ಬೆಂಗಳೂರು ಕಾಲ್ತುಳಿತ ಪ್ರಕರಣ: ವಿರಾಟ್ ಕೊಹ್ಲಿ ಟೀಕಿಸುವವರು ಜ್ಞಾನಿಗಳಲ್ಲ, ಮೂರ್ಖರು; ಸುಮಲತಾ ಅಂಬರೀಶ್
IPL 2025 RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದು 17 ವರ್ಷಗಳ ನಂತರ ಮೊದಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಈ ಹಿನ್ನೆಲೆ ಮಾರನೇ ದಿನವೇ ಬೆಂಗಳೂರಿನಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದರು. ಈ ದುರಂತ ಸಂಭ್ರಮಾಚರಣೆಯನ್ನ ಕಿತ್ತುಕೊಂಡುಬಿಟ್ಟಿತ್ತು. ಮತ್ತೊಂದೆಡೆ ಇದೇ ಘಟನೆಯನ್ನು ಇಟ್ಟುಕೊಂಡು ವಿರಾಟ್ ಕೊಹ್ಲಿಯನ್ನು ಟೀಕಿಸುತ್ತಿದ್ದವರಿಗೆ ಸುಮಲತಾ ಅಂಬರೀಶ್ ಅವರು ಖಾರವಾಗಿಯೇ ತಿರುಗೇಟು ನೀಡಿದ್ದಾರೆ.
ಜೂನ್ 3ರಂದು ಅಹಮದಬಾದ್‌ನಲ್ಲಿ ನಡೆದ ಐಫಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಈ ಮೂಲಕ 17 ವರ್ಷಗಳು ವಿಫಲವಾಗಿದ್ದ ಕನಸನ್ನು 18ನೇ ಸೀಸನ್‌ನಲ್ಲಿ ನೆರವೇರಿಸಿಕೊಂಡಿತು. ಅಂದು ಬರೀ ಕರ್ನಾಟಕ ಅಷ್ಟೇ ಅಲ್ಲದೆ, ದೇಶ, ವಿದೇಶಗಳಲ್ಲಿಯೂ ಸಂಭ್ರಮಾಚರಣೆ ಜೋರಾಗಿಯೇ ನಡೆಯಿತು. ಆದರೆ, ಮಾರನೇ ದಿನ ಬೆಂಗಳೂರಿನಲ್ಲಿ ವಿಜಯೋತ್ಸವ ಆಯೋಜನೆ ಮಾಡಲಾಗಿದ್ದು, ಈ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಗಣದ ಬಳಿ ಕಾಲ್ತುಳಿದ ಸಂಭವಿಸಿ 11 ಜನ ಪ್ರಾಣ ಕಳೆದುಕೊಂಡರು. ಇದು ಆರ್‌ಸಿಬಿಗೆ ಕಪ್ಪು ಚುಕ್ಕೆಯಾಗಿ ಉಳಿದುಕೊಂಡುಬಿಟ್ಟಿತು.

ಈ ದುರಂತ ಸಂಭವಿಸಿದ ಬಳಿಕ ರಾಜ್ಯ ಸರ್ಕಾರವು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಳನ್ನು ಅಮಾನತುಗೊಳಿಸಿತು. ಜೊತೆಗೆ ಸಿಎಂ ರಾಜಕೀಯ ಕಾರ್ಯದರ್ಶಿಗೂ ಗೇಟ್ ಪಾಸ್ ನೀಡಲಾಯಿತು. ಬಳಿಕ ಆರ್‌ಸಿಬಿ, ಕೆಎಸ್‌ಸಿಎ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ವಿರಾಟ್ ಕೊಹ್ಲಿ ಮೇಲೂ ದೂರು ದಾಖಲಿಸಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿದವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಇನ್ಸ್ಟಾ ಖಾತೆಯಲ್ಲಿ ಸಂತಾಪವನ್ನು ಸೂಚಿಸಿದ್ದು, ಇದನ್ನೇ ವಿರಾಟ್ ಕೊಹ್ಲಿ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಅದು 'ಪದಗಳೇ ಬರುತ್ತಿಲ್ಲ' ಎಂಬ ಒಂದೇ ಒಂದು ಪದ ಸೇರಿಸಿ. ಅವರ ಈ ನಡೆ ಎಲ್ಲಾರಲ್ಲೂ ಅಸಮಾಧಾನ ಮೂಡಿಸಿದೆ ನಿಜ. ಆದರೆ, ಈ ಘಟನೆಗೆಲ್ಲಾ ಅವರೇ ಕಾರಣವೆಂಬಂತೆ ಮಾತನಾಡಿದವರಿದ್ದು, ಅಂತಹವರಿಗೆ ಕೆಲವರು ಈಗಾಗಲೇ ತಿರುಗೇಟು ಕೊಡುತ್ತಲಿದ್ದಾರೆ. ಇದರ ಬೆನ್ನಲ್ಲೇ ಸುಮಲತಾ ಅಂಬರೀಶ್ ಅವರು ಕೂಡ ತಮ್ಮ ಇನ್ಸ್ಟಾ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕಾಲ್ತುಳಿತ ಪ್ರಕರಣ ಬಗ್ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಮಲತಾ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಶಕ್ತಿ ಸರವಣನ್ ಅವರ ಫೇಸ್‌ಬುಕ್‌ನಲ್ಲಿನ ಪೋಸ್ಟ್ ಅನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆಂದು ತಿಳಿಸಿದ್ದಾರೆ. ಒಂದು ದುರಂತ ಘಟನೆಯನ್ನು ಬಳಸಿಕೊಂಡು ವಿರಾಟ್ ಕೊಹ್ಲಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಲು ಪ್ರಯತ್ನಿಸುತ್ತಿರುವ ಎಲ್ಲಾ ಮೂರ್ಖರಿಗೆ ಎಂದು ಸುಮಲತಾ ಅಂಬರೀಶ್ ಅವರು ಖಡಕ್ ತಿರುಗೇಟು ನೀಡಿದ್ದಾರೆ.
ಈ ದುರಂತದ ಕುರಿತು ಸುಮಲತಾ ಅವರು ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಬಳಸಿಕೊಂಡು ವಿರಾಟ್ ಕೊಹ್ಲಿ ವಿರುದ್ಧ ತಮ್ಮ ಕೋಪವನ್ನು ಹೊರಹಾಕಲು ಪ್ರಯತ್ನಿಸುತ್ತಿರುವ ಎಲ್ಲಾ ಮೂರ್ಖರಿಗೆ ಮೆದುಳು ಮತ್ತು ಆತ್ಮಸಾಕ್ಷಿ ಎನ್ನುವುದು ಇದೆಯೇ? ಎಂದು ಪ್ರಶ್ನಿಸುವುದಲ್ಲದೆ, ಸಾಧ್ಯವಾದರೆ ಮೂಲಭೂತ ಸಾಮಾನ್ಯ ಜ್ಞಾನವನ್ನು ಪಡೆಯಿರಿ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಸುರಕ್ಷತೆಯ ಜವಾಬ್ದಾರಿಯ ಹೊಣೆ ರಾಜ್ಯ ಸರ್ಕಾರ ಮತ್ತು ಆಡಳಿತದ ಮೇಲಿರುತ್ತದೆ. ಅವರು ಇದರಲ್ಲಿ ವಿಫಲರಾಗಿದ್ದಾರೆ ಎನ್ನುವುದು ಕಣ್ಣಿಗೆ ಕಾಣುತ್ತಿದೆ. ಆದ್ದರಿಂದ ಸರ್ಕಾರದ ನಿರ್ಲಕ್ಷ್ಯವನ್ನು ಪ್ರಶ್ನೆ ಮಾಡಿ. ಬದಲಾಗಿ ಮತ್ಯಾರನ್ನೋ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ 11 ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ನ್ಯಾಯದ ಪ್ರಕಾರ ತಪ್ಪು ಮಾಡಿದವನ್ನು ವಿಚಾರಣೆಗೆ ಒಳಪಡಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಈ ರೀತಿಯ ದುರಂತವನ್ನು ತಂಡ ಅಥವಾ ಆಟಗಾರರ ಮೇಲೆ ಹೊರಿಸುವುದು ನಿಮ್ಮ ಸಣ್ಣತನವನ್ನು ಪ್ರದರ್ಶಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಶಕ್ತಿ ಸರವಣನ್ ಹೇಳಿದ್ದೇನು?: ಕಾಲ್ತುಳಿತದ ಘಟನೆ ಸಂಬಂಧ ವಿರಾಟ್ ಕೊಹ್ಲಿ ಮೇಲೆ ಕೋಪ ಮತ್ತು ದ್ವೇಷ ಮಾಡುತ್ತಿದ್ದಾರೆ. ಇದನ್ನು ನೋಡಿ ನನಗೆ ಆಘಾತವಾಗಿದೆ ಮತ್ತು ಪ್ರಾಮಾಣಿಕವಾಗಿ ದುಃಖವಾಗಿದೆ. ಕೊಹ್ಲಿ ಜನಸಮೂಹವನ್ನು ಸಂಘಟಿಸಲಿಲ್ಲ, ಅವರು ಲಾಜಿಸ್ಟಿಕ್ಸ್ ಅನ್ನು ನಿಯಂತ್ರಿಸಲಿಲ್ಲ ಮತ್ತು ಅವರು ಖಂಡಿತವಾಗಿಯೂ ಯಾವುದೇ ಹಾನಿ ಸಂಭವಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಸಾವಿರಾರು ಅಭಿಮಾನಿಗಳಂತೆ ಅವರು ತಂಡದ ಗೆಲುವಿನ ಸಂಭ್ರಾಚರಣೆಯಲ್ಲಿ ಭಾಗಿಯಾಗಲು ಮುಂದಾದರು ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಸುಮಲತಾ ಅವರು, ನಾವು ಉತ್ತಮರಾಗೋಣ. ಮನುಷ್ಯರಾಗೋಣ ಎಂದು ಬರೆದುಕೊಂಡ ಪೋಸ್ಟ್ ಅನ್ನು ರೀ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.
-
Virat Kohli: ವಿರಾಟ್ ಕೊಹ್ಲಿಗೆ ಕನ್ನಡ ಬರಲ್ಲ - ನಾರ್ಥಿಗಳು ಯಾಕೆ ಕಲಿಯಬೇಕು: ತುಳು ಬೆಂಬಲಿತರ ಪ್ರಶ್ನೆ, ಕನ್ನಡಿಗರ ಆಕ್ರೋಶ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು












Click it and Unblock the Notifications