ ಈವೆಂಟ್‌ಗಳನ್ನು ಇಲ್ಲಿ ಆಯೋಜಿಸುವ ಸಾಧ್ಯತೆಯಿದೆ ಎಂದು ಮೋಟಾರ್‌ಸ್ಪೋರ್ಟ್ ತಜ್ಞರು ಹೇಳಿದ್ದಾರೆ.
ಬಿಡಿಎ ಜೊತೆಗೆ ರೇಸಿಂಗ್ ಈವೆಂಟ್ ಸಂಘಟಕರು 5 ವರ್ಷಗಳ ಒಪ್ಪಂದವನ್ನು ಮಾಡಿಕೊಳ್ಳಲು ಮುಂದಾಗಿದ್ದಾರೆ. ಅಗತ್ಯವಿದ್ದರೆ ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬಹುದು ಮತ್ತು ವರ್ಷಕ್ಕೆ ಎರಡು ಬಾರಿ ಕೆಲವು ದಿನಗಳವರೆಗೆ ಸ್ಥಳಾವಕಾಶದ ಅಗತ್ಯವಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೂನ್ 6 ರಂದು ವಿಚಾರಣೆ
ಡಾ.ಶಿವರಾಮ ಕಾರಂತ ಲೇಔಟ್‌ಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿದೆ. ಲೇಔಟ್‌ನಲ್ಲಿ ಒಟ್ಟು 34,000 ನಿವೇಶನಗಳು ಬರುತ್ತಿದ್ದು, ಸುಮಾರು 10,000 ಸಾರ್ವಜನಿಕರಿಗೆ ಹಂಚಿಕೆಯಾಗಲಿದೆ. ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡುವವರೆಗೆ ಈ ಕುರಿತು ಸೂಚನೆ ನೀಡುವಂತಿಲ್ಲ.












Click it and Unblock the Notifications