Christmas wishes: ವಾಟ್ಸಾಪ್, ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಿಸ್ಮಸ್ ಸ್ಟಿಕ್ಕರ್ ಶುಭಾಶಯ ಕಳುಹಿಸುವುದು ಸಿಂಪಲ್!
ಕ್ರಿಸ್ಮಸ್ ಹಬ್ಬಕ್ಕೆ ಶುಭಕೋರುವುದಕ್ಕೆ ಇಲ್ಲಿ ಸರಳ ವಿಧಾನಗಳನ್ನು ಪರಿಚಯಿಸಲಾಗಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆ. ಕ್ರೈಸ್ತ ಧರ್ಮದವರ ವಿಶೇಷ ಹಬ್ಬಗಳಲ್ಲಿ ಕ್ರಿಸ್ಮಸ್ ಸಹ ಒಂದಾಗಿದೆ. ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಆತ್ಮೀಯರಿಗೆ ಶುಭಕೋರುವ ಸಂದೇಶಗಳು, ವಾಟ್ಸಾಪ್ (WhatsApp, Instagram) ಹಾಗೂ ಇನ್‌ಸ್ಟಾಗ್ರಾಮ್ ಮೂಲಕ ಈ ಶುಭ ಸಂದೇಶ ಹಾಗೂ ಸ್ಟಿಕ್ಕರಗಳನ್ನು ಯಾವ ರೀತಿ ಹಂಚಿಕೊಳ್ಳಬಹುದು ಎನ್ನುವುದಕ್ಕೆ ಸಿಂಪಲ್ ವಿಧಾನ ಇಲ್ಲಿದೆ. ನೀವು ತುಂಬಾ ಕಸರತ್ತು ನಡೆಸದೆ WhatsApp, Instagram ನ ಮೂಲಕ ಕ್ರಿಸ್ಮಸ್ ಶುಭಾಶಯಗಳನ್ನು ಕೋರಬಹುದಾಗಿದೆ. ಅಲ್ಲದೆ ನೀವೂ ಸಹ ಕ್ರಿಸ್ಮಸ್ ಹಬ್ಬಕ್ಕೆ ಸ್ಟಿಕ್ಕರ್‌ಗಳನ್ನು ಕ್ರಿಯೇಟ್ ಮಾಡಬಹುದಾಗಿದೆ.
ಕ್ರಿಸ್ಮಸ್‌ಗೆ ನೀವು WhatsApp & Instagramನ ಮೂಲಕ ಶುಭಕೋರಬಹುದಾಗಿದೆ. ವರ್ಷಾಂತ್ಯದ ಸಂಭ್ರಮಾಚರಣೆ ಹಾಗೂ ಹೊಸ ವರ್ಷಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಹಾಗೂ ಆಕರ್ಷಕ ಸ್ಟಿಕ್ಕರ್‌ಗಳು ಸಹ ಇವೇ. ಅಲ್ಲದೆ ನಿಮ್ಮ ಆತ್ಮೀಯರ ಫೋಟೋಗಳನ್ನು ಬಳಸಿ ನೀವು ಸಹ ಸ್ಟಿಕ್ಕರ್ ಮಾಡಬಹುದು. ಈ ಎಲ್ಲಾ ಸರಳ ವಿಧಾನಗಳನ್ನು ಇಲ್ಲಿ ಹಂತ ಹಂತವಾಗಿ ವಿವರಿಸಲಾಗಿದೆ.

ಕ್ರಿಸ್ಮಸ್ ಹಬ್ಬಕ್ಕೆ ವಾಟ್ಸಾಪ್ ಮೂಲಕ ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಹೇಗೆ ?
ವಾಟ್ಸಾಪ್ ಮೂಲಕ ಸ್ಟಿಕ್ಕರ್ ಕಳುಹಿಸುವುದಕ್ಕೆ ಮೊದಲು ನೀವು ಪ್ಲೇ ಸ್ಟೋರ್‌ನಿಂದ ಕ್ರಿಸ್ಮಸ್ ಸ್ಟಿಕ್ಕರ್ ಪ್ಯಾಕ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
* ಪ್ಲೈಸ್ಟೋರ್‌ನಲ್ಲಿ ನಿಮ್ಮಿಷ್ಟದ ಕ್ರಿಸ್ಮಸ್ ಶುಭಾಶಯದ (WhatsApp Christmas sticker) ಸ್ಟಿಕ್ಕರ್ ಪ್ಯಾಕ್‌ಗಳನ್ನು ಸೆಲೆಕ್ಟ್ ಮಾಡಿ, ಡೌನ್‌ಲೋಡ್ ಅಂತ ಕೊಡಿ. ಇದಾದ ಮೇಲೆ ಪ್ಲಸ್ ಎಂದು ಕಾಣಿಸುವ ಸಿಂಬಲ್ (+) ಮೇಲೆ ಕ್ಲಿಕ್ ಮಾಡಿ. ಆಗ ಹಲವು ಸ್ಟಿಕ್ಕರ್‌ಗಳು ಹಾಗೂ ಶುಭಾಶಯ ಸಂದೇಶಗಳು ಅದರಲ್ಲಿ ಕಾಣಿಸುತ್ತದೆ. ಅದರ ಮೇಲೆ ಕಾಣುವ ವಾಟ್ಸಾಪ್‌ಗೆ ಸೇರಿಸಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಈ ರೀತಿ ಮಾಡಿದ ಮೇಲೆ ನಿಮ್ಮ ವಾಟ್ಸಾಪ್‌ನಲ್ಲೇ ಈ ಶುಭಾಶಯದ ಸ್ಟಿಕ್ಕರ್‌ಗಳು ಸೇರ್ಪಡೆಯಾಗುತ್ತವೆ. ವಾಟ್ಸಾಪ್ ಚಾಟ್ ತೆಗೆದು ಎಮೋಜ್ ಐಕಾನ್ ಮೇಲೆ ಕ್ಲಿಕ್ ಮಾಡಿ ವಾಟ್ಸಪ್ ಚಾಟ್‌ನ ಇಮೋಜಿ ಲೈನ್‌ನಲ್ಲಿ (ಇಮೋಜಿಗಳ ಭಾಗದಲ್ಲಿ) ನೀವು ಡೌನ್‌ಲೋಡ್ ಮಾಡಿಕೊಂಡ ಸ್ಟಿಕ್ಕರ್‌ಗಳು ಕಾಣಿಸಲಿವೆ. ವಾಟ್ಸಪ್ ಚಾಟ್‌ನಲ್ಲಿಯೇ ಈ ಸ್ಟಿಕ್ಕರ್‌ಗಳು ಕಾಣಿಸುತ್ತವೆ. ಕ್ರಿಸ್ಮಸ್ ಶುಭಾಶಯದ ಸ್ಟಿಕ್ಕರ್‌ಗಳನ್ನು ನಿಮ್ಮ ಇಷ್ಟದವರಿಗೆ, ಆತ್ಮೀಯರಿಗೆ ಹಾಗೂ ಸ್ನೇಹಿತರಿಗೆ ಸಾಮಾನ್ಯವಾಗಿ ಮೆಸೇಜ್ ಮಾಡುವಂತೆಯೇ ಸುಲಭವಾಗಿ ಕಳುಹಿಸಬಹುದಾಗಿದೆ.
ಬಲಭಾಗದ ಟ್ಯಾಬ್‌ಗೆ ಬದಲಾಯಿಸಿ. ಇಲ್ಲಿ, ಬಳಕೆದಾರರು ಹೊಸ ಕ್ರಿಸ್‌ಮಸ್ ಸ್ಟಿಕ್ಕರ್ ಸಂಗ್ರಹವನ್ನು ಕಾಣಬಹುದು.
ಕ್ರಿಸ್‌ಮಸ್ ಸ್ಟಿಕ್ಕರ್‌ಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಕಳುಹಿಸುವುದು ಹೇಗೆ ?
* ಇನ್‌ಸ್ಟಾಗ್ರಾಮ್ ಒಪನ್ ಮಾಡಿ, ಮೆಸೇಜ್ ಆಯ್ಕೆಗೆ ಹೋಗಿ
* ಇನ್‌ಸ್ಟಾ ಚಾಟ್‌ಗೆ ಹೋದ ಮೇಲೆ ಕಾಣುವ ಸ್ಟಿಕ್ಕರ್ ಐಕಾನ್ ಆಯ್ಕೆಗೆ ಹೋಗಿ
* ಇಲ್ಲಿ ಸ್ಟಿಕ್ಕರ್ ಹುಡುಕುವ ಕಾಲಂ ಒಪನ್ ಆಗುತ್ತದೆ.
* ಅಲ್ಲಿ ಕ್ರಿಸ್ಮಸ್ ವಿಶ್ಸ್ ಎಂದು ಟೈಪ್ ಮಾಡಿ, ಸ್ಟಿಕ್ಕರ್ ನೇರವಾಗಿ ನೀವು ಯಾರಿಗೆ ಶುಭಕೋರಬೇಕು ಎಂದುಕೊಂಡಿದ್ದೀರೋ ಅವರಿಗೆ ಹೋಗುತ್ತದೆ.
ನಿಮ್ಮ ಫೋಟೋ ಬಳಸಿ ಸ್ಟಿಕ್ಕರ್ ಮಾಡುವುದು ಹೇಗೆ ?
ನೀವು ಪ್ಲೇ ಸ್ಟೋರ್‌ನಿಂದ ಅಥವಾ ಯಾವುದೇ ಆ್ಯಪ್ ಡೋನ್‌ಲೋಡ್ ಮಾಡಿಕೊಳ್ಳದೆ ನೀವೇ ಸ್ಟಿಕ್ಕರ್‌ಗಳನ್ನು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ. ನಿಮ್ಮ ವಾಟ್ಸಾಪ್‌ನಲ್ಲಿಯೇ ಸ್ಟಿಕ್ಕರ್ ಮಾಡಿಕೊಳ್ಳುವುದಕ್ಕೆ ಆಪ್ಷನ್ ಇದೆ. ನೀವು ಯಾರಿಗೆ ಶುಭ ಸಂದೇಶ ಕಳುಹಿಸಬೇಕು ಎಂದುಕೊಂಡಿದ್ದೀರೋ ಅವರ ಚಾಟ್ ಬಾಕ್ಸ್‌ಗೆ ಹೋಗಿ. ಕೀಬೋರ್ಡ್‌ನ ಮೇಲೆ ಸ್ಟಿಕ್ಕರ್ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ. ಸರ್ಚ್ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ರಿಸ್ಮಸ್ ಶುಭಾಶಯ (WhatsApp Christmas sticker) ಎಂದು ಟೈಪ್ ಮಾಡಿ, ಆಗ ನಿಮಗೆ ನೂರಾರು ಸ್ಟಿಕ್ಕರ್‌ಗಳು ಕಾಣಿಸುತ್ತವೆ. ಅದರಲ್ಲಿ ನಿಮ್ಮ ಇಷ್ಟದ ಕ್ರಿಸ್ಮಸ್ ಶುಭಾಶಯದ ಸಂದೇಶಗಳನ್ನು ಕಳುಹಿಸಬಹುದು.












Click it and Unblock the Notifications