ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರೈಸ್ಟ್ ಸ್ಕೂಲ್: ಚಿತ್ರಗಳ ಮೂಲಕ ಸ್ವಾತಂತ್ರ್ಯೋತ್ಸವ ಆಚರಣೆ

|
Google Oneindia Kannada News

ಬೆಂಗಳೂರು, ಆಗಸ್ಟ್ 15: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಬೆಂಗಳೂರಿನ ಕ್ರೈಸ್ಟ್ ಸ್ಕೂಲ್ ಐಸಿಎಸ್ಇ ರಾಷ್ಟ್ರಮಟ್ಟದ 'ಹೊಸಚಿಗುರು ಕಲರೋಥಾನ್' ಸರಣಿ 14 ಆಯೋಜಿಸುವ ಮೂಲಕ ಲಕ್ಷಗಟ್ಟಲೆ ಬಣ್ಣಗಳ ಜತೆ ಆಚರಿಸಿತು.

ಕ್ರೈಸ್ಟ್ ಸ್ಕೂಲ್‌ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವವನ್ನು ವಿಶೇಷ ಆಚರಣೆಯನ್ನಾಗಿ ಆಚರಿಸಲಾಯಿತು. ಈ ವೇಳೆ ಚಿತ್ರಕಲೆಗಳಿಗೆ ಮರು ಜೀವ ತುಂಬಲು ಆಯೋಜಿಸಿದ್ದ ಕಲರೋಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೂರರಿಂದ 90 ವರ್ಷಗಳವರೆಗಿನ ವೃದ್ಧ, ಯುವ ಮತ್ತು ಮಕ್ಕಳು, ಪುರುಷರು ಹಾಗೂ ಮಹಿಳೆಯರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಪಾಲ್ಗೊಂಡು ಬಣ್ಣಗಳ ಮೂಲಕ ತಮ್ಮ ಭಾವನೆಗಳು ಮತ್ತು ಸೃಜನಶೀಲತೆಯನ್ನು ಚಿತ್ತಾರದ ಮೂಲಕ ವ್ಯಕ್ತಪಡಿಸಿದರು.

ಚಿತ್ರಕಲಾ ಉತ್ಸವಕ್ಕೆ ಸ್ಕೂಲ್‌ ಪ್ರಾಂಶುಪಾಲ ರೆವರೆಂಡ್ ಫಾದರ್ ನಿಲ್ಸನ್ ಡಿವಿ ಪಲ್ಲಿಸ್ಸೆರಿ ಸಿಎಂಐ ಉದ್ಘಾಟಿಸಿದರು. ಕಲರೋಥಾನ್ ಬ್ರೀಥ್ ಎಂಟರ್ಟೈನ್ ಮೆಂಟ್ ಸಂಸ್ಥೆಯ ಪರಿಕಲ್ಪನೆಯಾಗಿದೆ. ಉತ್ಸವವು ಕೆಲಡಿಯೊಸ್ಕೋಪ್ ಅನುಭವ, ಪ್ರದರ್ಶನ ಕಲೆಗಳು, ಫೈನ್ ಮತ್ತು ಸಾಂಪ್ರದಾಯಿಕ ಕಲೆಗಳು, ಅಡುಗೆ ಕಲೆಗಳು, ದೃಶ್ಯ ಮತ್ತು ಡಿಜಿಟಲ್ ಕಲೆ, ಕಲಾ ಅನುಸ್ಥಾಪನೆಗಳು, ಸಂವಹನ ಕಲೆ, ಮ್ಯಾಜಿಕ್ ಶೋ, ವೃತ್ತಿಪರ ಕಲಾವಿದರಿಂದ ಲೈವ್ ಪೇಂಟಿಂಗ್ ಮತ್ತು ಸಮಕಾಲೀನ ಕಲೆಗಳನ್ನು ಒಳಗೊಂಡಿತ್ತು.

Christ School ICSE School was Recorded School in Kalarothan

ಬ್ರೀಥ್ ಎಂಟರ್‌ಟೈನ್ಮೆಂಟ್ ನಿರ್ದೇಶಕ ಮತ್ತು ಆಯೋಜಕ ಕಿಶೋರ್ ಜೋಸೆಫ್ ಮಾತನಾಡಿ, "1947ರಿಂದ 2022ರವರೆಗೆ 75 ವರ್ಷಗಳ ಸ್ವಾತಂತ್ರ್ಯೋತ್ಸವವನ್ನು ಪ್ರತಿನಿಧಿಸುವ ಕೋವಿಡ್-19 ಒಳಗೊಂಡಂತಹ ಕ್ರೈಸ್ಟ್ ಶಾಲೆಯ 2,650 ಮಕ್ಕಳು ಚಿತ್ರಿಸಿದ 75 ಕೊಲಾಜ್‌ಗಳಳನ್ನು ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ಜನರನ್ನು ಒಗ್ಗೂಡಿಸಲು ಪ್ರತಿ ಮಕ್ಕಳಲ್ಲಿನ ಪ್ರತಿಭೆ ಅನಾವರಣಗೊಳಿಸಲು ಚಿತ್ರಕಲಾ ಸ್ಪರ್ಧೆಗೆ ಆಹ್ವಾನಿಸಲಾಗಿತ್ತು," ಎಂದರು.

