Get Updates
Get notified of breaking news, exclusive insights, and must-see stories!

ಮಸಾಜ್ ಪಾರ್ಲರ್ ಮೇಲೆ ದಾಳಿ: ಇಬ್ಬರ ಬಂಧನ, ಮೂವರು ಯುವತಿಯರ ರಕ್ಷಣೆ

ಬೆಂಗಳೂರು, ಮಾರ್ಚ್ 5: ಬೆಂಗಳೂರು ನಗರ ಸಿಸಿಬಿ ಪೊಲೀಸರು ಹನುಮಂತನಗರದ ಮಸಾಜ್ ಪಾರ್ಲರ್ ಒಂದರ ಮೇಲೆ ದಾಳಿ ನಡೆಸಿದ್ದು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ಮೂವರು ಯುವತಿಯರನ್ನೂ ರಕ್ಷಿಸಿದ್ದಾರೆ.

ಹನುಮಂತನಗರದಲ್ಲಿ ಸ್ಪಾ ನಡೆಸಲು ಲೈಸನ್ಸ್ ಪಡೆದು 'ಸ್ಟೈಲೋ ಫ್ಯಾಮಿಲಿ ಸಲೂನ್ ಬ್ಯೂಟಿ ಕೇರ್, ಸ್ಲಿಮ್ಮಿಂಗ್ ಕೇರ್ & ವೆಲ್ನೆಸ್ (ಲೆಡೀಸ್ & ಜಂಟ್ಸ್)' ಹೆಸರಿನಲ್ಲಿ ಲೋಕೇಶ್ ಮಡಿವಾಳ ಮತ್ತು ಶ್ರೀಕಾಂತ್ ವೇಶ್ಯಾವಾಟಿಕೆ ಮತ್ತು ಲೈಂಗಿಕ ಚಟುವಟಿಕೆ ನಡೆಸುತ್ತಿದ್ದರು.[7 ಲೈಂಗಿಕ ದೌರ್ಜನ್ಯ ಕೇಸ್, ನರ್ಸರಿ ಶಾಲೆಗೆ ಬೀಗ ಜಡಿದ ಸರ್ಕಾರ]

 CCB police raided on spa, nab two persons, rescue three girls

"ಬಾಡಿ ಟು ಬಾಡಿ ಮಸಾಜ್" "ಹ್ಯಾಪಿ ಎಂಡಿಂಗ್" ಎಂಬಿತ್ಯಾದಿ ಮಸಾಜ್‍ಗಳ ಮೂಲಕ ಲೈಂಗಿಕ ಚಟುವಟಿಕೆ ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಲೋಕೇಶ್ ಮಡಿವಾಳ ಮಂಗಳೂರಿನ ಕಾಟಿಪಳ್ಳ ನಿವಾಸಿಯಾಗಿದ್ದರೆ, ಶ್ರೀಕಾಂತ್ ಶಿವಮೊಗ್ಗದ ಸೊರಬದ ಮುಡುಗೋಡು ಗ್ರಾಮದವನಾಗಿದ್ದಾನೆ. ವೇಶ್ಯಾವಾಟಿಕೆಗೆ ತೊಡಗಿಸಿದ್ದ ಮಹಾರಾಷ್ಟ್ರದ ಒಬ್ಬಳು ಹುಡುಗಿ ಮತ್ತು ಕರ್ನಾಟಕದ ಇಬ್ಬರು ಹುಡುಗಿಯರನ್ನು ಪೊಲೀಸರು ರಕ್ಷಿಸಿದ್ದಾರೆ.[ಅತ್ಯಾಚಾರವಾಗಿ ಆಯ್ತು ವಾರ: ಆರೋಪಿ ಇನ್ನೂ ನಾಪತ್ತೆ]

ಆರೋಪಿಗಳಿಂದ ಒಟ್ಟು 3 ಮೊಬೈಲ್ ಫೋನ್‍ಗಳು, 1 ಡಿ.ವಿ.ಆರ್, 1 ಲ್ಯಾಪ್‍ಟಾಪ್, 1 ಸ್ವೈಪಿಂಗ್ ಮೆಷಿನ್, ಕಾಂಡೋಮ್‍ಗಳು, 1,500 ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+