ಶಾಸಕ ಮುನಿರತ್ನ ಮನೆ ಬಳಿ ಸ್ಫೋಟ ಸಂಭವಿಸಲು ಕಾರಣವೇನು?

ಬೆಂಗಳೂರು, ಮೇ 19: ಶಾಸಕ ಮುನಿರತ್ನ ಅವರ ಮನೆಯ ಬಳಿ ನಡೆದ ಸ್ಫೋಟದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಸ್ಫೋಟಕ್ಕೆ ಕಾರಣವೇನೆಂಬುದು ಬಹಿರಂಗಗೊಂಡಿದೆ. ಸಿನಿಮಾ ಚಿತ್ರೀಕರಣಕ್ಕೆ ತಂದಿದ್ದ ರಾಸಾಯನಿಕವೇ ಕಾರಣ ಎಂದು ತಿಳಿದುಬಂದಿದೆ.

ಪ್ಲಾಸ್ಟಿಕ್ ಮೌಲ್ಡಿಂಗ್‌ಗೆ ಬಳಸಲಾಗುತ್ತಿದ್ದ ಕೆಮಿಕಲ್‌ನಿಂದ ಸ್ಪೋಟಗೊಂಡಿದೆ. ನವಿಲು ಮಾದರಿಯ ಪುತ್ಥಳಿ ನಿರ್ಮಾಣಕ್ಕೆ ಈ ಕೆಮಿಕಲ್ ಬಳಕೆ ಮಾಡಲಾಗುತ್ತಿತ್ತು, ಆ ಕೆಮಿಕಲ್ ತೆಗೆದುಕೊಂಡು ಹೋಗಲು ವೆಂಕಟೇಶ್ ಬಂದಿದ್ದಾಗ ಸ್ಪೋಟ ಸಂಭವಿಸಿದೆ ಎಂದು ಪೊಲೀಸರ ಪ್ರಾಥಮಿಕ ಮಾಹಿತಿ ಮೂಲಕ ತಿಳಿದುಬಂದಿರುವ ಅಂಶವಾಗಿದೆ. ಪೊಲೀಸರ ತನಿಖೆಯಲ್ಲಿ ಇನ್ನೂ ಹಲವಾರು ಅಂಶಗಳು ಬಹಿರಂಗಗೊಂಡಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Chemicals brought to Muniratnas residence for movie shoot caused the blast

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮುನಿರತ್ನ ಅವರ ನಿವಾಸದ ಬಳಿ ಭಾನುವಾರ ಬೆಳಗ್ಗೆ 9.20ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ವ್ಯಕ್ತಿಯ ದೇಹ ಛಿದ್ರವಾಗಿದೆ. ಸ್ಫೋಟ ನಡೆದ ಸ್ಥಳದ ಮನೆಯ ಸುತ್ತಮುತ್ತಲಿನ ಕಿಟಿಕಿಗಾಜುಗಳು ಪುಡಿಯಾಗಿವೆ.

ಇತ್ತೀಚೆಗಷ್ಟೇ ಚಿರಂಜೀವಿ ಸರ್ಜಾ ಮತ್ತು ಆ ದಿನಗಳು ಚೇತನ್ ಅಭಿನಯಿಸುತ್ತಿರುವ ರಣಂ ಸಿನಿಮಾ ಚಿತ್ರೀಕರಣದ ವೇಳೆ ಸಿಲಿಂಡರ್ ಸ್ಪೋಟವಾಗಿ ಇಬ್ಬರು ಮೃತಪಟ್ಟಿದ್ದರು. ಈ ದುರ್ಘಟನೆಯಲ್ಲಿ ಸುಮೈರಾ (28) ಎಂಬ ಮಹಿಳೆ ಮತ್ತು ಆಯಿತಾ (8) ಎಂಬ ಮಗು ಸಾವನ್ನಪಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+