ಸಮನ್ವಿತಾ- ಚಿತ್ರಹಾರ್- ಅವಿಸ್ಮರಣೀಯ ಗೀತೆಗಳ ಪ್ರಸ್ತುತಿ
ಬೆಂಗಳೂರು, ಜೂನ್ 15:"ಚಿತ್ರಹಾರ್-2", ಇದು 1960, 70, 80 ಮತ್ತು 90ರ ಹಿಂದಿ ಚಲನ ಚಿತ್ರಗೀತೆಗಳ ಸುಂದರ ಸಂಗೀತ ಸಂಜೆ. ಈ ಸಂಗೀತ ಸಂಜೆಯನ್ನು ರಾಮಚಂದ್ರ ಗ್ರಾಮೀಣ ವಿದ್ಯಾ ವಿಕಾಸ ಕೇಂದ್ರ ಟ್ರಸ್ಟ್ ರವರ ಸಹಾಯಾರ್ಥವಾಗಿ ಏರ್ಪಡಿಸಲಾಗಿದೆ.
ಈ ಸಂಗೀತ ಸಂಜೆಯಲ್ಲಿ ಹಿಂದಿ ಚಲನಚಿತ್ರದ ಸುಪ್ರಸಿದ್ಧ ಗಾಯಕರ ಪ್ರಖ್ಯಾತ ಹಾಗೂ ಅವಿಸ್ಮರಣೀಯ ಗೀತೆಗಳನ್ನು ಪ್ರಸ್ತುತ ಪಡಿಸಲಾಗುತ್ತದೆ. 'ಮುಜ್ರಾ' ದಿಂದ ಹಿಡಿದು ವೇಗದ ಗತಿಯ ಗೀತೆಗಳು ಸೇರಿದಂತೆ ಹಲವು ವಿಧದ ಚಿರಸ್ಮರಣೀಯ ಸುಪ್ರಸಿದ್ಧ ಗೀತೆಗಳನ್ನು ಪ್ರಸ್ತುತ ಪಡಿಸಲಾಗುತ್ತದೆ.
ಕಾರ್ಯಕ್ರಮ : ಚಿತ್ರ ಹಾರ್ -2
ದಿನಾಂಕ : 17/06/2016
ಸ್ಥಳ: ಚೌಡಯ್ಯ ಸ್ಮಾರಕ ಭವನ, ಬೆಂಗಳೂರು
ಸಮಯ: ಸಂಜೆ 6 ಗಂಟೆ ನಂತರ
ಹೆಚ್ಚಿನ ಮಾಹಿತಿಗೆ ಭೇಟಿ ಕೋಡಿ: ಟಾಕ್ ಆಫ್ ಟೌನ್.ಇನ್ talkofthetown.in/
ಸಂಪರ್ಕಿಸಿ : 80959 04455

ಈ ಕಾರ್ಯಕ್ರಮದ ರೂವಾರಿ ಹಾಗೂ ಮುಖ್ಯ ಗಾಯಕಿಯಾದ ಸಮನ್ವಿತ ಶರ್ಮ ರವರು ಬೆಂಗಳೂರಿನ ಸಾಂಸ್ಕ್ರತಿಕ ವಲಯದಲ್ಲಿ ಒಬ್ಬ ಪ್ರತಿಷ್ಠಿತ, ಸುಪ್ರಸಿದ್ಧ ಹಾಗೂ ಹೆಸರಾಂತ ಗಾಯಕಿ. ಇವರು ಕನ್ನಡ ಚಲನಚಿತ್ರರಂಗದ ಹಿನ್ನೆಲೆ ಗಾಯಕಿಯಾಗಿದ್ದು ಇತ್ತೀಚಿನ ಚಿತ್ರ "ಜೆಸ್ಸಿ" ಯಲ್ಲಿನ 'ಮಳೆ ಬಂತು' ಈ ಸುಪ್ರಸಿದ್ಧ ಹಾಡಿಗೆ ಹಿನ್ನೆಲೆ ಗಾಯನ ನೀಡಿದ್ದಾರೆ.
ಹಲವಾರು ಕಲೆಗಳಲ್ಲಿ ಪರಿಣತಿ ಹೊಂದಿರುವ ಇವರು ಗಾಯಕಿಯಾಗಿ, ನಿರೂಪಕಿಯಾಗಿ, ಶಾಸ್ತ್ರೀಯ ನೃತ್ಯಗಾರ್ತಿಯಾಗಿ, ಸಂಗೀತ ಸಂಯೋಜಕಿಯಾಗಿ ಹಾಗೂ ಒಬ್ಬ ಕಲಾ ಉದ್ಯಮಿಯಾಗಿ ಲೋಕಪ್ರಿಯರಾಗಿರುವರು.
ಈ ಉತ್ಸಾಹಪೂರ್ಣ ಸಂಗೀತ ಸಂಜೆಯಲ್ಲಿ ಪಾಲ್ಗೊಳ್ಳುವ ಇತರ ಗಾಯಕ ಗಾಯಕಿಯರು - ಹ್ಯಾರಿಸ್ ಕಾರೊತ್, ಸುಬ್ರತ್ ಸಾಹೂ, ಅನಿಕೇತ್ ಪ್ರಭು, ಗೋವಿಂದ್ ಕರ್ನೂಲ್ ಹಾಗೂ ರೋಹಿಣಿ ಪ್ರಭುನಂದನ್.
ಮುಂಬೈನ ಹೆಸರಾಂತ ಕೀಬೋರ್ಡ್ ವಾದಕರಾದ ಪ್ರದೀಪ್ ಪಟ್ಕರ್ ರವರ ತಂಡದವರ ಪೂರ್ಣ ಪ್ರಮಾಣದ ವಾದ್ಯವ್ರಂದ ಹೊಂದಿರುತ್ತದೆ. ಸಮರ್ಥವಾದ ಸಂಗೀತ ಹಾಗೂ ಕಲಾವಿದರ ಮಿಶ್ರಣವನ್ನು ಹೊಂದಿರುವ ಈ ಕಾರ್ಯಕ್ರಮವು ಬೆಂಗಳೂರಿನ ಬಾಲಿವುಡ್ ಸಂಗೀತಪ್ರೇಮಿಗಳಿಗೆ ಒಂದು ಸಂಗೀತ ರಸದೌತಣ ನೀಡುವುದರಲ್ಲಿ ಸಂದೇಹವಿಲ್ಲ.












Click it and Unblock the Notifications