ಚಿತ್ರಕಲಾ ಪರಿಷತ್ : ಕರಕುಶಲಕಾರರ "ಆರ್ಟಿಸನ್ಸ್ ಬಜಾರ್" ಗೆ ಬನ್ನಿ

ಬೆಂಗಳೂರು ಜನವರಿ 22: ಜನವರಿ 25 ರಿಂದ ಫೆಬ್ರವರಿ 3 ರ ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್‍ನಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರಿಂದ ಆಯೋಜನೆಗೊಳ್ಳುತ್ತಿರುವ ಆರ್ಟಿಸನ್ಸ್ ಬಜಾರ್ ನಡೆಯಲಿದೆ.

ಭಾರತ ದೇಶದ ಮೂಲೆ ಮೂಲೆಗಳಲ್ಲಿರುವ ಅತ್ಯಂತ ಹೆಮ್ಮೆಯ ಕರಕುಶಲ ಕಲಾವಿದರನ್ನು ಒಂದೇ ವೇದಿಕೆಯಡಿಯಲ್ಲಿ ತರುವ ಉದ್ದೇಶದಿಂದ, ಗ್ರಾಂಡ್ ಫ್ಲಿಯಾ ಮಾರ್ಕೆಟ್, ಚಿತ್ತಾರದ ಸಹಯೋಗದಲ್ಲಿ "ಆರ್ಟಿಸನ್ಸ್ ಬಜಾರ"ನ್ನು ಪ್ರಸ್ತುತಪಡಿಸುತ್ತಿದೆ. ದೇಶದ ವಿವಿಧ ಭಾಗಗಳ ನೂರಕ್ಕೂ ಹೆಚ್ಚು ಕಲಾವಿದರ ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಭಾಗವಹಿಸಲಿದ್ದು, 100 ಮಳಿಗೆಗಳ ಇರಲಿವೆ.

ಈ ಬಜಾರ್ ನಲ್ಲಿ ದೇಶದ ಮೂಲೆ ಮೂಲೆಯ ಕಲಾವಿದರ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ. ಒರಿಸ್ಸಾ, ರಾಜಸ್ತಾನ್, ಟ್ರೈಬಲ್ ಇನ್ನಿತರೆ ಆಭರಣಗಳು. ವುಡನ್ ಫೌಂಟೇನ್, ವುಡನ್ ವಾಚಗಳು, ವುಡನ್ ಡ್ರೈಫ್ರೂಟ ಬಾಕ್ಸ್‍ಗಳು. ತರತರಹದ ಪಿಂಗಾಣಿ ವಸ್ತುಗಳು, ಎಲ್ಲಾ ರಾಜ್ಯಗಳ ಕಲಾವಿದರು ನಿರ್ಮಿಸಿರುವ ತರತರಹದ ಸೀರೆಗಳು, ಎಲ್ಲಾ ತರಹದ ಕುರ್ತಿಗಳು. ಕಲಾಂಕರಿ, ಕೊಲ್ಕೊತ್ತಾ ಬ್ಯಾಗಗಳು, ಕನ್ನೂರ್ ಕಾಟನ್ ಕರ್ಟನ್‍ಗಳು, ತರತರಹದ ಬೆಡ್ ಶೀಟ್‍ಗಳು ಈ ಬಾರಿಯ ಹೈಲೈಟ್.

Chitrakala Parishath: Artisan Bazaar from Jan 25 to Feb 3

ಅಲ್ಲದೆ, ಇಲ್ಲಿ ಹುಲ್ಲಿನ ಆಂಧ್ರಪ್ರದೇಶದ ಪಪೆಟ್‍ಗಳು, ಹಾಸು, ಬೆಳ್ಳಿಯ ಸೂಕ್ಷ ಕೆತ್ತನೆಯ ಆಭರಣಗಳು, ಸೆಣಬಿನ ಚಪ್ಪಲಿ, ಅಂದದ ಆಟಿಕೆಗಳು, ಜವಳಿ ಮತ್ತು ಕಚೇರಿಗೆ ಉಪಯುಕ್ತ ಸಾಮಾಗ್ರಿಗಳು ಸೇರಿದಂತೆ ಅನೇಕ ಕರಕುಶಲ ವಸ್ತುಗಳು ಲಭ್ಯವಿದೆ. ಪುರಾನಾ ಸಾಹು ಅವರ ಕಣ್ಮನಸೆಳೆಯುವ ಪುರಾತನ ಹಿತ್ತಾಳೆಯ ಕರಕುಶಲವಸ್ತುಗಳು.

Chitrakala Parishath: Artisan Bazaar from Jan 25 to Feb 3

ಅಲ್ಲದೆ ಅವರ ಸೌರ ಚಿತ್ರಕಲಾಕೃತಿಗಳು ಇಲ್ಲಿ ಲಭ್ಯ. ಪೌರ್ಣ ಚಂದ್ರ ಮೊಹಪಾತ್ರ ಅವರ ಬೆಳ್ಳಿಯ ಆಭರಣಗಳು ಆಧುನಿಕತೆಯ ಹಿನ್ನಲೆಯಲ್ಲಿ ಪುರಾತನ ಸೊಬಗನ್ನು ಬಿಂಬಿಸಲಿವೆ. ಪೆಂಡೆಟ್‍ಗಳು, ಬಳೆಗಳು, ಹೇರ್ ಪಿನ್‍ಗಳು ಅಲ್ಲದೆ ಮುತ್ತಿನ ಆಭರಣದ ಕುಂಕುಮ ಬಾಕ್ಸ್‍ಗಳು ಇಲ್ಲಿ ಲಭ್ಯವಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+