ಮೂರು ತಲೆಮಾರುಗಳು ಒಂದೇ ವೇದಿಕೆಯಲ್ಲಿ

ಕ್ರೈಸ್ಟ್ ಸ್ಕೂಲ್ ಐಸಿಎಸ್ಇ ಪ್ರಾಂಶುಪಾಲ ರೆವರೆಂಡ್ ಫಾದರ್ ನಿಲ್ಸನ್ ಡೇವಿಸ್ ಪಲ್ಲಿಸ್ಸೆರಿ ಮಾತನಾಡಿ, ಹೊಸಚಿಗುರು ಶಿರ್ಷಿಕೆಯಡಿ ಹಮ್ಮಿಕೊಂಡಿದ್ದ ಈ ಕಲರೋಥಾನ್ ಕಾರ್ಯಕ್ರಮ ಮೂರು ತಲೆಮಾರುಗಳ ಜನರು, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನವಾಗಿತ್ತು. ಶಾಲಾ ವಲಯದಲ್ಲಿ ಅತ್ಯಂತ ದೊಡ್ಡ ಪೇಂಟಿಂಗ್ ಉತ್ಸವ ಆಯೋಜಿಸಿದ್ದಕ್ಕೆ 'ಎಕ್ಸಕ್ಲೂಸಿವ್ ಬುಕ್ ವರ್ಲ್ಡ ರೆಕಾರ್ಡ್' ಮತ್ತು ಕಿಂಗ್ಸಬುಕ್ ಆಫ್ ವಲ್ಡ್ ರೆಕಾರ್ಡ್ಸ ಸೇರುವ ನಿರೀಕ್ಷೆಯಲ್ಲಿದೆ. 300 ಶ್ರೇಷ್ಠ ಪೇಂಟಿಂಗ್ ಗಳನ್ನು ಖ್ಯಾತ ಕಲಾವಿದರು ಆಯ್ಕೆ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.

Christ School ICSE School was Recorded School in Kalarothan

ಕ್ರೈಸ್ಟ್ ಸ್ಕೂಲ್ ಐಸಿಎಸ್ಇ 2 ವಿಶ್ವ ದಾಖಲೆಗಳಿಗೆ ಪ್ರವೇಶ

ಈ ಬೃಹತ್ ಸಮುದಾಯ ಪೇಂಟಿಂಗ್ ಕಾರ್ಯಕ್ರಮದಲ್ಲಿ ಎಲ್ಲ ವಯೋಮಾನದವರ 3,600ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ವಿದ್ಯಾರ್ಥಿಗಳು ಗ್ರೇಡ್ 1ರಿಂದ ಗ್ರೇಡ್ 10, ಪೋಷಕರು, ಶಿಕ್ಷಕರು ಮತ್ತು ಅವರ ಕುಟುಂಬ ಎಂದು ವಿಭಾಗಿಸಲಾಗಿದೆ. ಕ್ರೈಸ್ಟ್ ಸ್ಕೂಲ್ ಬೆಂಗಳೂರಿನ 2,650 ಮಕ್ಕಳು ಭಾಗವಹಿಸಿದ್ದರು, ಅವರಿಂದ ಆಯ್ಕೆ ಮಾಡಿದ 75 ದೇಶಭಕ್ತಿ ಕಲಾಕೃತಿಗಳನ್ನು(ಕೋಲಾಜ್) 'ಅಮೇಜಿಂಗ್ ಬ್ರಿಲಿಯೆನ್ಸ್' ಶೀರ್ಷಿಕೆಗೆ ಆಯ್ಕೆಯಾಗಿವೆ. ಅವುಗಳನ್ನು ಸೋಮವಾರ ಸುದ್ದಗುಂಟೆ ಪಾಳ್ಯದಲ್ಲಿರುವ ಕ್ರೈಸ್ಟ್ ಶಾಲೆಯಲ್ಲಿ ಪ್ರದರ್ಶನಕ್ಕೆ ಇಡಲಾಯಿತು. ಅಲ್ಲದೇ ಕಲರೋಥಾನ್‌ನಲ್ಲಿ 5 ವಿಭಿನ್ನ ವಿಭಾಗಗಳ ಶ್ರೇಷ್ಠ 15 ವಿಜೇತರಿಗೆ ಫಾದರ್ ನಿಲ್ಸನ್ ಡೇವಿಸ್ ಅವರು ಸನ್ಮಾನಿಸಿದರು.

ಉಪ ಪ್ರಾಂಶುಪಾಲ ರೆವರೆಂಡ್ ಫಾದರ್ ಮಾರ್ಟಿನ್ ಒನಸ್ಸೆರಿಲ್ ಸಿಎಂಐ, ಫೈನಾನ್ಷಿಯಲ್ ಮ್ಯಾನೇಜರ್ ರೆವರೆಂಡ್ ಫಾದರ್ ರೆಗಿ ಕೂಡಪಟ್ಟು, ಸ್ಪೆಷಲ್ ಸ್ಕೂಲ್ ನಿರ್ದೇಶಕ ಫಾದರ್ ಫೆನಿಲ್ ಸಿಎಂಐ ಮತ್ತಿತರರು ಪಾಲ್ಗೊಂಡಿದ್ದರು.

English summary
Christ School ICSE School was Recorded School in Kalarothan 75th Independence day celebration in Christ School ICSE at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X