ಚಿನ್ನದಂಥ ಮಹಿಳೆಯರಿಗೆ ಕೆಜಿಕೆ ಜ್ಯುವೆಲ್ಸ್ ಕೊಡುಗೆ
ಬೆಂಗಳೂರು, ಮಾ.6: ಕೆಜಿಕೆ ಸಮೂಹದ ಹೆಸರಾಂತ ಚಿನ್ನಾಭರಣ ತಯಾರಿಕಾ ಸಂಸ್ಥೆ ಎಂಟೈಸ್, ಈ ಬಾರಿಯ ಮಹಿಳಾ ದಿನಕ್ಕಾಗಿ ಬಹಳ ಮುತುವರ್ಜಿ ವಹಿಸಿ ತಯಾರಿಸಿದ ವಿಶಿಷ್ಟ ಹಾಗೂ ಮನೋಹರವಾದ ವಿನ್ಯಾಸದ ಆಭರಣಗಳನ್ನು ಅನಾವರಣಗೊಳಿಸಿದೆ. ಆ ಮೂಲಕ ಸ್ತ್ರೀತ್ವದಲ್ಲಿನ ಚೈತನ್ಯವನ್ನು ಗೌರವಿಸುತ್ತಾ ಮಹಿಳಾದಿನವನ್ನು ವಿಶೇಷವಾಗಿ ಆಚರಿಸುತ್ತಿದೆ.
ಎಂಟೈಸ್ ಹೊರತಂದಿರುವ ಈ ಚಿನ್ನಾಭರಣಗಳ ರಾಶಿಯಲ್ಲಿನ ಪ್ರತಿಯೊಂದು ಆಭರಣವೂ ಬಹಳ ಭಿನ್ನ ಹಾಗೂ ವಿಶಿಷ್ಟವಾದುದೇ ಆಗಿದೆ. ಪ್ರತಿಯೊಬ್ಬ ಮಹಿಳೆಯೂ ಭಿನ್ನವಾಗಿರುವಂತೆ, ತನ್ನದೇ ಆದ ಅಸ್ಮಿತೆಯನ್ನು ಹೊಂದಿರುವಂತೆಯೇ ಎಂಟೈಸ್‍ನ ವಿನೂತನ ಆಭರಣಗಳೂ ಸಹ ವಿಭಿನ್ನತೆಯಿಂದ ಕೂಡಿವೆ.
ಈಗಿನ ಅತಿ ವೇಗದ ಜಗತ್ತಿನಲ್ಲಿ ಪ್ರತಿ ಮಹಿಳೆಯೂ ಹಲವು ಪಾತ್ರಗಳನ್ನು, ಭಿನ್ನ ಹೊಣೆಗಾರಿಕೆಗಳನ್ನು ನಿರ್ವಹಿಸುವುದು ಅನಿವಾರ್ಯ ಹಾಗೂ ಅಗತ್ಯವಾಗಿದೆ. ಕುಟುಂಬದಲ್ಲಿ ಗೃಹಿಣಿ, ಕಚೇರಿಯಲ್ಲಿ ಉದ್ಯೋಗಿ ಹಾಗೂ ಬಂಧುಗಳು ಮತ್ತು ಆತ್ಮೀಯರ ನಡುವೆ ವಿವಿಧ ಬಗೆಯ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ.

ವೈಶಿಷ್ಟ್ಯಗಳು ಮತ್ತು ಭಿನ್ನತೆಗಳ ಸಂಗಮ : ಎಂಟೈಸ್ ನ ಮಹಿಳಾ ದಿನದ ವಿಶೇಷ ಆಭರಣಗಳೂ ಸಹ ಭಿನ್ನತೆ ಮತ್ತು ವೈಶಿಷ್ಟ್ಯತೆಗಳ ಸಂಗಮವೇ ಆಗಿವೆ. ಬಹಳ ಮನೋಹರವಾಗಿ ಕೆತ್ತನೆ ಮತ್ತು ವಿನ್ಯಾಸವನ್ನು ಹೊಂದಿರುವ ಈ ಆಭರಣಗಳು, ಬಹು ವರ್ಣದ ವಜ್ರಗಳನ್ನೂ ತಮ್ಮಲ್ಲಿ ಜೋಡಿಸಿಕೊಂಡಿವೆ. ಹೀಗೆ ಹಲವು ವೈಶಿಷ್ಟ್ಯಗಳು ಮತ್ತು ಭಿನ್ನತೆಗಳ ಸಂಗಮವಾಗಿರುವ ಈ ಆಭರಣಗಳು ಮಹಿಳೆಯರಲ್ಲಿನ ವೈವಿಧ್ಯತೆಯನ್ನೇ ಪ್ರತಿಬಿಂಬಿಸುತ್ತಿವೆ.
ಒಂದು ವೃತ್ತಕಾರದಲ್ಲಿದ್ದರೆ, ಮತ್ತೊಂದು ವಜ್ರ ತುದಿಯಲ್ಲಿ ಮೊನಚಾಗಿರುವಂತಿದೆ. ಇನ್ನೊಂದು ಆಭರಣ ವಜ್ರಗಳನ್ನು ವೃತ್ತಾಕಾರದಲ್ಲಿ ಅಳವಡಿಸಿಕೊಂಡಿದೆ. ಮತ್ತೊಂದು ಆಭರಣದಲ್ಲಿ ಆಯತಾಕಾರದ ವಜ್ರ ಗಮನ ಸೆಳೆಯುತ್ತದೆ. ಆಭರಣಗಳ ವಿನ್ಯಾಸವಷ್ಟೇ ಅಲ್ಲ, ವಜ್ರಗಳ ಬಣ್ಣ ಮತ್ತು ಆಕಾರವೂ ಸಹ ವಿಭಿನ್ನತೆಯಿಂದ ಕೂಡಿದ್ದು, ವನಿತೆಯರ ಅಸ್ಮಿತೆ ಮತ್ತು ವೈವಿಧ್ಯಮಯ ವ್ಯಕ್ತಿತ್ವದ ಸ್ವರೂಪದಂತೆಯೇ ಇವೆ.
ಆಭರಣಗಳ ದೊಡ್ಡ ಸಂಗ್ರಹ: ಎಂಟೈಸ್ ಮಹಿಳಾ ದಿನದ ಆಭರಣಗಳ ಸಂಗ್ರಹವು ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ನೀಡಲು ಅತ್ಯಂತ ಸೂಕ್ತವಾದ ಆಯ್ಕೆಯಾಗಿವೆ. ನಯನ ಮನೋಹರವಾದ ಪುಟ್ಟ ಉಂಗುರಗಳಿಂದ ಆರಂಭಿಸಿ ಚಿತ್ತಾಕರ್ಷಕವಾದ ಬ್ರೇಸ್ಲೆಟ್ ಗಳ ವರೆಗೆ, ಪುಟ್ಟ ಪುಟ್ಟ ಅಲಂಕಾರಿಕ ಕಿವಿಯೋಲೆಗಳಿಂದ ಆರಂಭಿಸಿ ಬಹಳ ಅದ್ದೂರಿಯಾದ ನೆಕ್ಲೇಸ್ ಗಳ ವರೆಗೆ ಬಹು ಆಯ್ಕೆಯ ಚಿನ್ನ ಮತ್ತು ವಜ್ರದ ಆಭರಣಗಳ ದೊಡ್ಡ ಸಂಗ್ರಹವನ್ನೇ ವಿಶ್ವ ಮಹಿಳಾ ದಿನಕ್ಕಾಗಿ ಎಂಟೈಸ್ ಪರಿಚಯಿಸಿದೆ.
ಅಂತರರಾಷ್ಟ್ರೀಯ ಗುಣಮಟ್ಟ, ಶೈಲಿ ಮತ್ತು ವಿನ್ಯಾಸವನ್ನು ಹೊಂದಿರುವ ಈ ಆಭರಣಗಳು, ಅದೇ ವೇಳೆ ಸಾಂಪ್ರದಾಯಿಕತೆಯ ವಿಶಿಷ್ಟತೆಯನ್ನೂ ಮೈಗೂಡಿಸಿಕೊಂಡಿವೆ. ಹಾಗಾಗಿಯೇ ಈ ಆಭರಣಗಳು ಸೂಕ್ಷ್ಮ ಕುಸರಿ ಕಲೆಗಳ ವಿನ್ಯಾಸ ಮತ್ತು ದೇಶೀಯತೆಯ ಅಸ್ಮಿತೆಯನ್ನೂ ಒಂದೇ ಆಕಾರದಲ್ಲಿ ಮೇಳೈಸಿಕೊಂಡಿವೆ. ಹಾಗಾಗಿಯೇ ಹೊಸ ಶೈಲಿ ಮತ್ತು ಸಾಂಪ್ರದಾಯಿಕತೆ ಎರಡನ್ನೂ ಮೆಚ್ಚುವ ಭಾರತೀಯ ನಾರಿಯರಿಗೆ ಹೇಳಿ ಮಾಡಿಸಿದಂತೆಯೇ ಇವೆ.

ಈ ಬಾರಿಯ ಮಹಿಳಾ ದಿನದಲ್ಲಿ ನೀವು ನಿಮ್ಮ ಕುಟುಂಬದ ಮಹಿಳಾ ಸದಸ್ಯೆಯರಿಗೆ ಬಹಳ ವಿಶೇಷ ಬಗೆಯಲ್ಲಿ ಅಭಿನಂದನೆ ಹೇಳಲು, ಅವರ ಪ್ರೀತಿ ವಿಶ್ವಾಸ ತ್ಯಾಗಗಳಿಗೆ ಧನ್ಯವಾದ ಹೇಳಲು, ನಿಮ್ಮ ಬದುಕಿನಲ್ಲಿ ವಿಶೇಷ ಪಾತ್ರ ವಹಿಸುವ ವನಿತೆಗೆ, ನಿಮ್ಮ ಜೀವನ ಸಂಗಾತಿಗೆ ಕೃತಜ್ಞತೆ ಸಲ್ಲಿಸಲು ಎಂಟೈಸ್‍ನ ಈ ವೈಶಿಷ್ಟ್ಯಪೂರ್ಣ ಸುಂದರ ಆಭರಣಗಳು ಬಹಳ ಯೋಗ್ಯವಾದ ಉಡುಗೊರೆಯಾಗಿವೆ. ಅದುವೇ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸರಿಯಾದ ಮಾರ್ಗವಾಗಿದೆ.
ಎಂಟೈಸ್‍ನ ಬೂಟಿಕ್, ಬೆಂಗಳೂರು:
6/1, ರಾಜಾರಾಂ ಮೋಹನ್ ರಾಯ್ ರಸ್ತೆ, ರಿಚ್ಮಂಡ್ ವೃತ್ತ, ಬೆಂಗಳೂರು. ದೂ: 080- 40948644/ 77
ಎಂಟೈಸ್ ಜ್ಯುವೆಲ್ಲರಿ:
ಕೆಜಿಕೆ ಕಂಪೆನಿಗಳ ಸಮೂಹದಿಂದ 2004ರಲ್ಲಿ ಹಾಂಕಾಂಗ್ ನಲ್ಲಿ ಕಾರ್ಯಾರಂಭ ಮಾಡಿದ ಎಂಟೈಸ್ ಜ್ಯುವೆಲ್ಲರಿ ಸಂಸ್ಥೆ, ಸಾಂಪ್ರದಾಯಿಕ ಶೈಲಿ ಹಾಗೂ ಅಂತರರಾಷ್ಟ್ರೀಯ ಗುಣಮಟ್ಟ ಮತ್ತು ವಿನ್ಯಾಸದ, ಬಹಳ ಸೂಕ್ಷ್ಮ ಕೆತ್ತನೆಯ, ಕರಕುಶಲ ಕಲೆಯ ಚಿನ್ನಾಭರಣಗಳ ತಯಾರಿಕೆಯಲ್ಲಿ ಬಹಳ ಹೆಸರುವಾಸಿಯಾದ ಸಂಸ್ಥೆಯಾಗಿದೆ.
ಎಂಟೈಸ್ ತನ್ನ ಭಾರತದಲ್ಲಿನ ಪ್ರಪ್ರಥಮ ಬೂಟಿಕ್ ಅನ್ನು 2009ರಲ್ಲಿ ಜೈಪುರದಲ್ಲಿ ಆರಂಭಿಸಿತು. ಈಗ ಭಾರತದ ಜೈಪುರ, ಮುಂಬೈ, ಹೊಸದಿಲ್ಲಿ ಮತ್ತು ಬೆಂಗಳೂರು ಸೇರಿದಂತೆ ವಿಶ್ವದ ವಿವಿಧೆಡೆ ಒಟ್ಟು 17 ಸ್ಟ್ಯಾಂಡ್‍ಅಲೋನ್ ಬೂಟಿಕ್ ಗಳನ್ನು ಸ್ಥಾಪಿಸಿದೆ. ಹಾಂಕಾಂಗ್, ಚೈನಾದಲ್ಲಿಯೂ ಎಂಟೈಸ್ ಜ್ಯುವೆಲ್ಲರಿಯ ಬೂಟಿಕ್ ಗಳಿವೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಪ್ರೀತಾ ಅಗರ್ವಾಲ್
ಕಮ್ಯುನಿಕೇಷನ್ ಮ್ಯಾನೇಜರ್
ಕೆಜಿಕೆ ಎಂಟೈಸ್
ಮೊ: +91 9811558146
-
Gold Rate March 23: ಚಿನ್ನ - ಬೆಳ್ಳಿ ದರ ಭಾರೀ ಕುಸಿತ: ಒಂದೇ ದಿನದಲ್ಲಿ ಶೇ. 4% ಇಳಿಕೆ, ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications