ಬೆಂಗಳೂರು: ಕ್ಷಣಾರ್ಧದಲ್ಲೇ ಸರಗಳ್ಳನನ್ನ ಸೆರೆಹಿಡಿದ ಈ ಅದ್ಭುತ ದೃಶ್ಯ ಪೊಲೀಸ್ ಬಾಡಿ ಕ್ಯಾಮೆರಾದಲ್ಲಿ ಸೆರೆ, ಭಾರೀ ವೈರಲ್
ಬೆಂಗಳೂರು, ಜನವರಿ, 03: ಬೆಂಗಳೂರಿನಲ್ಲಿ ಈ ಬಾರಿ ರಾಜ್ಯ ರಾಜಧಾನು ಅದ್ಧೂರಿಯಾಗಿ ಹೊಸವರ್ಷ ನಡೆದಿದೆ. ಅಲ್ಲದೆ ಕುಡಿದು ತುರಾಡುತ್ತಾ, ಡಿಜೆ ಸದ್ದುಗಳಿಗೆ ಡ್ಯಾನ್ಸ್ ಮಾಡುವ ಮೂಲಕ ರಂಪಾಟ ಮಾಡುವ ದೃಶ್ಯಗಳು ಕಂಡುಬಂದವು. ಇದರ ಮಧ್ಯದಲ್ಲೇ ಹೊಸ ವರ್ಷದ ಮೊದಲ ದಿನ ಅಂದರೆ (ಜನವರಿ 1, 2024) ಸರಗಳ್ಳನನ್ನು ಕ್ಷಣಾರ್ಧದಲ್ಲೇ ಪೊಲೀಸರು ಬಂಧಿಸಿದ್ದು, ಈ ಕ್ಷಣದ ದೃಶ್ಯಗಳು ಪೊಲೀಸ್ ಬಾಡಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೆ ಇದೇ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಬೆಂಗಳೂರು ಸಂಚಾರ ಪೊಲೀಸರು ಹೊಸ ವರ್ಷದ ಮೊದಲ ದಿನ ಸರಗಳ್ಳನೊಬ್ಬನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಈ ಕ್ಷಣದ ದೃಶ್ಯಗಳು ಅವರ ಬಾಡಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಇದೇ ವಿಡಿಯೋ ಇದೀಗ ಎಲ್ಲಡೆ ಭಾರೀ ವೈರಲ್ ಆಗುತ್ತಿದೆ. ಅದ್ಯ ಈ ಇದೇ ವಿಡಿಯೋವನ್ನು ಬೆಂಗಳೂರು ಪೊಲೀಸ್ ಆಯುಕ್ತರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ ಇಂತಹ ಕಳ್ಳತನ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಹೊಸವರ್ಷ ಸೇರಿದಂತೆ ಇನ್ನಿತರ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಕಳ್ಳತನ ನಡೆದಿರುವ ಉದಾಹರಣೆಗಳು ಇವೆ. ಇನ್ನು ಎಚ್ಚೆತ್ತ ಪೊಲೀಸ್ ಇಲಾಖೆ ಬಾಡಿ ಕ್ಯಾಮೆರಾಗಳ ಮೊರೆಹೋಗಿದ್ದು, ಇದೀಗ ಈ ಒಂದು ಆಲೋಚನೆ ಎಲ್ಲೋ ಒಂದು ಕಡೆ ತುಂಬಾ ಉಪಯುಕ್ತವಾಗುತ್ತಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ.
6 ಲಕ್ಷ ಮೌಲ್ಯದ 150 ಚೀಲ ಬೆಳ್ಳಳ್ಳಿ ಕಳುವು
ದೇಶದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ "ಕೆಂಪುರಾಣಿ" ಟೊಮೆಟೋ ಬೆಲೆ ಗಗನಕ್ಕೇರಿತ್ತು. ನಂತರ ಇದೀಗ ಈರುಳ್ಳಿ ದರ ಏರಿಕೆಯಾಗಿದ್ದು, ತಜ್ಞರ ಪ್ರಕಾರ ಜನವರಿ ವೇಳೆಗೆ ಇಳಿಕೆಯಾಗಲಿದೆ. ಹಾಗೆಯೇ ಇದೀಗ ಕೆ.ಜಿ.ಬೆಳ್ಳುಳ್ಳಿ ದರ 300-ರಿಂದ 400ಕ್ಕೆ ಏರಿಕೆಯಾಗಿದ್ದು, ಇಂತಹ ಸಮಯದಲ್ಲಿ ಚಿತ್ರದುರ್ಗ ಜಿಲ್ಲೆಯ ದಂಡಿಕುರುಬನಹಟ್ಟಿಯ ಗೋದಾಮಿನಲ್ಲಿ ಉದ್ಯಮಿಯೊಬ್ಬರು ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ 150 ಚೀಲ ಬೆಳ್ಳಳ್ಳಿಯನ್ನು ಕಳುವು ಮಾಡಿದ್ದರು.
ಬೆಲೆ ಗಗನಕ್ಕೇರಿದ ಸಮಯದಲ್ಲೇ ರಾಜಲಕ್ಷ್ಮಿ ಕಂಪನಿಯ ಜಿ.ಎಂ.ಬಸವಕಿರಣ್ ಎಂಬುವವರಿಗೆ ಸೇರಿದ ಬೆಳ್ಳುಳ್ಳಿಯನ್ನು ಕದ್ದಿದ್ದಾರೆ. ಗೋದಾಮಿನ ಷಟರ್ ಮುರಿದು ಈ ಕೃತ್ಯ ಎಸಗಲಾಗಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ. ಬೆಳ್ಳುಳ್ಳಿ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಈ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಉದ್ಯಮಿ ಬಸವಕಿರಣ್ ಅವರು 50 ಕೆ.ಜಿ. ತೂಕದ 1,100 ಚೀಲ ಬೆಳ್ಳುಳ್ಳಿಯನ್ನು ಮಧ್ಯಪ್ರದೇಶದಲ್ಲಿ ಖರೀದಿಸಿ ಚಿತ್ರದುರ್ಗಕ್ಕೆ ತಂದಿದ್ದರು. ದಂಡಿನಕುರುಬರಹಟ್ಟಿಯ ಜಯಶೀಲರೆಡ್ಡಿ ಎಂಬುವರ ಗೋದಾಮಿನಲ್ಲಿ 5 ತಿಂಗಳಿನಿಂದ ಸಂಗ್ರಹಿಸಿಟ್ಟಿದ್ದರು. ಗೋದಾಮಿಗೆ ಭೇಟಿ ನೀಡಿದಾಗ ಷಟರ್ ಮುರಿದಿದ್ದು ಗೊತ್ತಾಗಿದೆ. ಬಳಿಕ ಚೀಲಗಳನ್ನು ಪರಿಶೀಲಿಸಿ ದೂರು ನೀಡಿದ್ದಾರೆ ಎಂದು ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದರು.
ಟೊಮೆಟೋ, ಆಲೂಗಡ್ಡೆ, ಈರುಳ್ಳಿ ಮುಂತಾದ ನಿತ್ಯೋಪಯೋಗಿ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿ ಇಳಿದ ಬೆನ್ನಿಗೆ ಈಗ ಬೆಳ್ಳುಳ್ಳಿ ದರ ಗಗನಕ್ಕೆ ಏರಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ನಾಟಿ ಬೆಳ್ಳುಳ್ಳಿಯ ದರ ಒಂದು ಕೆ.ಜಿಗೆ 400 ರೂಪಾಯಿಗೆ ತಲುಪಿದ್ದು, ಹೈಬ್ರಿಡ್ ಬೆಳ್ಳುಳ್ಳಿಯ ದರ ಒಂದು 300 ರೂಪಾಯಿಗೆ ತಲುಪಿದೆ.












Click it and Unblock the Notifications