Chennai-Bengaluru Expressway: ಶೀಘ್ರದಲ್ಲೇ ಚೆನ್ನೈ ಬೆಂಗಳೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆ: ಟೋಲ್ ದರ, ವೆಚ್ಚ ಮಾಹಿತಿ

ಮಹತ್ವದ ಚೆನ್ನೈ ಬೆಂಗಳೂರು ಎಕ್ಸ್‌ಪ್ರೆಸ್‌ವೇ ಶೀಘ್ರದಲ್ಲೇ ಉದ್ಘಾಟನೆಯಾಗಲು ಸಜ್ಜಾಗಿದೆ. 2024ರ ಜನವರಿಯಲ್ಲಿ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೊಳ್ಳಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದರು, ಭರದಿಂದ ರಸ್ತೆ ನಿರ್ಮಾಣ ಕೆಲಸ ಸಾಗುತ್ತಿದ್ದು, ನಿಗದಿಯಂತೆ ಉದ್ಘಾಟನೆಗೆ ಸಜ್ಜಾಗಲಿದೆ.

ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ಆರಂಭ ಮಾಡಿದ ಬಳಿಕ ಚೆನ್ನೈ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಸಮಯವನ್ನು ಎರಡು ಗಂಟೆಗಳವರೆಗೆ ಕಡಿಮೆ ಮಾಡುತ್ತದೆ.

Chennai-Bengaluru Expressway: Unveiling Date, Route Details, Map, Toll Rates, and More

ಚೆನ್ನೈ ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಯೋಜನೆಯು ಪ್ರಸ್ತುತ ಭಾರತದಲ್ಲಿ ನಿರ್ಮಾಣವಾಗುತ್ತಿರುವ 36 ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದೆ. ಬೆಂಗಳೂರಿನ ಹೊಸಕೋಟೆಯಿಂದ ಚೆನ್ನೈನ ಶ್ರೀ ಪೆರಂಬದೂರ್‌ಗೆ ಸಂಪರ್ಕ ಕಲ್ಪಿಸಲಿದ್ದು, ರಸ್ತೆ ನಿರ್ಮಾಣಕ್ಕಾಗಿ 17,930 ಕೋಟಿಗೂ ಹೆಚ್ಚು ವೆಚ್ಚವಾಗುವ ನಿರೀಕ್ಷೆ ಇದೆ.

ಈ ಯೋಜನೆಗಾಗಿ 2650 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. 240 ಕಿ.ಮೀಗೆ ಎಂಟು ಲೇನ್‌ಗಳನ್ನು ಹೊಂದಿದ್ದು, ಉಳಿದ 22 ಕಿ.ಮೀ ರಸ್ತೆ ಅಗಲೀಕರಣ ಮಾಡಲಾಗುತ್ತದೆ.

Chennai-Bengaluru Expressway: Unveiling Date, Route Details, Map, Toll Rates, and More

ಮೂರು ಹಂತಗಳಲ್ಲಿ ರಸ್ತೆ ನಿರ್ಮಾಣ

ಮೊದಲನೇ ಹಂತದಲ್ಲಿ ಕರ್ನಾಟಕದ ಹೊಸಕೋಟೆ ಮತ್ತು ಬೇತಮಂಗಲ ನಡುವಿನ 62.6 ಕಿಮೀ ರಸ್ತೆ ನಿರ್ಮಾಣವಾಗಲಿದೆ. ಎರಡನೇ ಹಂತದಲ್ಲಿ ಬೇತಮಂಗಲದಿಂದ ಆಂಧ್ರಪ್ರದೇಶದ ಗುಡಿಪಾಲವರೆಗಿನ 85 ಕಿ.ಮೀ ರಸ್ತೆ ನಿರ್ಮಾಣವಾಗಲಿದೆ. ಮೂರನೇ ಹಂತದಲ್ಲಿ 106 ಕಿಮೀ ರಸ್ತೆಯನ್ನು ಒಳಗೊಂಡಿದೆ, ಗುಡಿಪಾಲದಿಂದ ತಮಿಳುನಾಡಿನ ಶ್ರೀಪೆರಂಬದ್ದೂರ್‌ಗೆ ಸಂಪರ್ಕಿಸುತ್ತದೆ.

ಚೆನ್ನೈ ಬೆಂಗಳೂರು ಎಕ್ಸ್‌ಪ್ರೆಸ್‌ವೇ ಚೆನ್ನೈನಿಂದ ಬೆಂಗಳೂರಿಗೆ ಸಂಪರ್ಕಿಸುವ ಒಂದು ನಿರ್ಣಾಯಕ ಮೂಲಸೌಕರ್ಯ ಯೋಜನೆಯಾಗಿದೆ. ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ಈ ರಸ್ತೆ ನಿರ್ಮಾಣವಾಗಲಿದೆ. ಭಾರತ ಸರ್ಕಾರವು ನಿರ್ಮಿಸಲು ಯೋಜಿಸಿರುವ ವಿಶ್ವದರ್ಜೆಯ ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದೆ. ಚೆನ್ನೈ ಬೆಂಗಳೂರು ಎಕ್ಸ್‌ಪ್ರೆಸ್‌ವೇ ಅನ್ನು ಭಾರತಮಾಲಾ ಪರಿಯೋಜನಾ ಕಾರ್ಯಕ್ರಮದ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

