ಫೆ.24ರಂದು ಬೆಂಗಳೂರಿನಲ್ಲಿ ಪವರ್ ಕಟ್ ಶಾಕ್; ಎಲ್ಲೆಲ್ಲಿ ಕಡಿತ?
ಬೆಂಗಳೂರು, ಫೆಬ್ರವರಿ 24: ರಾಜಧಾನಿ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ ಸಮಸ್ಯೆ ದಿನವೂ ಆಗುತ್ತಲೇ ಇದೆ. ಬೇಸಿಗೆ ಆರಂಭವಾಗಿದ್ದು, ಜನರು ವಿದ್ಯುತ್ ಕಡಿತವಾದಾಗ ತೊಂದರೆ ಅನುಭವಿಸಬೇಕಾಗುತ್ತದೆ. ಅದರಲ್ಲೂ ಮಧ್ಯಾಹ್ನದ ವೇಳೆ ವಿಪರೀತ ಸೆಖೆ ಮತ್ತು ರಾತ್ರಿ ಸೊಳ್ಳೆ ಕಾಟಕ್ಕೆ ಫ್ಯಾನ್ ಇಲ್ಲದೇ ಮಲಗಲು ತೊಂದರೆಯಾಗುತ್ತದೆ.
ಇದರ ನಡುವೆ ನಗರದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಕಾಮಗಾರಿಗಳ ಹೆಸರಿನಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದೆ. ಈಗ ಫೆಬ್ರವರಿ 24ರ ಗುರುವಾರದಂದು ಮತ್ತೆ ಬೆಂಗಳೂರಿನ ಹಲವೆಡೆ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಡಿತ ಮಾಡಲು ಬೆಸ್ಕಾಂ ಮುಂದಾಗಿದೆ. ಹೀಗಾಗಿ ನಗರದ ಯಾವ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಇರಲಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಇಸ್ರೋ ಲೇಔಟ್, ಜಯನಗರ 8ನೇ ಬ್ಲಾಕ್, ಬಸವೇಶ್ವರ ನಗರ, ಟೀಚರ್ಸ್ ಕಾಲೋನಿ, ಬೊಮ್ಮನಹಳ್ಳಿ ಸೇರಿದಂತೆ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಪೂರ್ವ ವಲಯ
ಗುರುವಾರ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಇಂದಿರಾ ಗಾಂಧಿ ನಗರ, ರಾಮನಾಜಪ್ಪ ಲೇಔಟ್, ದೂರವಾಣಿ ನಗರ, ಕೆ.ಜಿ. ಪುರ ಮುಖ್ಯ ರಸ್ತೆ, ಹೊಯ್ಸಳ ನಗರ, ಪೊಲೀಸ್ ಠಾಣೆ, ಆರ್.ಎಂ. ಸಾಮಿಲ್, ಕುನ್ನಪ ಟಿಸಿ, ಡೈಮಂಡ್ ಇಂಟರ್‌ನ್ಯಾಷನಲ್ ಅಕಾಡೆಮಿ ರಸ್ತೆ, ಬಂದಾ ಟಿಸಿ, ಜೋಗುಪಾಳ್ಯ ಮುಖ್ಯ ಚಾನೆಲ್ ರಸ್ತೆ, ಇಲ್ಪೆ ತೋಪು ಕೇಂಬ್ರಿಡ್ಜ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ತಿಮ್ಮಯ್ಯ ಗಾರ್ಡನ್, ಮರಿಯಮ್ಮ ದೇವಸ್ಥಾನ ರಸ್ತೆ, ಉಮರ್ ನಗರ, ಚಾಣಾಕ್ಯ ಲೇಔಟ್, ನಾರಾಯಣಪುರ ಕ್ರಾಸ್ ಬಳಿ ವಿದ್ಯುತ್ ಇರುವುದಿಲ್ಲ.
