ಸ್ಥಿರಾಸ್ತಿ ಮಾರ್ಗದರ್ಶಿ ದರ: ಅಧಿಕಾರಿಗಳು ಆಡಿದ್ದೇ ಆಟ!

ಬೆಂಗಳೂರು, ಸೆಪ್ಟೆಂಬರ್ 19: ಸ್ಥಿರಾಸ್ತಿ ನೋಂದಣಿಗಾಗಿ ಈಗಾಗಲೇ ದರ ಪ್ರಕಟವಾಗಿದೆ, ಆದರೆ ದರಪಟ್ಟಿ ಪರಿಷ್ಕರಣೆಯಲ್ಲಿ ತಿಳಿಸಿರುವಂತೆ ದರ ವಸೂಲಿಮಾಡುತ್ತಿದ್ದಾರೆಯೇ ಖಂಡಿತ ಇಲ್ಲ, ಅಧಿಕಾರಿಗಳು ವಿಧಿಸಿದ್ದೇ ದರ ಅವರು ಆಡಿದ್ದೇ ಆಟ ಎನ್ನುವಂತಾಗಿದೆ.

ಈ ಮೊದಲು ತಿಳಿಸಿರುವಂತೆ ಶೇ.10-20 ಪಟ್ಟು ಏರಿಕೆ ಪ್ರಸ್ತಾಪಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚಳ ಮಾಡಿದೆ, ಈ ರೀತಿ ದರ ಏರಿಕೆ ಮಾಡಿರುವ ಮುದ್ರಾಂಕ ಇಲಾಖೆ ಹಾಗೂ ನೋಂದಣಿ ಇಲಾಖೆ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ನಿಯಮದಂತೆ ನಡೆದುಕೊಳ್ಳುವುದಾದರೆ ಹಿಂದಿನ ಮಾರ್ಗಸೂಚಿ ದರವನ್ನು ಮೂಲ ಆಧಾರವಾಗಿಟ್ಟುಕೊಂಡು ಪರಿಷ್ಕೃತ ದರ ಇಗದಿ ಮಾಡಬೇಕು. ಇದನ್ನು ಆಯಾ ಪ್ರದೇಶಗಳನ್ನಾಧರಿಸಿ ಸರಾಸರಿ ದರವನ್ನು ಪರಿಗಣಿಸಿದರೂ, ವಸತಿ ಮತ್ತು ವಸತಿಯೇತರ ಬಾಬ್ತಿನಲ್ಲಿ ಪ್ರತ್ಯೇಕ ದರ ನಮೂದು ಮಾಡಬೇಕು ಆದರೆ ಇದ್ಯಾವುದನ್ನೂ ಇಲಾಖೆ ಮಾಡಿಲ್ಲ. ವಾಣಿಜ್ಯ ಉದ್ದೇಶದ ದರಗಳನ್ನು ನಿಗದಿ ಮಾಡಿ ವಸತಿ ಕಟ್ಟಡಗಳಿಗೆ ಅನ್ವಯಿಸಲೆಂದೇ ಪರಿಷ್ಕರಣೆ ಮಾಡಿದಂತೆ ಎಂಬ ಆರೋಪ ವ್ಯಕ್ತವಾಗಿದೆ.

ಆಯಾ ಬಡಾವಣೆ , ಪ್ರಮುಖ ರಸ್ತೆ ಆಧರಿಸಿ ಸಿದ್ಧಪಡಿಸಿರುವ ಕರಡು ಪಟ್ಟಯಲ್ಲಿ ಪ್ರಸ್ತಾಪಿಸಿರುವ ದರವನ್ನು ನಮೂದು ಮಾಡದೆ ಅವೈಜ್ಞಾನಿಕ ಕ್ರಮ ಅನುಸರಿಸಲಾಗಿದೆ. ಇದರಿಂದ ಮಾರ್ಗಸೂಚಿ ದರವನ್ನು ಬೇಕೆಂದೇ ಹಲವು ಪಟ್ಟು ಹೆಚ್ಚಿಸಿ ಅದನ್ನು ಅಧಿಕೃತ ಮಾಡುವ ಕಾರ್ಯವನ್ನು ಅಧಿಕಾರಿಗಳು ಪರೋಕ್ಷವಾಗಿ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.

