Cholera Spike: ಬೆಂಗಳೂರಿಗೆ ಮತ್ತೊಂದು ಆಘಾತ: 'ಕಾಲರಾ' ಉಲ್ಬಣ, ಎರಡೇ ವಾರದಲ್ಲಿ ಕೇಸ್ ಏರಿಕೆ
ಬೆಂಗಳೂರು, ಏಪ್ರಿಲ್ 04: ಉರಿವ ಬಿಸಿಲಿನ ತಾಪಮಾನ ಮತ್ತು ನೀರಿನ ಬಿಕ್ಕಟ್ಟಿಗೆ ಸಾಕ್ಷಿಯಾಗಿರುವ ರಾಜಧಾನಿ ಬೆಂಗಳೂರು ಮತ್ತೊಂದು ಆರೋಗ್ಯ ಬಿಕ್ಕಟ್ಟಿಗೆ ಸಾಕ್ಷಿ ಆಗುವ ಲಕ್ಷಣಗಳು ಕಂಡು ಬಂದಿದೆ. ಬೆಂಗಳೂರಿನಲ್ಲಿ 'ಕಾಲರಾ' (Cholera) ಉಲ್ಬಣಗೊಂಡಿದೆ.
ಹೌದು, ಬೆಂಗಳೂರಿನ ಹೃದಯ ಭಾಗವಾದ ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಒಬ್ಬ ವ್ಯಕ್ತಿಯಗೆ ಕಾಲರಾ ದೃಢಪಟ್ಟಿದೆ. ಪ್ರಕರಣ ವರದಿ ಆಗುತ್ತಿದ್ದಂತೆ ರೋಗಿ ಜೊತೆ ಒಡನಾಡ ಹೊಂದಿದ್ದ ಶಂಕಿತರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯ ಕನ್ಸಲ್ಟೆಂಟ್ ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಶ್ರೀಹರಿ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಶೇಕಡಾ 50ರಷ್ಟು ಕಾಲರಾ ಪ್ರಕರಣ ಸಂಖ್ಯೆಯಲ್ಲಿ ಏರಿಕೆ ಆಗಿದೆ. ದಿನಕ್ಕೆ ಸರಾಸರಿ ಕನಿಷ್ಠ 20 ಪ್ರಕರಣಗಳು ವರದಿ ಆಗುತ್ತಿವೆ. ಬೇಸಿಗೆಯ ಇಂತ ಸಂದರ್ಭದಲ್ಲಿ ಕಳಪೆ ನೈರ್ಮಲ್ಯ ಮತ್ತು ಕಲುಷಿತ ನೀರಿನ ಮೂಲಗಳು ನಗರದಲ್ಲಿ ಕಾಲರಾ ರೋಗ ಹೆಚ್ಚಾಗಲು ಪ್ರಮುಖ ಮತ್ತು ಪ್ರಾಥಮಿಕ ಕಾರಣ ಎಂದು ತಿಳಿಸಿದರು.
ಕಾಲರಾ ರೋಗಿಗಳ ದಾಖಲಾತಿ
ನಗರದ ಆಸ್ಪತ್ರೆಗಳಲ್ಲಿ ಕಾಲರಾ ರೋಗಿಗಳು ಚಿಕಿತ್ಸೆಯ ದಾಖಲಾತಿ ಪ್ರಮಾಣ ಶೇಕಡಾ 50ರಷ್ಟು ಏರಿಕೆ ಆಗಿದೆ. ತಿಂಗಳು ಒಂದರಿಂದ ಎರಡು ರೋಗಿಗಳು ಖಾಸಗಿ ಆಸ್ಪತ್ರೆ ದಾಖಲಾಗುತ್ತಿದ್ದರು. ಆದರೆ ಕಳೆದ ತಿಂಗಳು ಮಾರ್ಚ್‌ನಿಂದ ಈ ಸಂಖ್ಯೆ ಹೆಚ್ಚಾಗಿದೆ. ದೈನಂದಿನಲ್ಲಿ ಗರಿಷ್ಠ 07 ಜನರು ಆಸ್ಪತ್ರೆಗೆ ಬರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ಬೆಂಗಳೂರಿನಲ್ಲಿ ನೀರಿನ ಕೊರತೆ ಇದೆ. ನೈರ್ಮಲ್ಯ, ಕಲುಷಿತ ನೀರು, ಹೊರಗಿನ ಪದಾರ್ಥ ಸೇವೆನೆಯಂತಹ ಕಾರಣಗಳಿಂದ ಕಾಲರಾ ಸೋಂಕಿಗೆ ಒಳಗಾಗುವ ಪ್ರಮಾಣ ಹೆಚ್ಚಾಗಿದೆ. ಬೇಸಿಗೆ ವೇಳೆ ದೇಹ ತಂಪಾಗಿಡಲು ಶುಚಿಯಾದ ನೀರು ಸೇವಿಸಬೇಕು. ಕಲುಷಿತ ನೀರಿನ ಸೇವನೆಯಿಂದ ಇದು ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಾಲರಾ ಪ್ರಕರಣ ಪತ್ತೆ ಖಚಿತಪಡಿಸಿದ ಬಿಬಿಎಂಪಿ
ಬೆಂಗಳೂರಿನ ಕಾಲರಾ ರೋಗದ ಭೀತಿ ಹೆಚ್ಚಾದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಾದು ನೋಡುತ್ತಿದೆ. ಕಾಲರಾ ಹೆಚ್ಚಳ ಬಗ್ಗೆ ಘೋಷಿಸಿಲ್ಲ. ಹೊಟ್ಟೆ ಸಂಬಂಧಿ ರೋಗಗಳು ಹೆಚ್ಚಾದರೆ ಕೈಗೊಳ್ಳಬೇಕಾದ ಎಚ್ಚರಿಕೆ, ಸಲಹೆಗಳನ್ನು ಮಾತ್ರವೇ ನೀಡಿದೆ ಎಂದು ಮೂಲಗಳು ತಿಳಿಸಿದೆ.
ಬಿಬಿಎಂಪಿ ಅಧಿಕಾರಿಗಳು ಮಲ್ಲೇಶ್ವರಂ ಪ್ರದೇಶದಲ್ಲಿ ಕಾಲರಾ ಪ್ರಕರಣ ದೃಢಪಟ್ಟಿದೆ ಎಂದು ಬ್ಯುಸಿನೆಸ್ ಸ್ಟಾಂಡರ್ಡ್ ಮಾಹಿತಿ ನೀಡಿದ್ದಾರೆ. ಮಲ್ಲೇಶ್ವರಂ ಪಿಜಿ ಯಲ್ಲಿ ಈ ಕಾಲರಾ ಪ್ರಕರಣ ಬೆಳಕಿಗೆ ಬಂದಿದೆ. ಸೋಂಕಿನ ಪಾಸಿಟಿವ್ ಬಂದಿದ್ದು, ಇತರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇದರ ಮೂಲವನ್ನು ಪತ್ತೆ ಮಾಡಲಾಗುತ್ತಿದೆ. ಪರೀಕ್ಷಾ ವರದಿ ಬಳಿಕ ಬಿಬಿಎಂಪಿ ಎಚ್ಚೆತ್ತುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಕಾಲರಾ ರೋಗ ಎಂದರೇನು?
ಈ ಕಾಲರಾ ಎನ್ನುವುದು ಅತಿಸಾರ್ ಕಾಯಿಲೆ ಆಗಿದೆ. ವಿಷಕಾರಿ ಬ್ಯಾಕ್ಟೀರಿಯಂ ವಿಬ್ರಿಯೊ ಕಾಲರಾದೊಂದಿಗೆ ಕರುಳಿನ ಸೋಂಕಿನಿಂದ ಉಂಟಾಗುತ್ತದೆ. ಅಧ್ಯಯನದ ಪ್ರಕಾರ, ವಿಶ್ವದಾದ್ಯಂತ ವಾರ್ಷಿಕವಾಗಿ 1.3 ರಿಂದ 4 ಮಿಲಿಯನ್ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. 20,000 ದಿಂದ 1,00,000 ಲಕ್ಷ ವರೆಗೆ ರೋಗಿಗಳು ಗುಣಮುಖರಾಗದೇ ಸಾವನ್ನಪ್ಪುತ್ತಿದ್ದಾರೆ.
ರೋಗ ಬರದಂತೆ ತಡೆಯಲು ಏನು ಮಾಡಬೇಕು?
ಸಂಸ್ಕರಿಸಿದ ಶುದ್ಧ ನೀರು ಕುಡಿಯಬೇಕು. ಕಲುಷಿತ ಅಲ್ಲಿ ಇಲ್ಲಿ ಸಿಗುವ ನೀರನ್ನು ಕುಡಿಯುವುದನ್ನು ಬಿಡಬೇಕು. ಕುಡಿಯುವ ಮೊದಲು ನೀರು ಕುದಿಸಿ ನಂತರ ಕುಡಿದರೆ ಇನ್ನೂ ಒಳಿತು. ಕೈಗಳನ್ನು ಶುಚಿಯಾಗಿಟ್ಟುಕೊಳ್ಳಿ. ಪ್ರತಿ ಹಂತದಲ್ಲೂ ನಾವು ನೈರ್ಮಲ್ಯತೆಗೆ ಒತ್ತು ಕೊಡಬೇಕು.












Click it and Unblock the Notifications