• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯಾದ್ಯಂತ ಚಿತ್ರ ಪ್ರದರ್ಶನ ಬಂದ್: ಹೊಸ ಸಿನಿಮಾ ಬಿಡುಗಡೆ ಸದ್ಯಕ್ಕಿಲ್ಲ

|

ಬೆಂಗಳೂರು, ಮಾರ್ಚ್ 09: ಡಿಜಿಟಲ್ ಸೇವೆ ಪೂರೈಕೆದಾರರು ಮತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ನಡುವೆ ಉಂಟಾಗಿದ್ದ ಬಿಕ್ಕಟ್ಟು ತಾರಕಕ್ಕೇರಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಯುಎಫ್ಒ ಮತ್ತು ಕ್ಯೂಬ್ ಸಂಸ್ಥೆಗಳು ಹೆಚ್ಚಿನ ದರ ನಿಗದಿ ಮಾಡಿರುವುದನ್ನು ವಿರೋಧಿಸಿ ಇಂದು ಯಾವುದೇ ಸಿನಿಮಾ ಪ್ರದರ್ಶಿಸದಿರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೀರ್ಮಾನಿಸಿದೆ.

ಈಗಿರುವ ದರದಲ್ಲಿ ಶೇ.25 ರಷ್ಟು ಕಡಿಮೆ ಮಾಡುವಂತೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಬೇಡಿಕೆ ಸಲ್ಲಿಸಿತ್ತು. ಇದಕ್ಕೊಪ್ಪದ ಡಿಜಿಟಲ್ ಸೇವೆ ಪೂರೈಕೆದಾರರು, ಕೇವಲ ಶೇ.9ದರ ಕಡಿಮೆ ಮಾಡುವುದಾಗಿ ತಿಳಿಸಿದ್ದರು. ಇದನ್ನು ವಿರೋಧಿಸಿ ಮಾ.2ರಿಂದ ಯಾವುದೇ ಹೊಸ ಸಿನಿಮಾ ಬಿಡುಗಡೆ ಮಾಡದಂತೆ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರ ನಿರ್ಮಾಪಕರು ತೀರ್ಮಾನಕ್ಕೆ ಬಂದಿದ್ದರು.

Cinemas go strike : No movie today

ಕೊನೆಗೂ ಸಮಸ್ಯೆ ಬಗೆಹರಿಯದ ಕಾರಣ ಈ ಶುಕ್ರವಾರವೂ ಕನ್ನಡ ಸೇರಿದಂತೆ ಸಕ್ಷಿಣ ಭಾರತದ ಯಾವುದೇ ಹೊಸ ಚಿತ್ರಗಳು ತೆರೆಕಾಣುತ್ತಿಲ್ಲ. ಈಗಾಗಲೇ ತೆರೆಕಂಡಿರುವ ಟಗರ, ಪ್ರೀತಿಯ ರಾಯಭಾರಿ, ಪ್ರೇಮಬರಹ ಸಿನಿಮಾಕ್ಕೂ ಬಂದ್ ಬಿಸಿ ತಟ್ಟಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Seeking reduce in fees on digital service providing. Karnataka film exhibitors association will go on strike on March 9 against UFO and cube companies and cinemas will be closed for one day.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more