ಬೆಂಗಳೂರಿನಲ್ಲಿ ಆಫ್ಟರ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ; 24 ಯುವತಿಯರು ಪತ್ತೆ
ಬೆಂಗಳೂರು, ಏಪ್ರಿಲ್ 9: ಬೆಂಗಳೂರಿನ ಮಾರತ್ತಹಳ್ಳಿ ಔಟರ್‌ರಿಂಗ್ ರಸ್ತೆಯ ಐಷಾರಾಮಿ ಹೋಟೆಲ್‌ನಲ್ಲಿ ಬೆಳಗಿನ ಜಾವ 3.30ರವರೆಗೂ ನಡೆಯುತ್ತಿದ್ದ ಆಪ್ಟರ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದು, 64 ಯುವಕರು ಮತ್ತು 24 ಯುವತಿಯರು ಪತ್ತೆಯಾಗಿದ್ದಾರೆ.
ಡ್ರಗ್ಸ್ ಸೇವಿಸಿ ಪಾರ್ಟಿ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಕೊಮೆಟ್ ಹೋಟೆಲ್ ಮಾಲೀಕ ವೆಂಕಟೇಶ್ ಮತ್ತು ಪಾರ್ಟಿ ಆಯೋಜಿಸಿದ್ದ ಡೇನಿಯಲ್ ಕ್ಯಾಶಿಯರ್ ಶಶಾಂಕ ಸೇರಿದಂತೆ ನಾಲ್ಕು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪಾರ್ಟಿಯಲ್ಲಿ ಭಾಗವಹಿಸಿದ ಯುವಕ- ಯುವತಿಯರ ಆರೋಗ್ಯ ತಪಾಸಣೆ ನಡೆಸಲು ಮುಂದಾಗಿದ್ದಾರೆ.

ಆಫ್ರಿಕಾ ಮೂಲದ ಡೇನಿಯಲ್ ಎಂಬಾತ ಈ ಪಾರ್ಟಿಯನ್ನು ಆಯೋಜಿಸಿದ್ದು, ತಡರಾತ್ರಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದ್ದರೂ, ರೂಪ್ ಟಾಪ್‌ನಲ್ಲಿ ತಡರಾತ್ರಿಯವರೆಗೂ ನಡೆದ ಪಾರ್ಟಿಗೆ ಮಧ್ಯರಾತ್ರಿಯಲ್ಲಿ ಮದ್ಯ ಸರಬರಾಜು ಮಾಡಲಾಗಿದೆ.

Recommended Video

ACP ಯನ್ನು ಜೈಲಿಗೆ ಕಳಿಸಿ ಎಂದ ಕರ್ನಾಟಕ ಹೈ ಕೋರ್ಟ್ ಚೀಫ್ ಜಡ್ಜ್ | Oneindia Kannada
ಮದ್ಯದ ಅಮಲಿನಲ್ಲಿದ್ದ ಕೆಲವು ಯುವತಿಯರು ದಾಳಿ ವೇಳೆ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ತೊಂದರೆ ನೀಡುತ್ತಿದ್ದಾರೆ, ಪೊಲೀಸರದ್ದೇ ವಿಡಿಯೋ ಮಾಡುವಂತೆ ಮಹಿಳೆಯೋರ್ವಳು ಕೂಗಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.












Click it and Unblock the Notifications