ಬುಧವಾರದಿಂದ ಚೆನ್ನೈ-ಬೆಂಗಳೂರು ನೇರ ರೈಲು; ವೇಳಾಪಟ್ಟಿ

ಬೆಂಗಳೂರು, ಅಕ್ಟೋಬರ್ 20 : ಚೆನ್ನೈ ಮತ್ತು ಬೆಂಗಳೂರು ನಡುವಿನ ನೇರ ರೈಲು ಸಂಚಾರ ಅಕ್ಟೋಬರ್ 21ರಿಂದ ಆರಂಭವಾಗಲಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ 6 ತಿಂಗಳಿನಿಂದ ರೈಲು ಸಂಚಾರ ರದ್ದುಗೊಂಡಿತ್ತು.

ಡಬಲ್ ಡೆಕ್ಕರ್ ಸಂಪೂರ್ಣ ಕಾಯ್ದಿರಿಸಿದ ಸೀಟುಗಳನ್ನು ಹೊಂದಿರುವ ವಿಶೇಷ ರೈಲು ಅಕ್ಟೋಬರ್ 21ರಿಂದ ಸಂಚಾರ ನಡೆಸಲಿದೆ. ಇದರಿಂದಾಗಿ ಚೆನ್ನೈ-ಬೆಂಗಳೂರು ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ ಎಂದುದ ನೈಋತ್ಯ ರೈಲ್ವೆ ಹೇಳಿದೆ.

ಚೆನ್ನೈ-ಬೆಂಗಳೂರು-ಚೆನ್ನೈ ನಡುವೆ ಸಂಚಾರ ನಡೆಸುವ ರೈಲು ನಂಬರ್ 06075 ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಬೆಳಗ್ಗೆ 7.25ಕ್ಕೆ ಹೊರಡಲಿದೆ. ಬೆಂಗಳೂರು ನಗರಕ್ಕೆ 1.10ಕ್ಕೆ ತಲುಪಲಿದೆ.

Chennai Bengaluru Direct Train From October 21

ರೈಲು ನಂಬರ್ 06076 ಬೆಂಗಳೂರು ನಗರದಿಂದ ಮಧ್ಯಾಹ್ನ 2.30ಕ್ಕೆ ಹೊರಡಲಿದೆ. ರಾತ್ರಿ 8.30ಕ್ಕೆ ಚೆನ್ನೈ ತಲುಪಲಿದೆ. ಈ ರೈಲು 8 ಎಸಿ ಕೋಚ್‌ಗಳನ್ನು ಹೊಂದಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ಈ ರೈಲು ಕುಪ್ಪಂ, ಬಂಗಾರಪೇಟೆ, ಕೆ. ಆರ್. ಪುರ, ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ. ಮಂಗಳವಾರ ಬೆಳಗ್ಗೆ 8 ಗಂಟೆಯಿಂದೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

ಚೆನ್ನೈ ಮತ್ತು ಬೆಂಗಳೂರು ನಡುವೆ ಪ್ರತಿದಿನದ ನೇರ ರೈಲು ಸಂಚಾರ ಆರಂಭವಾದರೆ ನೂರಾರು ಪ್ರಯಾಣಿಕರಿಗೆ ಸಹಾಯಕವಾಗಲಿದೆ. ನೂರಾರು ಜನರು ಉಭಯ ನಗರಗಳ ನಡುವೆ ಪ್ರತಿದಿನ ಸಂಚಾರವನ್ನು ನಡೆಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+