ಡಾ. ಪದ್ಮಿನಿ ಪ್ರಸಾದ್ ಆಪ್ತ ಸಮಾಲೋಚನೆ ಹೆಸರಿನಲ್ಲಿ ಮಹಿಳೆಯರಿಗೆ ಮೋಸ !

ಬೆಂಗಳೂರು, ಜನವರಿ 01: ರಾಜ್ಯದೆಲ್ಲೆಡೆ ಚಿರ ಪರಿಚಿತ ಸ್ತ್ರೀರೋಗ ಹಾಗೂ ಲೈಂಗಿಕ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಮಹಿಳೆಯರ ಸಮಸ್ಯೆ ಪರಿಹರಿಸುವ ನಟನೆ ಮಾಡಿ ಮಹಿಳೆಯರ ಗುಪ್ತಾಂಗ ವಿಡಿಯೋ ಪಡೆದು ಮೋಸ ಮಾಡಿರುವ ಜಾಲ ಬೆಳಕಿಗೆ ಬಂದಿದೆ.

ಸ್ತ್ರೀರೋಗ ಹಾಗೂ ಲೈಂಗಿಕ ಸಮಸ್ಯೆ ಕುರಿತು ಖಾಸಗಿ ವಾಹಿನಿಗಳಲ್ಲಿ ಸಲಹೆ ನೀಡುವ ಮೂಲಕ ಪದ್ಮಿನಿ ಪ್ರಸಾದ್ ರಾಜ್ಯದೆಲ್ಲೆಡೆ ಪರಿಚಿತರಾಗಿದ್ದಾರೆ. ರಾಜಾಜಿನಗರದಲ್ಲಿ ರಮಾಮಣಿ ನರ್ಸಿಂಗ್ ಹೋಮ್ ಇಟ್ಟುಕೊಂಡಿದ್ದಾರೆ. ಡಾ. ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ಸೈಬರ್ ವಂಚಕರು ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆಗೆದಿದ್ದಾರೆ. ಅದಕ್ಕೆ ಅವರದ್ದೇ ಪೋಟೋ ಹಾಕಿದ್ದಾರೆ. ಡಾ. ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ಮೊದಲು ಸ್ನೇಹಿತರಿಗೆ ಮನವಿ ಕಳಿಸಿದ್ದಾರೆ. ಅದನ್ನು ಸ್ವೀಕರಿಸಿದ ಯುವತಿಯರಿಗೆ ಹಾಗೂ ವಿವಾಹಿತ ಮಹಿಳೆಯರ ಸಮಸ್ಯೆಗೆ ಆನ್‌ಲೈನ್ ನಲ್ಲಿಯೇ ಪರಿಹಾರ ಸೂಚಿಸುವ ಬಗ್ಗೆ ಸಂದೇಶ ವಿನಿಮಯ ಮಾಡಿದ್ದಾರೆ. ಹೀಗೆ ಫೇಸ್ ಬುಕ್ ನಲ್ಲಿ ಆಪ್ತ ಸಮಾಲೋಚನೆ ಮಾಡುವ ಸೋಗಿನಲ್ಲಿ ಮೆಸೇಂಜರ್ ನಲ್ಲಿ ಮಾತುಕತೆ ನಡೆಸಿದ್ದಾರೆ. ಆಪ್ತ ಸಮಾಲೋಚನೆ ಸಂದೇಶಗಳ ವಿನಿಯಮದ ಬಳಿಕ ಗುಪ್ತಾಂಗದ ವಿಡಿಯೋ ಮಾಡಿ ಕಳಿಸುವಂತೆ ಹೇಳಿದ್ದಾರೆ. ವೈದ್ಯರು ಎಂದು ಭಾವಿಸಿ ಕೆಲವರು ಕಳಿಸಿದ್ದಾರೆ ಎನ್ನಲಾಗಿದೆ.

Bengaluru, Cheating for womens in the name of Dr Padmini Prasad !

