ನಿಮ್ಮ ಗಾಡಿಯ ‘ನಂಬರ್ ಪ್ಲೇಟ್’ ಬಗ್ಗೆ ತಪ್ಪದೆ ಈ ಸುದ್ದಿ ಓದಿ!

ರಾಜ್ಯ ಸಾರಿಗೆ ಇಲಾಖೆ ವತಿಯಿಂದ KA 53/MM ಮುಂಗಡ ಶ್ರೇಣಿ ಪ್ರಾರಂಭಿಸಿ ನೋಂದಣಿ ಸಂಖ್ಯೆಗಳ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಕೆಆರ್ ಪುರಂ ಮೋಟಾರು ವಾಹನದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ KA 53/MM ಮುಂಗಡ ಶ್ರೇಣಿ ಆರಂಭ ಆಗುತ್ತಿದೆ. ಹೀಗಾಗಿ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದ್ದು, ಯಾವಾಗ ನಡೆಯುತ್ತಿದೆ & ಎಲ್ಲಿ ನಡೆಯುತ್ತೆ ಗೊತ್ತಾ ಈ ಹರಾಜು ಪ್ರಕ್ರಿಯೆ?

ಅಂದಹಾಗೆ KA 53/MM ಮುಂಗಡ ಶ್ರೇಣಿ ಪ್ರಾರಂಭಿಸಿ, ನೋಂದಣಿ ಸಂಖ್ಯೆಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನ ಜನವರಿ 18ರ ಮಧ್ಯಾಹ್ನ 12 ಗಂಟೆಗೆ ಸಾರಿಗೆ ಆಯುಕ್ತರ ಕಚೇರಿ 1ನೇ ಮಹಡಿ, ಟಿಟಿಎಂಸಿ ಕಟ್ಟಡ, ಕೆ.ಎಚ್.ರಸ್ತೆ, ಶಾಂತಿನಗರ, ಬೆಂಗಳೂರು-560027 ಇಲ್ಲಿ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಹಾಗಾದರೆ, ಈ ಹರಾಜು ಪ್ರಕ್ರಿಯೆಯ ವೇಳೆ ಯಾವ ಶ್ರೇಣಿ ನಂಬರ್ ಹರಾಜು ಮಾಡಲಾಗುತ್ತೆ? ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.

Checkout The Number Plate Auction Date In Bengaluru Jan 2023

ಇಲ್ಲಿದೆ ಸಂಪೂರ್ಣ ಮಾಹಿತಿ

ನೋಂದಣಿ ಸಂಖ್ಯೆ 1, 123, 1234, 10, 11, 111, 1111, 100, 1000, 1001, 22, 27, 222, 234, 2222, 2727, 33, 36, 63,333, 3333, 3636, 45, 444, 4444, 4455, 4545, 5, 55, 555, 5454, 5555, 6, 63, 666, 6666, 6055, 6363, 7, 72, 77, 777, 786, 7272, 7777, 8, 88, 888, 8055, 8118, 8181, 8888, 9, 90, 99, 900, 909, 999, 9000, 9009, 9090 & 9999 ಸೇರಿ ಉಳಿದ ಸಂಖ್ಯೆಗಳಲ್ಲಿ ಯಾವುದೆ ಇಚ್ಛಿತ ನೋಂದಣಿ ಸಂಖ್ಯೆ ಹಂಚಿಕೆ ಮಾಡಲು ಅವಕಾಶ ಇರುತ್ತದೆ.

ಯಾವ ಯಾವ ವಾಹನ?

ಲಘು ಮೋಟಾರು ವಾಹನ (ಸಾರಿಗೆ ವಾಹನ ಬಿಟ್ಟು ಕಾರು, ಜೀಪು, ಇತ್ಯಾದಿ ಸ್ವಂತ ಉಪಯೋಗಕ್ಕೆ ಬಳಸುವ ವಾಹನಗಳು) ರಾಜ್ಯದ ಯಾವುದೇ ಪ್ರಾಧಿಕಾರದ ಕಚೇರಿಯಲ್ಲಿ ಹೊಸದಾಗಿ ಪ್ರಾರಂಭಿಸುವ ಮುಂಗಡ ಶ್ರೇಣಿಗಳಲ್ಲಿ ಅರ್ಜಿದಾರರು ಕೋರುವ ಆಯ್ಕೆಯ ನೋಂದಣಿ ಸಂಖ್ಯೆ ಬಹಿರಂಗ ಹರಾಜು ಕರೆಯುವ ಮೂಲಕ ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.

ಇನ್ನು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ರವರ ಕಚೇರಿ, 'ಎ' ಬ್ಲಾಕ್, 1 ನೇ ಮಹಡಿ, ಟಿ.ಟಿ.ಎಂ.ಸಿ ಕಟ್ಟಡ, ಬಿ.ಎಂ.ಟಿ.ಸಿ ಸಂಕೀರ್ಣ, ಶಾಂತಿನಗರ, ಬೆಂಗಳೂರು ಇಲ್ಲಿ ಭೇಟಿ ನೀಡಬಹುದು ಎಂದು ಬೆಂಗಳೂರು ದಕ್ಷಿಣ ಅಪರ ಸಾರಿಗೆ ಆಯುಕ್ತರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+