ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿ ಸೇರಿ ಹಲವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

ಬೆಂಗಳೂರು, ಫೆಬ್ರವರಿ 19: ಬಹುಕೋಟಿ ವಂಚನೆಯ ಆಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇಂದು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಫರೀದ್ ಎಂಬಾತ ಆಂಬಿಡೆಂಟ್ ಸಂಸ್ಥೆ ಸ್ಥಾಪಿಸಿ ಅಧಿಕ ಬಡ್ಡಿ ನೀಡುವುದಾಗಿ ನಂಬಿಸಿ ನೂರಾರು ಜನರಿಂದ 600 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದ. ಈ ಪ್ರಕರಣವನ್ನು ಸಿಸಿಬಿ ತನಿಖೆ ನಡೆಸುತ್ತಿತ್ತು.

ಈ ಪ್ರಕರಣದಲ್ಲಿ ಫರೀದ್‌ನನ್ನು ಇಡಿ ಅಧಿಕಾರಿಗಳ ತನಿಖೆಯಿಂದ ಬಚಾವ್ ಮಾಡುತ್ತೇನೆ ಎಂದು ಫರೀದ್‌ನಿಂದ 20 ಕೋಟಿ ಹಣ ಪಡೆದಿದ್ದರು ಎನ್ನಲಾಗಿತ್ತು. ಸಿಸಿಬಿಯು ಜನಾರ್ದನ ರೆಡ್ಡಿ ಅವರನ್ನು ವಿಚಾರಣೆ ಕೂಡ ನಡೆಸಿತ್ತು. ಆಗ ಈ ಪ್ರಕರಣವು ರಾಜಕೀಯ ವಲಯದಲ್ಲಿಯೂ ಬಹು ಚರ್ಚೆಗೆ ಸಿಲುಕಿತ್ತು.

CCB police submit charge sheet of Ambident case

ಇದೀಗ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಪೊಲೀಸರು 4000 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಡೀಲ್‌ಬಗ್ಗೆ ಜನಾರ್ದನ ರೆಡ್ಡಿ, ಫರೀದ್ ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದ್ದ ತಾಜ್ ವೆಸ್ಟೆಂಡ್ ಹೋಟೆಲ್ ನ ನೌಕರರು, ಜನಾರ್ದನ ರೆಡ್ಡಿ ಮನೆಗೆಲದವರು, ಇನ್ನೂ ಹಲವರನ್ನು ತನಿಖೆಗೊಳಪಡಿಸಿ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+