ಕರೋನಾ ಹಿನ್ನೆಲಯಲ್ಲಿ ಕ್ಲಿನಿಕ್ ಗೆ ಯಾರನ್ನೂ ಕರೆಸಿಕೊಳ್ಳುತ್ತಿಲ್ಲ. ಕೇವಲ ಆನ್‌ಲೈನ್ ನಲ್ಲಿ , ಅದರಲ್ಲೂ ಫೇಸ್ ಬುಕ್ ನಲ್ಲಿ ಮಾತ್ರ ಆಪ್ತ ಸಮಾಲೋಚನೆ ಮಾಡುತ್ತಿರುವುದಾಗಿ ನಂಬಿಸಿ ಕಿರಾಕತರು ಮಹಿಳೆಯರಿಗೆ ಮೋಸ ಮಾಡಿದ್ದಾರೆ. ಹೀಗೆ ಸಾಕಷ್ಟು ಮಹಿಳೆಯರ ಜತೆ ಮಾತುಕತೆ ನಡೆಸಿ ಗುಪ್ತಾಂಗದ ಖಾಸಗಿ ವಿಡಿಯೋಗಳನ್ನು ಪಡೆದುಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಡಾ. ಪದ್ಮಿನಿ ಪ್ರಸಾದ್ ಅವರ ಪರಿಚಿತ ಗ್ರಾಹಕರು ಅವರ ಗಮನಕ್ಕೆ ತಂದಿದ ಬಳಿಕ ಈ ಜಾಲ ಬೆಳಕಿಗೆ ಬಂದಿದೆ. ಆನ್‌ಲೈನ್ ನಲ್ಲಿ ಯಾವುದೇ ರೀತಿಯ ಆಪ್ತ ಸಮಾಲೋಚನೆ ಮಾಡುತ್ತಿಲ್ಲ ಎಂಬುದನ್ನು ವೈದ್ಯರು ಖಚಿತಪಡಿಸಿದ್ದು, ಡಾ. ಪದ್ಮಿನಿ ಪ್ರಸಾದ್ ಎಂದು ನಂಬಿ ಆನ್‌ಲೈನ್ ನಲ್ಲಿ ಚಾಟಿಂಗ್ ಮಾಡಿ ವಿಡಿಯೋ ಕಳಿಸಿದವರು ಇದೀಗ ವಿಲ ವಿಲ ಒದ್ದಾಡುವಂತಾಗಿದೆ.

Bengaluru, Cheating for womens in the name of Dr Padmini Prasad !

ನಕಲಿ ಖಾತೆ ತೆರೆದು ಮಹಿಳೆಯರಿಗೆ ಮೋಸ ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಡಾ. ಪದ್ಮನಿ ಪ್ರಸಾದ್, ನಾನು ಯಾವುದೇ ರೀತಿಯ ಸಾಮಾಜಿಕ ಜಾಲ ತಾಣದ ಖಾತೆಯಿಂದ ಆಪ್ತ ಸಮಾಲೋಚನೆ ಮಾಡಿಲ್ಲ. ಮಾಡುವುದೂ ಇಲ್ಲ. ಯಾರೇ ಇದ್ದರೂ ನೇರವಾಗಿ ಕ್ಲಿನಿಕ್ ನಲ್ಲಿ ಸಂಪರ್ಕಿಸಿ. ಯಾರೋ ದುಷ್ಕರ್ಮಿಗಳು ನನ್ನ ಕ್ಲಿನಿಕ್ ಹಾಗೂ ಆನ್‌ಲೈನ್ ನಲ್ಲಿ ಲಭ್ಯವಿರುವ ಚಿತ್ರಗಳನ್ನು ಬಳಸಿಕೊಂಡು ನಕಲಿ ಖಾತೆ ತೆರೆದಿದ್ದಾರೆ. ಕೆಲವರಿಗೆ ಆಪ್ತ ಸಮಾಲೋಚನೆ ಹೆಸರಿನಲ್ಲಿ ಚಾಟಿಂಗ್ ಮಾಡಿ ಅವರ ಖಾಸಗಿ ಗುಪ್ತಾಂಗ ವಿಡಿಯೋ ಕಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ನನ್ನ ಹೆಸರಿನಲ್ಲಿ ಆಗಿರುವ ಪ್ರಮಾದಕ್ಕೆ ಮೊದಲು ಕ್ಷಮೆ ಯಾಚಿಸುತ್ತೇನೆ. ನಾನು ಯಾವುದೇ ರೀತಿಯಲ್ಲೂ ಆ ರೀತಿ ಕೇಳುವುದಿಲ್ಲ. ಈ ಬಗ್ಗೆ ನನ್ನ ಗ್ರಾಹಕರಿಗೆ ಅರಿವು ಇದೆ. ಕೆಲವು ಮುಗ್ಧರು ಮೋಸ ಹೋಗಿರಬಹುದು. ಈ ಕುರಿತು ನಾನು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ನನ್ನ ಹೆಸರಿನಲ್ಲಿ ನಕಲಿ ಖಾತೆ ತೆಗೆದು ಆನ್‌ಲೈನ್ ಆಪ್ತ ಸಮಾಲೋಚನೆ ಹೆಸರಿನಲ್ಲಿ ಮೋಸ ಮಾಡುವ ಜಾಲಕ್ಕೆ ಬೀಳದಂತೆ ಕೈ ಮುಗಿದು ಕೇಳಿಕೊಂಡಿದ್ದಾರೆ.

Bengaluru, Cheating for womens in the name of Dr Padmini Prasad !

Recommended Video

      Sreesanth was seen on the field after 8 years | Oneindia Kannada

      ಕನ್ನಡದಲ್ಲೇ ಚಾಟಿಂಗ್ : ಇನ್ನು ಡಾ. ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದು ಆಪ್ತ ಸಮಾಲೋಚನೆ ಹೆಸರಿನಲ್ಲಿ ಮೋಸ ಮಾಡಿರುವರು ಕನ್ನಡ ಭಾಷೆಯಲ್ಲಿಯೇ ಮಾತುಕತೆ ನಡೆಸಿದ್ದಾರೆ. ಕನ್ನಡ ಭಾಷೆಯನ್ನು ಇಂಗ್ಲೀಷ್ ನಲ್ಲಿ ಬರೆದು ಪ್ರಶ್ನಿಸಿದ್ದಾರೆ. ಮಹಿಳೆಯೊಬ್ಬರು ತನ್ನ ಪತಿಯ ಲೈಂಗಿಕ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದು, ಅದಕ್ಕೆ ಉತ್ತರಿಸಿರುವ ಸೈಬರ್ ಕಿರಾಕತರು, ಗುಪ್ತಾಂಗ ವಿಡಿಯೋ ಮೆಸೇಂಜರ್ ನಲ್ಲಿ ಕಳುಹಿಸಲು ತಿಳಿಸಿದ್ದಾರೆ. ಸಂಶಯಗೊಂಡ ಮಹಿಳೆ ವಾಟ್ಸಪ್ ಕಾಲ್ ಮಾಡಲು ನಂಬರ್ ಕೇಳಿದರೂ ಕೊಟ್ಟಿಲ್ಲ. ಹೀಗಾಗಿ ಅನುಮಾನಗೊಂಡು ಡಾ. ಪದ್ಮಿನಿ ಪ್ರಸಾದ್ ಅವರನ್ನು ಸಂಪರ್ಕಿಸಿ ವಿಷಯ ಮುಟ್ಟಿಸಿದ್ದಾರೆ. ಹೀಗಾಗಿ ಈ ಸೈಬರ್ ವಂಚನೆ ಬೆಳಕಿಗೆ ಬಂದಿದೆ. ನೂರಾರು ಮಂದಿಗೆ ವೈದ್ಯೆ ಹೆಸರಿನಲ್ಲಿ ಸಂದೇಶ ಕಳಿಸಿದ್ದು, ಸೈಬರ್ ವಂಚಕರ ಈ ಜಾಲಕ್ಕೆ ಬಿದ್ದು ಹಲವರು ಮೋಸ ಹೋಗಿದ್ದಾರೆ ಎನ್ನಲಾಗಿದೆ. ಬ್ಲಾಕ್ ಮೇಲ್ ಮಾಡಲು ಈ ರೀತಿ ಮಾಡಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+