ಬೆಂಗಳೂರಿನಲ್ಲಿ ಸೆರೆಸಿಕ್ಕ ಲಷ್ಕರ್ ಉಗ್ರ ಅಕ್ತರ್ ಹುಸೇನ್ ಇನ್‌ಸೈಡ್ ಮಾಹಿತಿ
ಬೆಂಗಳೂರು, ಜುಲೈ25: ಬೆಂಗಳೂರಿನಲ್ಲಿ ಉಗ್ರರ ಜೊತೆ ಸಂಪರ್ಕವನ್ನು ಹೊಂದಿದ್ದ ಶಂಕಿತ ಉಗ್ರನನ್ನು ಬೆಂಗಳೂರಿನ ತಿಲಕ್ ನಗರದಲ್ಲಿ ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿರುವ ಉಗ್ರ ಯಾರು? ಆತನ ಹಿನ್ನೆಲೆ ಏನು? ಇವೆಲ್ಲದರ ಇನ್ ಸೈಡ್ ಸ್ಟೋರಿ ಇಲ್ಲಿದೆ.
ಶಂಕಿತ ಉಗ್ರ ಅಕ್ತರ್ ಹುಸೇನ್ ಲಷ್ಕರ್ ಎಂಬಾತನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಈತ ಮೂಲತಃ ಅಸ್ಸಾಂನವನಾಗದ್ದು ಹತ್ತನೇ ತರಗತಿಯವರೆಗೂ ಓದಿದ್ದಾನೆ. ಕಳೆದ ಎರಡು ವರ್ಷಗಳ ಹಿಂದೆ ಸಿಲಿಕಾನ್ ಸಿಟಿಗೆ ಬಂದಿದ್ದ. ಈತನ ಪೋಷಕರು ಯಾರು ಇಲ್ಲ ಎಂದು ತಿಳಿದು ಬಂದಿದ್ದು, ಸುಮಾರು 24 ವಯಸ್ಸಿನ ಅಕ್ತರ್ ಹುಸೇನ್ ಮದುವೆಯಾಗಿರಲಿಲ್ಲ.
ಅಕ್ತರ್ ಹುಸೇನ್ ಜಿಹಾದಿ ಮನಸ್ಥಿತಿಯನ್ನು ಉಳ್ಳವನಾಗಿದ್ದು. ಬೆಂಗಳೂರಿನಲ್ಲೂ ಜಿಹಾದಿಯನ್ನು ಮಾಡುತ್ತಿದ್ದ ಅನ್ನೋದರ ಬಗ್ಗೆ ಮಾಹಿತಿಯು ಲಭ್ಯವಾಗಿದೆ. ಬಡತನ ಹಿನ್ನೆಲೆಯನ್ನು ಉಳ್ಳವರನ್ನು ಟಾರ್ಗೆಟ್ ಮಾಡುತ್ತಿದ್ದ ಹುಸೇನ್ ಆ ಬಳಿಕ ಅವರ ಬ್ರೈನ್ ವಾಷ್ ಮಾಡುತ್ತಿದ್ದಿದ್ದರ ಬಗ್ಗೆ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆಕ್ಟೀವ್ ಆಗಿದ್ದ ಅಕ್ತರ್ ಹುಸೇನ್ ಕೆಲವು ಸಂಘಟನೆಯ ಜೊತೆಯಲ್ಲಿ ಸೇರಿರುವ ಬಗ್ಗೆ ಪೊಲೀಸರಿಗೆ ಅನುಮಾನಗಳಿವೆ. ಈ ಬಗ್ಗೆಯು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್
ಬೆಂಗಳೂರಿನ ತಿಲಕ್ ನಗರದ ಠಾಣಾ ವ್ಯಾಪ್ತಿಯಲ್ಲಿ ಸೆರೆಸಿಕ್ಕ ಶಂಕಿತ ಉಗ್ರ ಅಕ್ತರ್ ಹುಸೇನ್ ಲಷ್ಕರ್ ಎಂಬಾತನನ್ನು ಬಂಧಿಸಿದ ತಕ್ಷಣವೇ ಆತನ ಬಳಿಯಲ್ಲಿದ್ದ ಕೆಲವು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಮೊಬೈಲ್ ಅನ್ನು ಸಹ ಸೀಜ್ ಮಾಡಲಾಗಿದೆ. ಅಲ್ ಕೈದಾ ಸಂಘಟನೆಯ ಜೊತೆಯಲ್ಲಿ ಗುರುತಿಸಿಕೊಳ್ಳಲು ಯತ್ನಿಸಿದ್ದ ಎಂದು ತಿಳಿದುಬಂದಿದೆ. ಯುವಕರನ್ನು ಸೆಳೆಯುವ ಸಲುವಾಗ ಪ್ರಚೋದನಕಾರಿಯಾಗಿ ಫೇಸ್ ಬುಕ್ ಮತ್ತು ಟ್ವಿಟ್ಟರ್‍ಗಳಲ್ಲಿ ಪೋಸ್ಟ್ ಹಾಕುತ್ತಿದ್ದ. ಬರಹಗಳನ್ನು ಬರೆಯುತ್ತಿದ್ದ ಎಂದು ತಿಳಿದು ಬಂದಿದೆ. ಅಕ್ತರ್ ಹುಸೇನ್ ಲಷ್ಕರ್ ನನ್ನು ಬಂಧಿಸಿದ ಸಿಸಿಬಿ ಪೊಲೀಸರು ಈತನ ಜೊತೆಗಿದ್ದ ಅಸ್ಸಾಂ ಮೂಲದ ನಾಲ್ವರನ್ನು ವಶಕ್ಕೆ ತೆಗೆದುಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

