ಮೈದಾನದ ಭಾಷಣ ಬೇಡ: ಸಮಸ್ಯೆಯಿದ್ದ ