• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮೀರ್ ಅಹ್ಮದ್ ಒಬ್ಬ ಅರೆದಡ್ಡ, ದೇಶದ್ರೋಹಿ, ಶಾಸಕ ಸ್ಥಾನ ವಜಾಮಾಡಿ

|

ಬೆಂಗಳೂರು, ಜೂನ್ 3: "ಭಾರತೀಯ ಸಂಸ್ಕೃತಿಯ ಬಗ್ಗೆ ತಿಳಿಯದೇ ಇರುವ, ಶಾಸಕ ಜಮೀರ್ ಅಹ್ಮದ್ ಖಾನ್, ಒಬ್ಬ ಅರೆದಡ್ಡ"ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಟೀಕಿಸಿದ್ದಾರೆ.

ನಗರದಲ್ಲಿ ಮಾತನಾಡುತ್ತಿದ್ದ ರೇಣುಕಾಚಾರ್ಯ, "ಪಾದರಾಯನಪುರದ ಪುಂಡರ ರಕ್ಷಣೆಗೆ ಜಮೀರ್ ನಿಂತಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇದು ದೇಶದ್ರೋಹದ ಕೆಲಸವಲ್ಲದೆ ಇನ್ನೇನು. ಇವರ ಶಾಸಕ ಸ್ಥಾನವನ್ನು ವಜಾ ಮಾಡಬೇಕೆಂದು" ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಜೂನ್ 1 ರಿಂದ ಮಸೀದಿಯಲ್ಲಿ ನಮಾಜ್‌ಗೂ ಅವಕಾಶ ಮಾಡಿಕೊಡಿ: ಜಮೀರ್

ಜಮೀರ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, "ಗುಜುರಿ ಕೆಲಸ ಮಾಡಿಕೊಂಡು ಬಂದ ಜಮೀರ್ ಒಬ್ಬ ಚಾರ್ ಸೋ ಬೀಸ್. ಅರೆದಡ್ಡನಾದರೂ, ನಟನೆ ಮಾಡುವ ಚಾಕಚಕ್ಯತೆ ಅವರಿಗಿದೆ"ಎಂದು ವಾಗ್ದಾಳಿ ನಡೆಸಿದ್ದಾರೆ.

"ದುಡ್ಡಿನಿಂದ ಎಲ್ಲವನ್ನೂ ಸಾಧಿಸಬಹುದು ಎಂದು ಜಮೀರ್ ಅಂದುಕೊಂಡಿರಬಹುದು. ಕೊರೊನಾದಂತಹ ಸಮಯದಲ್ಲಿ ಜನರಿಗೆ ಆತ್ಮಸ್ಥೈರ್ಯ ತುಂಬುವ ಬದಲು, ಪುಂಡರನ್ನು ರಕ್ಷಣೆ ಮಾಡುವುದಲ್ಲ"ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಇಂದು ಬರಲಿದೆ ಪಾದರಾಯನಪುರ ಪುಂಡರ ಬಂಧಿಸಿದ್ದ ಪೊಲೀಸರ ಕೊರೊನಾ ಪರೀಕ್ಷಾ ವರದಿ

"ನಮ್ಮದು ಒಂದು ಕುಟುಂಬ, ನಮ್ಮಲ್ಲಿ ಏನಾದರೂ ಸಮಸ್ಯೆಗಳಿದ್ದರೆ ನಾವೇ ಸರಿಪಡಿಸಿಕೊಳ್ಳುತ್ತೇವೆ. ಸಿದ್ದರಾಮಯ್ಯನವರಾಗಲಿ, ಯಾರೇ ಇರಲಿ, ನಮ್ಮದು ನಾವೇ ನೋಡಿಕೊಳ್ಳುತ್ತೇವೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ"ಎಂದು ಬಿಜೆಪಿಯ ಆಂತರಿಕ ಸಮಸ್ಯೆಯ ಬಗ್ಗೆ ರೇಣುಕಾಚಾರ್ಯ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

"ಯಡಿಯೂರಪ್ಪನವರು ನಮ್ಮ ಪ್ರಶ್ನಾತೀತ ನಾಯಕರು. ಪೂರ್ಣಾವಧಿಗೆ ಅವರೇ ಸಿಎಂ ಆಗಿರುತ್ತಾರೆ. ಈ ಬಗ್ಗೆ ಏನೂ ಸಂದೇಹ ಬೇಡ"ಎಂದು ರೇಣುಕಾಚಾರ್ಯ ಹೇಳಿದ್ದಾರೆ.

English summary
Chief Minister Political Secretary MP Renukacharya Lambasted Chamarajpet MLA Zameer Ahmed Khan,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X