ರಾತ್ರಿ ಕಾರ್ಯಾಚರಣೆಯೇ ರೋಚಕ
ಉಗ್ರನ ಬಗ್ಗೆ ಸಿಸಿಬಿ ಪೊಲೀಸರು ಖಚಿತ ಮಾಹಿತಿಯನ್ನು ಪಡೆದುಕೊಂಡಿದ್ದರು. ಸಿಸಿಬಿ ಪೊಲೀಸರು ವಿಶೇಷ ತಂಡವನ್ನು ರಚನೆಯನ್ನು ಮಾಡಿದ್ದರು. ಸುಮಾರು 50 ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದರು. ಇವರು ರಾತ್ರಿ 12 ಗಂಟೆಯವರೆಗೆ ಕಾದುಕುಳಿತು ಉಗ್ರ ಅಕ್ತರ್ ಹುಸೇನ್ ಹೆಡೆ ಮರುರಿಯನ್ನು ಕಟ್ಟಿದ್ದರು. ಇನ್ನು ಈಗ ಬಂಧಿಸಿರು ಅಕ್ತರ್ ಹುಸೇನ್ ನನ್ನು ತೀವ್ರವಾದ ವಿಚಾರಣೆಗೆ ಒಳಪಡಿಸಲಾಗಿದೆ. ಈತನ ಹಿನ್ನೆಲೆ ಏನು? ಯಾವ ಸಂಘಟನೆಯ ಜೊತೆ ಗುರುತಿಸಿಕೊಂಡಿದ್ದ. ಉದ್ದೇಶವೇನು , ಈ ಹಿಂದೆ ಯಾವುದಾದರೂ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದನೇ ಎಂಬುದನ್ನು ತನಿಖೆಯನ್ನು ನಡೆಸಲಾಗುತ್ತಿದೆ. ಈತನ ಜೊತೆಯಲ್ಲಿ ರೂಮ್ ಶೇರ್ ಮಾಡಿದ್ದವರನ್ನು ತನಿಖೆಗೆ ಒಳಪಡಿಸಲಾಗಿದ್ದು ಸತ್ಯಾಸತ್ಯತೆ ಹೊರಬೀಳಲಿದೆ.

ಬೆಂಗಳೂರಿನಲ್ಲಿ ಉಗ್ರನ ಬಂಧನ
ಮನೆ ಮೇಲೆ ದಾಳಿ ಮಾಡಿ ಶಂಕಿತ ಉಗ್ರನನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು ಜೊತೆಯಲ್ಲಿದ್ದ ಮೂವರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.ಕೇಂದ್ರ ಹಾಗೂ ರಾಜ ತನಿಖಾ ಸಂಸ್ಥೆಗಳ ನೆರವಿನಿಂದ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ನಿನ್ನೆ ತಿಲಕ್ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿ ಶಂಕಿತ ಉಗ್ರನನ್ನ ವಶಕ್ಕೆ ಪಡೆದುಕೊಂಡಿದ್ದಾನೆ. ಈತನ ಜೊತೆಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಮೂವರು ಯುವಕರನ್ನ ಪ್ರಶ್ನಿಸಲಾಗುತ್ತಿದೆ. ತನಿಖೆಯಲ್ಲಿ ಇವರ ಪಾತ್ರ ಕಂಡುಬಂದರೆ ವಶಕ್ಕೆ ಪಡೆದುಕೊಳ್ಳಲಾಗುವುದು ಎಂದರು. ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈತನ ಉಗ್ರ ಚಟುವಟಿಕೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.

ಕೆಲವು ದಿನಗಳ ಅಂತರದಲ್ಲೇ ಎರಡನೇ ಉಗ್ರ ಅರೆಸ್ಟ್
ಉಗ್ರ ಸಂಘಟನೆಯೊಂದಕ್ಕೆ ಸೇರಿದವನೆಂದು ಹೇಳಲಾದ ಶಂಕಿತ ಉಗ್ರ ನೊಬ್ಬನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ.ಉಗ್ರನ ಜೊತೆಗೆ ಇದ್ದ ಸ್ಥಳೀಯ ಸಹಚರರನ್ನು ಸಹ ವಿಚಾರಣೆ ನಡೆದಿದ್ದು, ಅವನು ನಡೆಸಿದ ಚಟುವಟಿಕೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಇತ್ತೀಚೆಗೆ, ಜಮ್ಮು ಕಾಶ್ಮೀರ ದಲ್ಲಿ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ಹಾಗೂ ಓಕಳಿಪೂರ ಪ್ರದೇಶದಲ್ಲಿ, ನೆಲೆಸಿದ್ದ, ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ ನಂತರ, ಮತ್ತೊಬ್ಬ ಉಗ್ರನನ್ನು ಪತ್ತೆ ಹಚ್ಚಿ, ಬಂಧಿಸಿದ್ದಾರೆ. ಇದಕ್ಕಾಗಿ, ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.












Click it and Unblock the Notifications