1990 ರ ದಶಕದಲ್ಲಿ ಪಿ ಚಿದಂಬರಂ ಕೇಂದ್ರ ಬಜೆಟ್ ಭಾಷಣದಲ್ಲಿ, ಚೆನ್ನೈ ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರೂ, 2018 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ 258 ಕಿಮೀ ಉದ್ದದ ವಿಸ್ತರಣೆಯನ್ನು ಅಭಿವೃದ್ಧಿಪಡಿಸುತ್ತಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆಯನ್ನು ಅಭಿವೃದ್ಧಿ ಮಾಡುತ್ತಿದೆ. ಈ ಎಕ್ಸ್‌ಪ್ರೆಸ್‌ವೇನಲ್ಲಿ 41 ಅಂಡರ್‌ಪಾಸ್‌ಗಳು ಮತ್ತು 17 ಫ್ಲೈಓವರ್ ನಿರ್ಮಾಣವಾಗಲಿವೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ವಾಹನಗಳನ್ನು ಚಲಾಯಿಸಲು ಅನುಮತಿ ನೀಡಲಾಗುತ್ತದೆ.

ಬೆಂಗಳೂರಿನಿಂದ ಚೆನ್ನೈ ತಲುಪಲು 5-6 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಆದರೆ, ಎಕ್ಸ್‌ಪ್ರೆಸ್‌ವೇ ಸಿದ್ಧವಾದ ನಂತರ, ಪ್ರಯಾಣದ ಸಮಯವು 2.15 ಗಂಟೆಗಳವರೆಗೆ ಕಡಿಮೆಯಾಗುತ್ತದೆ. ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ವೇ ಚೆನ್ನೈ ಬೆಂಗಳೂರು ಕೈಗಾರಿಕಾ ಕಾರಿಡಾರ್ ಅನ್ನು ಉತ್ತೇಜಿಸುತ್ತದೆ, ಇದು ಪ್ರದೇಶದ ಉತ್ಪಾದನಾ ವಲಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಎಕ್ಸ್‌ಪ್ರೆಸ್‌ವೇಯು ಟ್ರಕ್ ಬೇಗಳು, ವಾಹನಗಳು ಮತ್ತು ಪ್ರಾಣಿಗಳಿಗೆ ಅಂಡರ್‌ಪಾಸ್‌ಗಳು ಮತ್ತು ಪಾದಚಾರಿ ಮತ್ತು ಸಂಚಾರ ಆಡಳಿತ ವ್ಯವಸ್ಥೆಗಳಂತಹ ಅಗತ್ಯ ಸೌಕರ್ಯಗಳನ್ನು ಹೊಂದಿರುತ್ತದೆ. ಎಕ್ಸ್‌ಪ್ರೆಸ್‌ವೇ ಮಾರ್ಗದಲ್ಲಿ ಬೀಳುವ ನಗರಗಳು ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ ಅತ್ಯುತ್ತಮ ಆಕರ್ಷಣೆಯಾಗಿದೆ ಏಕೆಂದರೆ ಎಕ್ಸ್‌ಪ್ರೆಸ್‌ವೇ ಸಿದ್ಧವಾದ ನಂತರ ಆಸ್ತಿ ಬೆಲೆಗಳು ಹೆಚ್ಚಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲಕ ರಸ್ತೆ ಹಾದುಹೋಗಲಿದ್ದು, ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೋಲಾರ ಗೋಲ್ಡ್ ಫೀಲ್ಡ್ಸ್, ವೆಂಕಟಗಿರಿಕೋಟ, ಪಲಮನೇರ್, ಬಂಗಾರುಪಾಲೆಂ, ಚಿತ್ತೂರು, ರಾಣಿಪೇಟ್, ಮತ್ತು ಶ್ರೀಪೆರಂಬದೂರ್ ಮುಂತಾದ ನಗರಗಳು ಈ ಮಾರ್ಗದಲ್ಲಿವೆ.

ಟೋಲ್ ದರ ಎಷ್ಟು?

ಚೆನ್ನೈನಿಂದ ಬೆಂಗಳೂರು ಎಕ್ಸ್‌ಪ್ರೆಸ್‌ವೇಗೆ (ಬೆಂಗಳೂರಿನಿಂದ ಚೆನ್ನೈ) ಟೋಲ್ ದರಗಳು ಹೆಚ್ಚು. ಪ್ರಸ್ತಾವಿತ ಟೋಲ್ ದರಗಳು ಈ ಕೆಳಗಿನಂತಿವೆ:

ಕಾರುಗಳು ಮತ್ತು ಜೀಪ್‌ಗಳಂತಹ ಕಡಿಮೆ ತೂಕದ ವಾಹನಗಳು- ಪ್ರತಿ ಕಿ.ಮೀಗೆ 0.65 ರೂ.
ದೊಡ್ಡ ಸರಕು ಸಾಗಣೆ ವಾಹನ ಮತ್ತು ಮಿನಿ ಬಸ್- ಪ್ರತಿ ಕಿ.ಮೀ.ಗೆ 1.05 ರೂ
ಬಸ್ಸುಗಳು ಮತ್ತು ಟ್ರಕ್‌ಗಳು- ಪ್ರತಿ ಕಿ.ಮೀ.ಗೆ 2.20 ರೂ
ಮೂರು ಆಕ್ಸಲ್ ಟ್ರಕ್‌ಗಳು- ಪ್ರತಿ ಕಿ.ಮೀಗೆ 2.40 ರೂ
ಮಲ್ಟಿ ಆಕ್ಸಲ್ ಟ್ರಕ್‌ಗಳು- ಪ್ರತಿ ಕಿ.ಮೀ.ಗೆ 3.45 ರೂ
ಗಾತ್ರದ ಟ್ರಕ್‌ಗಳು- ಪ್ರತಿ ಕಿ.ಮೀ.ಗೆ 4.20 ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+