ಮಸೀದಿಗಳ ನಂತರ, ಮತದಾರರನ್ನು ಓಲೈಸಲು ಚರ್ಚ್‌ಗಳಿಗೆ ನುಗ್ಗುತ್ತಿರುವ ಅಭ್ಯರ್ಥಿಗಳು!
ಬೆಂಗಳೂರು, ಮೇ. 01: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ತಮ್ಮ ಗೆಲುವಿಗೆ ಪೂರಕವಾಗುವ ಯಾವುದೇ ಅಂಶವನ್ನು ಬಿಡಲು ಅಭ್ಯರ್ಥಿಗಳು ತಯಾರಿಲ್ಲ. ಶುಕ್ರವಾರದ ದಿನಗಳಲ್ಲಿ ಮಸೀದಿ ಸುತ್ತಿದ ನಂತರ ಮತದಾರರನ್ನು ಓಲೈಸಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳ ಚರ್ಚ್‌ಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ!.
ಜಯನಗರ ಬಿಜೆಪಿ ಅಭ್ಯರ್ಥಿ ಸಿ ಕೆ ರಾಮಮೂರ್ತಿ ಅವರು ತಮ್ಮ ಕ್ಷೇತ್ರದ ಚರ್ಚ್‌ನಲ್ಲಿ ಕ್ರೈಸ್ತ ಮತದಾರರನ್ನು ಭೇಟಿ ಮಾಡಿ ಮತದಾನದ ದಿನವಾದ ಮೇ 10 ರಂದು ತಮ್ಮ ಮತಗಳನ್ನು ನೀಡಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಅದೇ ರೀತಿ, ಸಿವಿ ರಾಮನ್ ನಗರ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಕುಮಾರ್ ಎಸ್, ಓಲ್ಡ್ ಮದ್ರಾಸ್‌ನ ನ್ಯೂ ಬೈಯಪ್ಪನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದಾಗ, ಕ್ರಿಶ್ಚಿಯನ್ ತಮಿಳು ಸಮುದಾಯದ ಜನರನ್ನು ಭೇಟಿ ಮಾಡಿ ಅವರ ಬೆಂಬಲವನ್ನು ಕೋರಿದ್ದಾರೆ.

ಸರ್ವಜ್ಞನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರು ತಮ್ಮ ಪತ್ನಿಯೊಂದಿಗೆ ಭಾನುವಾರ ಚರ್ಚೆಗೆ ಭೇಟಿ ನೀಡಿ ಪಾದ್ರಿಯಿಂದ ಆಶೀರ್ವಾದ ಪಡೆದಿದ್ದಾರೆ. ತಮ್ಮ ಸಮುದಾಯದವರು ಚುನಾವಣೆಯಲ್ಲಿ ತನಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಇನ್ನು, ಗೋವಿಂದರಾಜನಗರ ಅಭ್ಯರ್ಥಿ ಪ್ರಿಯಾ ಕೃಷ್ಣ ಅವರು ಕ್ಷೇತ್ರದ ಚರ್ಚ್‌ನಲ್ಲಿ ಕ್ರೈಸ್ತ ಸಮುದಾಯದವರನ್ನು ಭೇಟಿ ಮಾಡಿದರು. ಜನರೊಂದಿಗೆ ಸಂವಾದ ನಡೆಸಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ಅವರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕ್ರೈಸ್ತ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಶಾಂತಿನಗರ ಶಾಸಕ ಎಂಎ ಹ್ಯಾರಿಸ್ ಅವರು ತಮ್ಮ ವಿಧಾನಸಭಾ ಕ್ಷೇತ್ರದ ಸೇಂಟ್ ಪ್ಯಾಟ್ರಿಕ್ ಚರ್ಚ್, ಸೇಕ್ರೆಡ್ ಹಾರ್ಟ್ ಚರ್ಚ್, ಆಲ್ ಸೇಂಟ್ಸ್ ಚರ್ಚ್ ಮತ್ತು ಇನ್ಫೆಂಟ್ ಜೀಸಸ್ ಚರ್ಚ್ ಸದಸ್ಯರನ್ನು ಭೇಟಿ ಮಾಡುತ್ತಿದ್ದಾರೆ. ತಾವು ಗುರುವಾರ ಸಾಯಿಬಾಬಾ ಮಂದಿರದಲ್ಲಿ ಹಿಂದೂ ಸಮುದಾಯದ ಜನರನ್ನು ಭೇಟಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಒಟ್ಟಾರೆ, ಚುನಾವಣೆ ಸಂದರ್ಭದಲ್ಲಿ ಧಾರ್ಮಿಕ ಮುಖಂಡರನ್ನು ಭೇಟಿಯಾಗುವುದು, ಮಸೀದಿ, ದೇವಾಲಯ ಮತ್ತು ಚರ್ಚ್‌ಗಳಿಗೆ ಭೇಟಿ ನೀಡಿ ಆ ಸಮುದಾಯವನ್ನು ಓಲೈಕೆ ಮಾಡುವುದು ರಾಜಕಾರಣಿಗಳ ಹವ್ಯಾಸವಾಗಿದೆ. ಈ ಚುನಾವಣೆಯಲ್ಲು ಅದು ನಡೆಯುತ್ತಿದೆ. ಆದರೆ, ಸೂಕ್ಷ್ಮಗ್ರಹಿಗಳಾದ ಮತದಾರರು ತಮ್ಮ ಮತ ಯಾರಿಗೆ , ಏಕೆ ಹೋಗುತ್ತಿದೆ ಎಂಬುದನ್ನು ಚಿಂತಿಸಬೇಕಿದೆ.












Click it and Unblock the Notifications