ಬಿ ಖಾತಾ ಸ್ವತ್ತುಗಳಿಗೆ ದರ ದುಪ್ಪಟ್ಟು

ಬಿ ಖಾತಾ ಸ್ವತ್ತುಗಳಿಗೆ ದರ ದುಪ್ಪಟ್ಟು

ಮಾರ್ಗಸೂಚಿ ದರ ಪಟ್ಟಿ ಪರಿಷ್ಕರಣೆ ವೇಳೆ ಬಿಬಿಎಂಪಿ ವ್ಯಾಪ್ತಿಯ ಬಿ ಖಾತಾ ಸ್ವತ್ತುಗಳಿಗೆ ದುಪ್ಪಟ್ಟು ಮೌಲ್ಯ ನಿಗದಿ ಮಾಡುವ ಹೊಸ ಮಾನದಂಡ ರೂಪಿಸಲಾಗಿದೆ. ಈವರೆಗೆ ಎಲ್ಲಾ ಸ್ವತ್ತುಗಳಿಗೂ ಒಂದೇ ರೀತಿಯ ದರ ನಿಗದಿ ಮಾಡಲಾಗುತ್ತಿತ್ತು. ಈಗ ಬಿ ಖಾತಾ ಸ್ವತ್ತಿನ ದುಪ್ಪಟ್ಟು ಮೌಲ್ಯ ಲೆಕ್ಕ ಹಾಕಿ ದರ ನಿಗದಿಯಾಗಿರುವುದರಿಂದ ಇದು ಹೊರೆಯಾಗಿ ಪರಿಣಮಿಸಿದೆ.

ಆಕ್ಷೇಪಣೆ ಸಲ್ಲಿಸುವ ಅವಧಿ ಮುಗಿಸಿದೆ

ಆಕ್ಷೇಪಣೆ ಸಲ್ಲಿಸುವ ಅವಧಿ ಮುಗಿಸಿದೆ

ಈಗಿರುವ ದರ ಪರಿಷ್ಕರಣೆಗೆ ಆಕ್ಷೇಪಣೆ ಸಲ್ಲಿಸಲು ಸೆ.18 ಕೊನೆಯ ದಿನಾಂಕವಾಗಿತ್ತು, ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಅ.1ರಿಂದ ಅಧಿಕೃತವಾಗಿ ಜಾರಿಗೆ ತರಲು ಮುದ್ರಾಂಕ ಇಲಾಖೆ ಆಲೋಚನೆ ನಡೆಸಿದೆ.

ಒಂದೇ ಬಡಾವಣೆಯಲ್ಲಿ ಅಜಗಜಾಂತರ ದರ ನಿಗದಿ

ಒಂದೇ ಬಡಾವಣೆಯಲ್ಲಿ ಅಜಗಜಾಂತರ ದರ ನಿಗದಿ

ಒಂದೇ ಬಡಾವಣೆಯಲ್ಲಿ ವಾಣಿಜ್ಯ ಪ್ರದೇಶ ಹೊರತುಪಡಿಸಿ ಉಳಿದ ಸ್ಥಳಗಳಿಗೆ ಅಜಗಜಾಂತರ ದರ ನಿಗದಿ ಮಾಡಲಾಗಿದೆ. ಅಕ್ಕಪಕ್ಕದ ರಸ್ತೆಗಳ ಸ್ವತ್ತುಗಳಿಗೆ ಒಂದೇ ದರ ಪರಿಗಣಿಸದೆ ಭಿನ್ನ ಮೌಲ್ಯಕ್ಕೆ ಆದ್ಯತೆ ನೀಡಲಾಗಿದೆ. ಕೆಲವೆಡೆ ಶೇ.50ರಷ್ಟು ದರ ಹೆಚ್ಚಿಸಿ ಒಂದು ವರ್ಗಕ್ಕೆ ಲಾಭ ಮಾಡುವ ಹುನ್ನಾರ ನಡೆದಿದೆ ಎನ್ನಲಾಗಿದೆ.

ಸ್ಥಿರಾಸ್ತಿ ನೋಂದಣಿ ಶೇ.10-20 ದರ ಹೆಚ್ಚಳವಾಗಬೇಕಿತ್ತು

ಸ್ಥಿರಾಸ್ತಿ ನೋಂದಣಿ ಶೇ.10-20 ದರ ಹೆಚ್ಚಳವಾಗಬೇಕಿತ್ತು

ಸ್ಥೀರಾಸ್ತಿ ನೋಂದಣಿಗಾಗಿ ಪ್ರಕಟಿಸಿರುವ ಮಾರ್ಗಸೂಚಿ ದರ ಪಟ್ಟಿ ಪರಿಷ್ಕರಣೆಯಲ್ಲಿ ತಿಳಿಸಿರುವಂತೆ ಶೇ.10-20 ಮಾತ್ರ ದರ ಹೆಚ್ಚಳವಾಗಬೇಕಿತ್ತು. ಆದರೆ ಹಲವು ಪಟ್ಟು ಹೆಚ್ಚಳ ಮಾಡಿದೆ. ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಈ ನಡೆಗೆ ಸಾರ್ವಜನಿಕ ವಲಯದಿಂದ ಭಾರಿ ವಿರೋಧ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+