ಬರಹ ಅಭಿಯಾನದ ಮೂಲಕ ಸೋದರಿ ನಿವೇದಿತಾ ಜಯಂತಿ ಆಚರಣೆ
ಬೆಂಗಳೂರು, ಅಕ್ಟೋಬರ್ 17: ಸೋದರಿ ನಿವೇದಿತಾ ಪ್ರತಿಷ್ಠಾನವು ನಿವೇದಿತಾರ ಜಯಂತಿಯನ್ನು ಅಕ್ಟೋಬರ್ 28 ರಂದು ಆಚರಿಸಲಾಗುತ್ತಿದ್ದು, ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಸೋದರಿ ಸಂದೇಶವನ್ನು ಮನೆ-ಮನೆಗೆ ತಲುಪಿಸುವ ಈ ಯೋಜನೆ ಅತ್ಯಂತ ಸರಳವೆನಿಸಿದರೂ ವಿಶಿಷ್ಟವಾಗಿದೆ.ನೀವು ನಿಮ್ಮ ಮನೆಯ ವಿಳಾಸವನ್ನು ಅವರಿಗೆ ಕಳಿಸಿಕೊಟ್ಟರೆ ಅವರು ಅಂಚೆಯ ಮೂಲಕ ನಿವೇದಿತಾರ ಸಂದೇಶ ನಿಮಗೆ ಖುದ್ದು ಬರೆದು ಕಳಿಸಲಿದ್ದಾರೆ.
ವಾಟ್ಸಪ್ ಫಾರ್ವರ್ಡ್‌ಗಳ ಕಾಲದಲ್ಲಿ ಬರಹ, ಅಂಚೆ ಇವೆಲ್ಲವೂ ಮರೆತೇ ಹೋಗಿದೆ. ಈ ನಿಟ್ಟಿನಲ್ಲಿ ಇದು ಅನೇಕ ಹಳತನ್ನು ಮತ್ತೊಮ್ಮೆ ನೆನಪಿಸುವ ಪ್ರಯತ್ನವೂ ಆಗಲಿದೆ.
ನಿಮ್ಮ ಅಂಚೆ ವಿಳಾಸವನ್ನು ಅವರಿಗೆ ಕಳಿಸಿಬಿಡಿ ಮತ್ತು ನಿಮಗೆಂದೇ ಇರುವ ನಿವೇದಿತಾರ ಸಂದೇಶವನ್ನು ಸಂಭ್ರಮಿಸಿ.

ವಿದೇಶದಿಂದ ಬಂದು ಭಾರತೀಯ ಆಧ್ಯಾತ್ಮವನ್ನು ಆದರಿಸಿ, ಭಾರತೀಯರ ಸೇವೆಗೆ ಅದರಲ್ಲೂ ಮಹಿಳಾ ಜಾಗೃತಿಗಾಗಿ ತಮ್ಮನ್ನು ಅರ್ಪಿಸಿಕೊಂಡ ಧೀಮಂತ ಮಹಿಳೆ.
ಸ್ವಾಮಿ ವಿವೇಕಾನಂದರ ಪ್ರಭಾವಕ್ಕೊಳಗಾದ ನಿವೇದಿತಾ ಅವರು, ಹಿಂದೂ ಧರ್ಮವನ್ನು ಅರ್ಥೈಸಿಕೊಂಡು, ಅದರ ಆದರ್ಶಗಳಲ್ಲಿ ತಮ್ಮ ಬಾಳುವೆಯನ್ನು ನಡೆಸಿ ಸಮಾಜ ಸೇವಕಿಯಾಗಿ ಭಾರತೀಯ ಸಮಾಜದ ಔನ್ನತ್ಯಕ್ಕಾಗಿ ಹಗಲಿರುಳೂ ಶ್ರಮಿಸಿದರು.
ನಿಮ್ಮ ಅಂಚೆ ವಿಳಾಸವನ್ನು ಈ ನಂಬರ್‌ಗೆ ಕಳುಹಿಸಿ. - 9113896395, 8050463680












Click it and Unblock the Notifications