ಪಶ್ಚಿಮ ವಲಯ:
ಬೆಳಗ್ಗೆ 10:30 ರಿಂದ ಸಂಜೆ 7 ಗಂಟೆಯವರೆಗೆ ವಿಡಿಯಾ ಲೇಔಟ್, ಗಂಗೊಂಡನಹಳ್ಳಿ, ಗಂಗೊಂಡನಹಳ್ಳಿ ಹಾಲಿ ಬಿಸಿಸಿ ಲೇಔಟ್, ಅತ್ತಿಗುಪ್ಪೆ ಸರ್ಕಾರಿ ಕಾಲೇಜ್ ಸುತ್ತಮುತ್ತ, ಆಶಾ ಜ್ಯೋತಿ ಸಂಜಯ್ ಗಾಂಧಿ ನಗರ 1ನೇ ಕ್ರಾಸ್, 5ನೇ ಕ್ರಾಸ್, 3ನೇ ಕ್ರಾಸ್, SBI ಸ್ಟಾಫ್ ಕಾಲೋನಿ ಅಂಚೆ ಕಚೇರಿ, ಬಸವೇಶ್ವರನಗರ 15ನೇ ಎ ಮೇನ್, 2ನೇ ಎ, ಬಿ ಮತ್ತು ಸಿ ಕ್ರಾಸ್, ಬಸವೇಶ್ವರನಗರ ಎನ್‌ಎಚ್‌ಸಿಎಸ್ ಲೇಔಟ್ 1ನೇ ಮುಖ್ಯ ರಸ್ತೆ, 2ನೇ ಮುಖ್ಯರಸ್ತೆ, 3ನೇ ಮುಖ್ಯ ಮತ್ತು 4ನೇ ಮುಖ್ಯ ರಸ್ತೆ, ಟೀಚರ್ಸ್ ಕಾಲೋನಿ, ಅಶೋಕ ಆಸ್ಪತ್ರೆ ಸುತ್ತಮುತ್ತಲಿನ ಮತ್ತು ಜೆಸಿ ನಗರ ಸುತ್ತಮುತ್ತ, KGHS ಲೇಔಟ್, ಹಳೆಯ ಹೊರ ವರ್ತುಲ ರಸ್ತೆ, ಪಾಪರೆಡ್ಡಿಪಾಳ್ಯ, KK ಲೇಔಟ್, ಮೂಡಲಪಾಳ್ಯ ರಸ್ತೆ ಸುತ್ತಮುತ್ತ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಉತ್ತರ ವಲಯ
ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಜೆಪಿ ಪಾರ್ಕ್, ಎಚ್‌ಎಂಟಿ ಲೇಔಟ್, ಜಲದರ್ಶಿನಿ ಲೇಔಟ್, ಲಕ್ಷ್ಮಿ ಟೆಂಟ್, ಹೊಸ ಬಿಇಎಲ್ ರಸ್ತೆ, ಸೌಂದರ್ಯ ಲೇಔಟ್, ಶಿವಕೋಟೆ, ಮಧುಗಿರಿಹಳ್ಳಿ, ಡಿಬಿ ಕೆರೆ, ಮಾವಳ್ಳಿಪುರ, ಚಿಕ್ಕಬಾಣಾವರ ಹಳೆ ರೈಲ್ವೇ ಸ್ಟೇಷನ್ ರಸ್ತೆ, ಕೆರೆಗುಡ್ಡದಹಳ್ಳಿ, ದಾಸಪ್ಪನಪಾಳ್ಯ, ಡಿಎಕ್ಸ್ ಮ್ಯಾಕ್ಸ್ ಆಪಾರ್ಟ್ಮೆಂಟ್, ಎಸ್‌ಆರ್‌ಎಸ್ ಲೇಔಟ್, ಲೇಕ್ ವಿ ಗಾರ್ಡನ್, ಪೈಪ್ ಲೈನ್ ರಸ್ತೆ, ನಾರಾಯಣರೆಡ್ಡಿ, ಕಾಮಿನೇಟ್ ರಸ್ತೆ, ಶ್ರೀನಿಧಿ ಲೇಔಟ್, ಬಾಲಾಜಿ ಲೇಔಟ್, ಮಾರುತಿ ನಗರ, ರಾಘವೇಂದ್ರ ಕಾಲೋನಿ, ಗಂಗಾನಗರ, ಬಳ್ಳಾರಿ ಮುಖ್ಯ ರಸ್ತೆಯಲ್ಲಿ ಕರೆಂಟ್ ಇರುವುದಿಲ್ಲ.
