ಪಿಎಫ್ಐ ಮತ್ತದರ 8 ಅಂಗಸಂಸ್ಥೆ ಕಚೇರಿಗಳಿಗೆ ಬೀಗ ಹಾಕಲು ಆದೇಶ: ಕೇಸ್‌ಗಳ ವಿವರ
ಬೆಂಗಳೂರು, ಸೆಪ್ಟೆಂಬರ್ 29: ಬೆಂಗಳೂರಿನಲ್ಲಿರುವ ಪಿಎಫ್‌ಐ ಹಾಗೂ ಅದರ 8 ಅಂಗ ಸಂಸ್ಥೆಗಳನ್ನು ಬೀಗಮುದ್ರೆ ಹಾಕುವಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶವನ್ನು ಮಾಡಿದ್ದಾರೆ.
ಕೇಂದ್ರ ಸರ್ಕಾರ ಪಿಎಫ್‌ಐ ಹಾಗೂ ಅದರ 8 ಅಂಗಸಂಸ್ಥೆಗಳನ್ನು ನಿಷೇಧ ಸೆ. 28ರಂದು ಆದೇಶವನ್ನು ಮಾಡಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಆಕ್ಟೀವ್ ಆಗಿದ್ದಾರೆ. ಕೇಂದ್ರ ಸರ್ಕಾರ ನಿಷೇಧವನ್ನು ಮಾಡಿರುವ ಸಂಘಟನೆಗಳ ಕಚೇರಿಯನ್ನು ಬಂದ್ ಮಾಡಲು ಮುಂದಾಗಿದೆ. ಇದರಿಂದಾಗಿಯೇ ಬೆಂಗಳೂರು ನಗರದಲ್ಲಿರುವ ಶಾಖಾ ಕಚೇರಿಗಳಿಗೆ ಬೀಗಮುದ್ರೆ ಹಾಕಲು ಬೆಂಗಳೂರು ನಗರ ಪೊಲೀಸ್ ಆಯುಕ್ತರರಾದ ಪ್ರತಾಪ್ ರೆಡ್ಡಿ ಆದೇಶವನ್ನು ಮಾಡಿದ್ದಾರೆ.
ಬೆಂಗಳೂರಿನ ಜೆ.ಸಿ.ನಗರದಲ್ಲಿ ಪಿಎಫ್ಐ ಕೇಂದ್ರ ಕಚೇರಿಯಿದ್ದು ಈಗಾಗಲೇ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಇನ್ನುಳಿದ ಏಳು ಕಚೇರಿಗಳಲ್ಲಿ ಎರಡು ಕಚೇರಿಗಳು ಹಲವು ವರ್ಷಗಳಿಂದ ಬಾಗಿಲು ತೆರೆದಿಲ್ಲ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇನ್ನುಳಿದ ಬಾಕಿ ಐದು ಕಚೇರಿಗಳಿಗೆ ಬೀಗ ಹಾಕಲು ನಗರ ಪೊಲೀಸರು ಸಿದ್ಧತೆ ನಡೆಸಿಕೊಂಡಿದ್ದು ಸಂಜೆಯೊಳಗೆ ಎಲ್ಲಾ ಕಚೇರಿಗಳಿಗೆ ಬೀಗ ಬೀಳುವುದು ಗ್ಯಾರಂಟಿಯಾಗಿದೆ.

ಈ ಸಂಘಟನೆಗಳಿಗೂ ನಿಷೇಧ
ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ರಿಹಾಬ್ ಇಂಡಿಯಾ ಫೌಂಡೇಶನ್, ನ್ಯಾಷನಲ್ ಕಾನ್ಫೆಡರೇಷನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜ್ಯೂನಿಯರ್ ಫ್ರಂಟ್, ಎಂಪವರ್ ಆಫ್ ಇಂಡಿಯಾ ಸೇರಿದಂತೆ ಎಂಟು ಸಂಘಟನೆಗಳನ್ನು ನಿಷೇಧ ಮಾಡಿದೆ. ಈ ಸಂಘಟನೆಗೆ ಸೇರಿದ ಕಚೇರಿಗಳನ್ನು ಬೆಂಗಳೂರಿನಲ್ಲಿ ಮುಚ್ಚಲಾಗಿದೆ.

ಪಿಎಫ್ಐ ರಕ್ತ ಚರಿತ್ರೆ ಏನು?
ಪಿಎಫ್ಐ ಅನ್ನು 2006 ರಲ್ಲಿ ಸ್ಥಾಪಿನೆ ಮಾಡಲಾಗಿದೆ. ಈ ಸಂಘಟನೆಯ ವಿರುದ್ದ 322 ಪ್ರಕರಣಗಳು ದಾಖಲಾಗಿವೆ. 18, ಕೊಲೆ, 3 ಕೊಲೆ ಯತ್ನ ಸೇರಿದಂತೆ ಗಲಭೆ, ಗಲಾಟೆ, ದೊಂಬಿ ಸೇರಿದಂತೆ 322 ಪ್ರಕರಣಗಳು ದಾಖಲಾಗಿವೆ. 2011ರಲ್ಲಿ ಹುಣಸೂರಿನ ಇಬ್ಬರು ಬಿಬಿಎಂ ವಿದ್ಯಾರ್ಥಿಗಳನ್ನು ಮೈಸೂರಿನಲ್ಲಿ ಕಿಡ್ನ್ಯಾಪ್ ಮಾಡಿ ಬೆಂಗಳೂರಿನಲ್ಲಿ ಕೊಲೆ ಪ್ರಕರಣದಲ್ಲಿ ಸಂಘಟನೆ ಕೈವಾಡವಿತ್ತು. 2016ನಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಮೈಸೂರಿನ ರಾಜು ಕೊಲೆ, 2016 ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ರುದ್ರೇಶ್ ಕೊಲೆ.
ಅದೇ ವರ್ಷ ಉಡುಪಿಯಲ್ಲಿ ನಡೆದ ಪ್ರವೀಣ್ ಪೂಜಾರಿ ಹತ್ಯೆ. 2017 ರಲ್ಲಿ ದಕ್ಷಿಣ ಕನ್ನಡದ ಶರತ್ ಮಡಿವಾಳ, 2019ರಲ್ಲಿ ಶಾಸಕ ತನ್ವೀರ್ ಸೇಠ್ ಮೇಲೆ ಮೈಸೂರಿನಲ್ಲಿ ಹಲ್ಲೆ ಮಾಡಿ ಕೊಲೆ ಯತ್ನ ಪ್ರಕರಣ. ಈ ವರ್ಷ ಶಿವಮೊಗ್ಗದ ಹರ್ಷ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಹಾಗೂ ಬೆಂಗಳೂರಿನ ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ಗಲಭೆಯಲ್ಲಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಶಾಸಕರ ಮನೆಗೆ ಬೆಂಕಿಯಿಟ್ಟ ಪ್ರಕರಣ
ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನಾಗಿದ್ದ ಶಿವಾಜಿನಗರದ ರುದ್ರೇಶ್‌ನನ್ನು 2016 ಬೆಳ್ಳಂ ಬೆಳಗ್ಗೆ ಕೊಚ್ಚಿಕೊಲೆ ಮಾಡಲಾಗಿತ್ತು. ಕೊಲೆಗಾರರು ಕೇರಳದಲ್ಲಿ ಟ್ರೈನಿಂಗ್ ಪಡೆದುಕೊಂಡು ಬಂದಿದ್ದರು. ಆರೋಪಿಗಳ ಜೊತೆಗೆ ನೇರವಾದ ಲಿಂಕ್ ಪಿಎಫ್‌ಐ ಹೊಂದಿತ್ತು ಎಂದು ತನಿಖೆಯ ವೇಳೆಯಲ್ಲಿ ತಿಳಿದುಬಂದಿತ್ತು. ಇನ್ನು ಕೆಜಿ ಹಳ್ಳಿ ಮತ್ತು ಡಿಜಿ ಹಳ್ಳಿ ನಡೆದ ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮನೆಗೂ ಬೆಂಕಿಯನ್ನು ಹಚ್ಚಲಾಗಿತ್ತು. ಈ ಘಟನೆಯಲ್ಲಿಯೂ ಪಿಎಫ್‌ಐ ಕಾರ್ಯಕರ್ತರು ಭಾಗಿಯಾಗಿದ್ದರು. ಇದರಿಂದಾಗಿ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ಆದೇಶವನ್ನು ಪೊಲೀಸರು ಪಾಲಿಸುತ್ತಿದ್ದಾರೆ.

ಸಂಘಟನೆಗಳ 8 ಕಚೇರಿಗೆ ಬೀಗ
ಬೆಂಗಳೂರಿನ ಜೆ.ಸಿ.ನಗರದಲ್ಲಿ ಪಿಎಫ್ಐ ಕೇಂದ್ರ ಕಚೇರಿಯಿದ್ದು ಈಗಾಗಲೇ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಇನ್ನುಳಿದ ಏಳು ಕಚೇರಿಗಳಲ್ಲಿ ಎರಡು ಕಚೇರಿಗಳು ಹಲವು ವರ್ಷಗಳಿಂದ ಬಾಗಿಲು ತೆರೆದಿಲ್ಲ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇನ್ನುಳಿದ ಬಾಕಿ ಐದು ಕಚೇರಿಗಳಿಗೆ ಬೀಗ ಹಾಕಲು ನಗರ ನಗರ ಪೊಲೀಸ್ ಆಯುಕ್ತರ ಆದೇಶದಂತೆ ಪೊಲೀಸರು ಬೀಗವನ್ನು ಹಾಕಿದ್ದಾರೆ.












Click it and Unblock the Notifications