ಹೊಸಪೇಟೆ-ಬೆಂಗಳೂರು ನಡುವೆ ನಿತ್ಯ ಇಂಟರ್‌ಸಿಟಿ ರೈಲಿಗೆ ಆಗ್ರಹ
ಬೆಂಗಳೂರು, ಜೂನ್ 22: ವಿಶ್ವವಿಖ್ಯಾತ ಹಂಪಿ ಸಂಪರ್ಕಿಸುವ ಹೊಸಪೇಟೆಯಿಂದ ರಾಜಧಾನಿ ಬೆಂಗಳೂರಿಗೆ ಮಧ್ಯೆ ಇಂಟರ್‌ಸಿಟಿ ರೈಲು ಆರಂಭಿಸುವಂತೆ ಒತ್ತಾಯಿಸಿ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಕರ್ನಾಟಕ ರೈಲ್ವೆ ಬಳಕೆದಾರರ ವೇದಿಕೆ ಅಭಿಯಾನ ಆರಂಭಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ರೈಲ್ವೆ ಸಚಿವ ಪಿಯೂಷ್ ಗೋಯಲ್, ಹಿರಿಯ ರೈಲ್ವೆ ಅಧಿಕಾರಿಗಳು ರಾಜ್ಯಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್ , ಧಾರವಾಡ ಸಂಸದ ಪ್ರಹ್ಲಾದ್ ಜೋಶಿ, ಹಿರಿಯ ರೈಲ್ವೆ ಅಧಿಕಾರಿಗಳು ಮತ್ತು ಈ ಭಾಗದ ಜನಪ್ರತಿನಿಧಿಗಳನ್ನು ಟ್ಯಾಗ್ ಮಾಡಿ ಟ್ವಿಟ್ಟರ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ.
Pls introduce intercity train btw #Hospete & #Bengaluru early. @BSreeramulu_bjp @drmubl @drmsbc @GMSWR @PiyushGoyal @narendramodi @AnanthKumar_BJP @BSYBJP @DVSBJP @JoshiPralhad @RailwaySeva @RailwayBoard #Karnataka #Hampi pic.twitter.com/qLuTUk7Ezc
— Karnataka Rail Users (@KARailway) June 22, 2018
ಹೊಸಪೇಟೆಯಿಂದ ಬಳ್ಳಾರಿ ಮಾರ್ಗವಾಗಿ ರಾಯದುರ್ಗ, ಚಳ್ಳಕೆರೆ, ಚಿತ್ರದುರ್ಗ, ಚಿಕ್ಕಜಾಜೂರು, ಬೀರೂರು, ಕಡೂರು ಅರಸೀಕೆರೆ ಹಾಗೂ ತುಮಕೂರು ಮೂಲಕ ಬೆಂಗಳೂರನ್ನು ಸಂಪರ್ಕಿಸಲು ನಿತ್ಯ ರೈಲು ಸಂಪರ್ಕ ಆರಂಭಿಸಬೇಕು. ಇದರಿಂದ ವಿಶ್ವವಿಖ್ಯಾತ ತಾಣವಾದ ಹಂಪಿಗೆ ಪ್ರವಾಸಕ್ಕೆ ಬರುವವರಿಗೆ ಅನುಕೂಲವಾಗಲಿದೆ.

ದೇಶವಿದೇಶಗಳಿಂದ ನಿತ್ಯ ಸಹಸ್ರಾರು ಜನರು ಹಂಪಿಗೆ ಭೇಟಿ ನೀಡುತ್ತಿದ್ದು, ರಾಜಧಾನಿ ಬೆಂಗಳೂರಿನಿಂದ ಸರಿಯಾದ ರೈಲು ಸಂಪರ್ಕವಿಲ್ಲ ಹೀಗಾಗಿ ನಿತ್ಯ ಇಂಟರ್‌ಸಿಟಿ ರೈಲು ಆರಂಭಿಸಿದರೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹಂಪಿ ಅಭಿವೃದ್ಧಿಗೆ ಮತ್ತಷ್ಟು ನೆರವಾಗಲಿದೆ. ಹಾಗೂ ಈ ಭಾಗದ ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದು ರೈಲ್ವೆ ಬಳಕೆದಾರರ ವೇದಿಕೆ ಟ್ವಿಟ್ಟರ್ ಅಭಿಯಾನ ಆರಂಭಿಸಿದೆ.












Click it and Unblock the Notifications