ದಕ್ಷಿಣ ವಲಯ
ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಕೆ.ಆರ್ ರಸ್ತೆ, ಜಯನಗರ 8ನೇ ಬ್ಲಾಕ್, ಲಕ್ಷ್ಮಿ ರಸ್ತೆ, ಎಸ್.ಆರ್. ನಗರ, ಫೋರಂ ಸ್ಟಾರ್ ಬಜಾರ್, UCO ಬ್ಯಾಂಕ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಪೈಪ್ ಲೈನ್ ರಸ್ತೆ, ಯಾರಬ್ ನಗರ, ಆರ್.ಕೆ. ಲೇಔಟ್ 6ನೇ ಮತ್ತು 8ನೇ ಕ್ರಾಸ್, ಪ್ರಾರ್ಥನಾ ಶಾಲೆ, ಎಂ.ಕೆ.ಪಿ ರಸ್ತೆ, ಮಾರ್ಥಾಸ್ ಆಸ್ಪತ್ರೆ ರಸ್ತೆ, ಉತ್ತರಹಳ್ಳಿ ವೃತ್ತ, ಸರ್ಕಾರಿ ಆಸ್ಪತ್ರೆ ಉತ್ತರಹಳ್ಳಿ, ಭುವನಪ್ಪ ಲೇಔಟ್, ಉಮಿಯಾ, ಐಡಿಎಕ್ಸ್ಎಲ್, ಕೃಷ್ಣನಗರ, ಎಸ್‌ಜಿ ಪಾಳ್ಯ 1, 2 ಮತ್ತು 3ನೇ ಕ್ರಾಸ್, ವೆಂಕಟೇಶ್ವರ ಲೇಔಟ್, ಅಶ್ವಥ್ ನಗರ, ಕಾವೇರಪ್ಪ ಲೇಔಟ್, ಪಾಣತ್ತೂರು ಮುಖ್ಯ ರಸ್ತೆ, ನ್ಯೂ ಹಾರಿಜನ್ ಕಾಲೇಜು ರಸ್ತೆ, ವಿಕ್ಟರ್ ರಸ್ತೆ, ದೇವರಬಿಸನಹಳ್ಳಿ ಸಕ್ರಾ ಆಸ್ಪತ್ರೆ ರಸ್ತೆ, ಬೊಮ್ಮನಹಳ್ಳಿ ಹತ್ತಿರ ಓ&ಎಂ, ಅಗ್ನಿಶಾಮಕ ಠಾಣೆಗೆ ಇಬ್ಲೂರ್ ಸಿಗ್ನಲ್, ಸರ್ಜಾಪುರ ರಸ್ತೆ ಸುತ್ತಮುತ್ತ ವಿದ್ಯುತ್ ಸಮಸ್ಯೆ ತಲೆದೋರಲಿದ್ದು, ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

ಬೆಂಗಳೂರಿನ ಜನರಿಗೆ ವಿದ್ಯುತ್ ಕಡಿತ ಸಮಸ್ಯೆ ಹೊಸದಲ್ಲ. ಕಳೆದ ಹಲವಾರು ತಿಂಗಳಿನಿಂದ, ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ. ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ (ವರ್ಕ್ ಫ್ರಂ ಹೋಮ್) ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.
ದಿನದಲ್ಲಿ ಒಂದೆರೆಡು ಗಂಟೆಗಳಾದರೆ ಅಷ್ಟೊಂದು ಕಷ್ಟವೆನಿಸದು. ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ. ಅಲ್ಲದೇ ಕೇವಲ ಒಂದು ದಿನ ಮಾತ್ರವಾಗಿದ್ದರೂ ಹೇಗೋ ಸಾಧ್ಯವಿತ್ತು. ಆದರೆ ಕಳೆದ ಕೆಲವು ತಿಗಳುಗಳಿಂದ ವಿದ್ಯುತ್ ಕಡಿತ ಸಮಸ್ಯೆಯಾಗಿದ್ದು, ಬೆಸ್ಕಾಂನ ಈ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
-
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications