ಟ್ರೆಂಡ್ಸ್ ಸೆಲ್ಫಿ ಸ್ಪರ್ಧೆಯೊಂದಿಗೆ ದಸರಾ ಆಚರಿಸಿ
ಬೆಂಗಳೂರು, ಅಕ್ಟೋಬರ್ 9: ಭಾರತದ ಅತಿದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ರಿಲಯನ್ಸ್ ರಿಟೇಲ್‌ನ ಉಡುಪು ಹಾಗೂ ಇತರ ಪರಿಕರಗಳ ವಿಶೇಷ ಮಳಿಗೆ ಟ್ರೆಂಡ್ಸ್, ಕರ್ನಾಟಕದಲ್ಲಿನ ತನ್ನ ಗ್ರಾಹಕರ ಜೊತೆಗಿನ ಬಾಂಧವ್ಯವನ್ನು ಬಲಗೊಳಿಸುತ್ತಿದೆ.
ದಸರಾ ಕರ್ನಾಟಕದ ನಾಡಹಬ್ಬ. ಇದು 10 ದಿನಗಳ ಉತ್ಸವವಾಗಿದ್ದು, ನವರಾತ್ರಿ ಎಂದು ಕರೆಯಲಾಗುವ ಒಂಬತ್ತು ರಾತ್ರಿಗಳೊಂದಿಗೆ ಆರಂಭವಾಗಿ, ಕೊನೆಯ ದಿನ ವಿಜಯದಶಮಿಯೊಂದಿಗೆ ಮುಕ್ತಾಯವಾಗಲಿದೆ.
ಕೆಡುಕಿನ ಎದುರು ಒಳಿತಿನ ಗೆಲುವಿನ ಸಂಭ್ರಮವಾಗಿ ದಸರಾ, ನವರಾತ್ರಿ ಮತ್ತು ವಿಜಯದಶಮಿ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಚಾಮುಂಡೇಶ್ವರಿ ದೇವತೆ ರಾಕ್ಷಸ ಮಹಿಷಾಸುರನನ್ನು ಸಂಹರಿಸಿದ ದಿನ. ಮೈಸೂರು ಸಂಪ್ರದಾಯವು ಒಳಿತಿಗಾಗಿ ಹೋರಾಡಿದ ಯೋಧರು ಮತ್ತು ರಾಜ್ಯವನ್ನು ಈ ಉತ್ಸವದ ವೇಳೆ ಸಂಭ್ರಮಿಸುತ್ತದೆ.

ಖಡ್ಗ, ಆಯುಧಗಳು, ಆನೆಗಳು, ಕುದುರೆಗಳು, ಯೋಧೆಯ ರೂಪದಲ್ಲಿ ದೇವತೆ ಹಾಗೂ ವಿಷ್ಣುವಿನ ಅವತಾರದ ರಾಮನನ್ನು ಸಾಂಪ್ರದಾಯಿಕವಾಗಿ ಆರಾಧಿಸಲಾಗುತ್ತದೆ. ಕರ್ನಾಟಕದ ಇತರ ಕಡೆಗಳಲ್ಲಿ ಗೊಂಬೆ ಹಬ್ಬದಂತಹ ಹಬ್ಬಗಳನ್ನು ಆಚರಿಸಲಾಗುತ್ತದೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಚಿನ್ನವನ್ನು ಸಂಕೇತಿಸುವ ಬನ್ನಿ ಎಲೆಯ ವಿನಿಮಯ ಅಥವಾ ಬನ್ನಿ ಮರದ ಪೂಜೆಯನ್ನು ನಡೆಸುವ ಮೂಲಕ ದಸರಾವನ್ನು ಆಚರಿಸಲಾಗುತ್ತದೆ.
ಕರ್ನಾಟಕದ ಸಣ್ಣ ಪಟ್ಟಣಗಳಲ್ಲಿಯೂ ತನ್ನ ಗ್ರಾಹಕರನ್ನು ತಲುಪಿರುವ ಟ್ರೆಂಡ್ಸ್, ದಸರಾ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ತನ್ನ ಗ್ರಾಹಕರಿಗೆ ಆಸಕ್ತಿಕರ ಸ್ಪರ್ಧೆಯೊಂದನ್ನು ಆಯೋಜಿಸುತ್ತಿದೆ.
ಟ್ರೆಂಡ್ಸ್ ದಸರಾ ಸೆಲ್ಫಿ ಸ್ಪರ್ಧೆ
'ದಸರಾ ಸಂಭ್ರಮದೊಂದಿಗೆ ಟ್ರೆಂಡ್ಸ್ ಸೆಲ್ಫಿ ಸ್ಪರ್ಧೆ' ಎಂಬ ಆಸಕ್ತಿಕರ ಸ್ಪರ್ಧೆಯೊಂದಿಗೆ ಟ್ರೆಂಡ್ಸ್, ಈ ವರ್ಷ ಮತ್ತೆ ಕರ್ನಾಟಕದ ಸಣ್ಣ ಪಟ್ಟಣಗಳಲ್ಲಿನ ತನ್ನ ಗ್ರಾಹಕರನ್ನು ಈ ಮಂಗಳಕರ ದಸರಾ ಹಬ್ಬದಂದು ಬೆಸೆಯುತ್ತಿದೆ. ಈ ಸ್ಪರ್ಧೆಯ ಮೂಲಕ ಟ್ರೆಂಡ್ಸ್ ತನ್ನ ಗ್ರಾಹಕರಿಂದ, ತಮ್ಮ ಮನೆಯಲ್ಲಿನ ದಸರಾ ಹಬ್ಬದ ಆಚರಣೆಯ ಸೆಲ್ಫಿ ಅಥವಾ ತಾವು ಇರುವ ಫೋಟೋಗಳನ್ನು ಆಹ್ವಾನಿಸುತ್ತಿದೆ.
"ಅತ್ಯುತ್ತಮ ಉಡುಗೆ ತೊಟ್ಟ ದಸರಾ ಹಬ್ಬ ಆಚರಣೆ'' ಎಂದು ನಿರ್ಧರಿಸಲಾಗುವ ಸೆಲ್ಫಿ/ ಫೋಟೋಗೆ ಮೊದಲ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯು 1,500 ರೂಪಾಯಿಯ ಕೊಡುಗೆಯನ್ನು ಒಳಗೊಂಡಿರುತ್ತದೆ. ಅಷ್ಟೇ ಅಲ್ಲ, ಭಾಗವಹಿಸಿದ ಪ್ರತಿಯೊಬ್ಬರಿಗೂ ಟ್ರೆಂಡ್ಸ್ ರಿಯಾಯಿತಿ ಕೂಪನ್‌ಗಳನ್ನು ನೀಡಲಾಗುತ್ತದೆ. ಇವುಗಳನ್ನು ತಮ್ಮ ಹತ್ತಿರದ ಸಣ್ಣ ನಗರಗಳ ಟ್ರೆಂಡ್ಸ್ ಮಳಿಗೆಗಳಲ್ಲಿ ಪಡೆದುಕೊಳ್ಳಬಹುದು. ಸ್ಪರ್ಧೆಯು ಅಕ್ಟೋಬರ್ 24ರಂದು ಕೊನೆಗೊಳ್ಳುತ್ತದೆ.
ಸ್ಪರ್ಧೆಯ ಕುರಿತು ಮಾಹಿತಿಯನ್ನು ವಾಟ್ಸಾಪ್ ಕ್ಯಾಟಲಾಗ್, ಎಸ್ಎಂಎಸ್ ಮತ್ತು ಗ್ರಾಹಕರ ಮನೆ ಮನೆಗೆ ಹಂಚಲಾಗುವ ಟ್ರೆಂಡ್ಸ್ ಕರಪತ್ರಗಳ ಮೂಲಕ ನೀಡಲಾಗುವುದು.
ಆಯಾ ನಗರಗಳಲ್ಲಿನ ಪ್ರತಿಷ್ಠಿತ ಕಲಾ ಶಿಕ್ಷಕರು ಪ್ರವೇಶಗಳನ್ನು ನಿರ್ಣಯಿಸುತ್ತಾರೆ. ಮೊದಲ ಬಹುಮಾನ ವಿಜೇತರನ್ನು ಆಯಾ ಸಣ್ಣ ನಗರಗಳ ಟ್ರೆಂಡ್ಸ್ ಮಳಿಗೆಗಳಿಗೆ ಆಹ್ವಾನಿಸಲಾಗುತ್ತದೆ ಮತ್ತು 1,500 ರೂಪಾಯಿ ಮೌಲ್ಯದ ಬಹುಮಾನವನ್ನು ಖ್ಯಾತ ಮಹಿಳಾ ವೈದ್ಯೆ ಅಥವಾ ಪಾಲಿಕೆ/ ಪೊಲೀಸ್ ಇಲಾಖೆಯಂತಹ ಸರ್ಕಾರಿ ಕಚೇರಿಯ ಹಿರಿಯ ಮಹಿಳಾ ಅಧಿಕಾರಿ ಪ್ರದಾನ ಮಾಡುತ್ತಾರೆ.
ಹಾಗಾದರೆ, ಈ ಬಾರಿಯ ದಸರಾ ಉತ್ಸವಕ್ಕೆ ನಿಮ್ಮ ಯೋಜನೆಗಳು ಏನೇ ಇದ್ದರೂ, ನಿಮ್ಮ ಎಲ್ಲ ಫ್ಯಾಷನ್ ಅಗತ್ಯಗಳನ್ನು ಪೂರೈಸಲು ಇರುವ ವೇದಿಕೆ ಒಂದೇ. ನಿಮ್ಮ ಹತ್ತಿರದ ಸಣ್ಣ ನಗರದ ಟ್ರೆಂಡ್ಸ್ ಮಳಿಗೆಗೆ ಭೇಟಿ ನೀಡಿ, ಮತ್ತು ಅತ್ಯುತ್ತಮ ಹಾಗೂ ಹೊಸದಾದ ಫ್ಯಾಷನ್‌ಗಳನ್ನು ಒಳ್ಳೆಯ ಕೊಡುಗೆಗಳೊಂದಿಗೆ ನಿಮ್ಮದಾಗಿಸಿಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ, ದಸರಾ ಹಬ್ಬದ ಸೆಲ್ಫಿ/ ಫೋಟೋಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ಮರೆಯದಿರಿ. ಹೆಚ್ಚಿನ ವಿವರಗಳಿಗೆ ಟ್ರೆಂಡ್ ಫೇಸ್ಬುಕ್/ ಯೂಟ್ಯೂಬ್ ಇತರೆ ಸಾಮಾಜಿಕ ಜಾಲ ತಾಣ ಪುಟಕ್ಕೆ ಭೇಟಿ ಕೊಡಿ.
ಟ್ರೆಂಡ್ಸ್ ಬಗ್ಗೆ
858 ನಗರಗಳಾದ್ಯಂತ 1,500ಕ್ಕೂ ಅಧಿಕ ಮಳಿಗೆಗಳ ಪ್ರಬಲ ನೆಟ್‌ವರ್ಕ್ ಹೊಂದಿರುವ ಟ್ರೆಂಡ್ಸ್, ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಫ್ಯಾಷನ್ ನೆಲೆಯಾಗಿದೆ. ಇದು ನೂರಕ್ಕೂ ಹೆಚ್ಚು ದೇಶೀ ಹಾಗೂ ಅಂತಾರಾಷ್ಟ್ರೀಯ ಉಡುಪುಗಳು ಮತ್ತು ಸಾಮಗ್ರಿ ಬ್ರ್ಯಾಂಡ್‌ಗಳನ್ನು ಹೊಂದಿದ್ದು, ಪ್ರತಿ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಪುರುಷರು, ಮಹಿಳೆಯರು ಮತ್ತು ಮಕ್ಕಳ ವಿಭಾಗಗಳಲ್ಲಿ ತನ್ನದೇ ಆದ 20 ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ.
ರಿಲಯನ್ಸ್ ಟ್ರೆಂಡ್ಸ್‌ನ ಸ್ವಂತ ಬ್ರ್ಯಾಂಡ್‌ಗಳಲ್ಲಿ ಕೆಲವು ಆವಾಸ- ಮಹಿಳೆಯರಿಗಾಗಿ ವಿವಿಧ ಶ್ರೇಣಿಯ ಭಾರತೀಯ ದಿರಿಸುಗಳಾದ ಸಲ್ವಾರ್ ಕುರ್ತಾ, ಚೂಡಿದಾರ್ ಹಾಗೂ ಮಿಕ್ಸ್- ಎನ್-ಮ್ಯಾಚ್ ಶ್ರೇಣಿಯ ಉಡುಪುಗಳ ಅತ್ಯುತ್ತಮ ಸಂಗ್ರಹಗಳನ್ನು ಇದು ಹೊಂದಿದೆ. ರಿಯೋ- ಯುವ ಮಹಿಳೆಯರಿಗಾಗಿ ಆಕರ್ಷಕ ರೋಮಾಂಚನಕಾರಿ ಶ್ರೇಣಿಯ ಉಡುಪುಗಳು. ಫಿಗ್- ಸೂಕ್ಷ್ಮ, ಸ್ವತಂತ್ರ ಮತ್ತು ವೃತ್ತಿಪರ ಮಹಿಳೆಯರಿಗಾಗಿ ಫ್ಯಾಷನ್ ಉಡುಪು. ಫ್ಯೂಷನ್- ಪೂರ್ವ ಮತ್ತು ಪಶ್ಚಿಮದ ಬೆಸುಗೆ ಹಾಗೂ ಹಿತಕರ ಮತ್ತು ಆಕರ್ಷಕ ಶೈಲಿಯ ಮಹಿಳಾ ಫ್ಯೂಷನ್ ಉಡುಪುಗಳ ಶ್ರೇಣಿ. ನೆಟ್‌ವರ್ಕ್- ಪುರುಷರು ಮತ್ತು ಮಹಿಳೆಯರಿಗೆ ವಿವಿಧ ಶ್ರೇಣಿಯ ಫಾರ್ಮಲ್ ಆಫೀಸ್ ಉಡುಗೆಗಳನ್ನು ಒಳಗೊಂಡಿದೆ.
ನೆಟ್‌ಪ್ಲೇ- ಕಾರ್ಯಸ್ಥಳಗಳಿಗೆ ಸೂಕ್ತವಾದ ಸುಂದರ ಸರಳ ಉಡುಪುಗಳ ಸಂಗ್ರಹ ಇಲ್ಲಿದೆ. ಡಿಎನ್‌ಎಂಎಕ್ಸ್- ಭಾರತದ ಯುವಜನರಿಗಾಗಿ ಡೆನಿಮ್‌ಗಳು, ಟಿ ಶರ್ಟ್ ಮುಂತಾದ ವಿಶೇಷವಾಗಿ ರೂಪಿಸಲಾದ ಫ್ಯಾಷನ್ ಉಡುಗೆಗಳು. ಪರ್ಫಾಮ್ಯಾಕ್ಸ್- ಕ್ರೀಡಾ ಚಟುವಟಿಕೆಗಳಲ್ಲಿ ಅದ್ಭುತ ಪ್ರದರ್ಶನಕ್ಕೆ ನೆರವಾಗುವ ವಿಶೇಷ ಸಕ್ರಿಯ ಉಡುಗೆ ಬ್ರ್ಯಾಂಡ್‌ಗಳು.











Click it and Unblock the Notifications