ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮತ್ತೆರಡು ದೊಡ್ಡ ಕೊವಿಡ್ ಕೇಂದ್ರಗಳು ನಿರ್ಮಾಣ!

|
Google Oneindia Kannada News

ಬೆಂಗಳೂರು, ಜುಲೈ 11: ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನಾ ಕೇಂದ್ರದಲ್ಲಿ (BIEC) 10,100 ಹಾಸಿಗೆಯ ಸಾಮರ್ಥ್ಯದ ವಿಶ್ವದ ಬಹುದೊಡ್ಡ ಕೊವಿಡ್ ಆರೈಕೆ ಕೇಂದ್ರ ನಿರ್ಮಿಸಲಾಗಿದೆ. ಈ ವಾರದಲ್ಲಿ ಇದು ಕಾರ್ಯಾರಂಭವಾಗಲಿದೆ ಎಂದು ಬಿಬಿಎಂಪಿ ಹಾಗು ರಾಜ್ಯ ಸರ್ಕಾರ ತಿಳಿಸಿದೆ.

Recommended Video

Who is Vikas Dubey ? | ಯಾರು ಈ ವಿಕಾಸ್ ದೂಬೆ ? | Oneindia Kannada

ಇದೀಗ, ಬೆಂಗಳೂರಿನಲ್ಲಿ ಮತ್ತೆರಡು ಕಡೆ ಅತಿ ದೊಡ್ಡ ಕೊವಿಡ್ ಚಿಕಿತ್ಸಾ ಕೇಂದ್ರಗಳನ್ನು ಸಿದ್ದಪಡಿಸುವ ಆಲೋಚನೆ ಇದೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿದೆ.

10,100 ಹಾಸಿಗೆಯ ಕೊವಿಡ್ ಕೇಂದ್ರದಲ್ಲಿ ಎಷ್ಟು ವೈದ್ಯರು, ಆಹಾರ ಪದ್ಧತಿ ಏನು?10,100 ಹಾಸಿಗೆಯ ಕೊವಿಡ್ ಕೇಂದ್ರದಲ್ಲಿ ಎಷ್ಟು ವೈದ್ಯರು, ಆಹಾರ ಪದ್ಧತಿ ಏನು?

ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಹಾಗೂ ಬೆಂಗಳೂರು ಅರಮನೆ ಮೈದಾನದಲ್ಲಿ ಪ್ರತ್ಯೇಕ ಕೊವಿಡ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಗುರುವಾರ ಸಿಎಂ ಕಚೇರಿಯ ಮೂಲಕಗಳು ತಿಳಿಸಿವೆ. ಈ ಕುರಿತು ಎಎನ್ಐ ಸುದ್ದಿ ಸಂಸ್ಥೆ ಸಹ ವರದಿ ಮಾಡಿದೆ.

Govt Planning To Convert Chinnaswamy Stadium As A Covid Center

ಕಳೆದ ಹತ್ತು ಹದಿನೈದು ದಿನಗಳಿಂದ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ. ಖಾಸಗಿ ಹಾಗು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆ ಇದೆ ಎಂಬ ವರದಿಗಳು ಕಂಡು ಬಂದಿದೆ. ಇದು ಸಹಜವಾಗಿ ಸಿಲಿಕಾನ್ ಸಿಟಿ ನಾಗರಿಕರನ್ನು ಆತಂಕ್ಕೆ ಒಳಪಡುವಂತೆ ಮಾಡಿತ್ತು.

ಆದ್ರೀಗ, ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಪ್ರತ್ಯೇಕ ಕೊವಿಡ್ ಕೇಂದ್ರಗಳ ಸ್ಥಾಪನೆಗೆ ಮುಂದಾಗಿದೆ. ಇದು ನಿಜಕ್ಕೂ ಸಮಾಧಾನಕರ ಸಂಗತಿಯಾಗಿದೆ.

ಜುಲೈ 10ರ ವರದಿಯಂತೆ ಬೆಂಗಳೂರಿನಲ್ಲಿ ಹೊಸದಾಗಿ 1147 ಜನರಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15329ಕ್ಕೆ ಏರಿಕೆಯಾಗಿತ್ತು. 3435 ಮಂದಿ ಗುಣಮುಖರಾಗಿದ್ದರೆ, 11687 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
Karnataka government planning to convert chinnaswamy stadium and palace ground as a COVID19 center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X