ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡಾಯ ಸಾಹಿತಿ ಚಂಪಾ ರಾಷ್ಟ್ರವಾದಿ ನಾಯಕನನ್ನು ಬಣ್ಣಿಸಿದ್ದು ಹೀಗೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ಎಡಪಂಥೀಯ ವಿಚಾರ ಧಾರೆಯ ಪ್ರಖರ ಚಿಂತಕ ಬಂಡಾಯ ಸಾಹಿತಿ ಎಂದೇ ಖ್ಯಾತರಾದ ಪ್ರೊ.ಚಂದ್ರಶೇಖರ ಪಾಟೀಲ ಬಿಜೆಪಿಯ ರಾಷ್ಟ್ರವಾದಿ ಧೀಮಂತನಾಯಕರೊಬ್ಬರ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸಿಸಿದರು.

ರಾಷ್ಟ್ರವಾದಿ ವಿಚಾರ ಧಾರೆ ಹಾಗೂ ರಾಷ್ಟ್ರವಾದಿ ಸಂಘಟನೆಗಳ ನಿಲುವುಗಳನ್ನು ಖಂಡುತುಂಡಾಗಿ ಆಕ್ಷೇಪಿಸುವ ಚಂಪಾ ಅಪರೂಪಕ್ಕೆಂದು ರಾಷ್ಟ್ರವಾದಿ ನಾಯಕರೊಬ್ಬರ ಹೃದಯ ಶ್ರೀಮಂತಿಕೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.

ಅಂದಹಾಗೆ ಚಂಪಾ ಮಾತನಾಡಿದ್ದು, ದೇಶಕಂಡ ಅಪರೂಪದ ರಾಜನೀತಿಜ್ಞ ಮಾಜಿ ಪ್ರಧಾನಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತು.

Champa Applauds a nationalist leader and statesmen

ಸಂದರ್ಭ, ಶಿವರಾಮಕಾರಂತ ಸಾಹಿತ್ಯ ವೇದಿಕೆ ಸೋಮವಾರ ಏರ್ಪಡಿಸಿದ್ದ 'ಕವಿಯಾಗಿ ವಾಜಪೇಯಿ' ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ.

ಒಬ್ಬ ರಾಜಕಾರಣಿಯಾಗಿ ಸೈದ್ಧಾಂತಿಕ ನಿಲುವುಗಳನ್ನು ಪ್ರತಿಪಾದಿಸಿ ತಮ್ಮ ಕವಿ ಹೃದಯ ಹಾಗೂ ಕವಿತ್ವವನ್ನು ಬದುಕಿನುದ್ದಕ್ಕೂ ಜೀವಂತವಾಗಿಸಿಕೊಂಡು ಸಾಹಿತ್ಯದ ಮೂಲಕ ಜನಮಾನಸವನ್ನು ಜೀವಂತವಾಗಿಟ್ಟ ಅಟಲ್ ಜೀ ಅವರ ಸೃಜನಶೀಲತೆ ಹಾಗೂ ಜೀವನ್ಮುಖಿ ಬದ್ಧತೆಯನ್ನು ಚಂಪಾ ಕೊಂಡಾಡಿದರು.

ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ 'ಅಜಾತಶತ್ರು' ವಾಜಪೇಯಿಕೋಟ್ಯಂತರ ಅಭಿಮಾನಿಗಳನ್ನು ಅಗಲಿದ 'ಅಜಾತಶತ್ರು' ವಾಜಪೇಯಿ

ರಾಜ್ಯ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಗಣೇಶ ಯಾಜಿ ಅವರು ಅಟಲ್ ಜೀ ಅವರ ಕಾವ್ಯಗಳು ಅವರ ಬದುಕಿನ ಸಿದ್ಧಾಂತ ಹಾಗೂ ಜನಪರ ಸಾಧನೆಗಳ ಮೇಲೆ ಬೆಳಕು ಚೆಲ್ಲಿದರು.

English summary
In a rare occasion left ideologist prof.Chandrashekhara Patil has described former prime minister late Atal Bihari Vajpayee, as a true statesmen and eternal poet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X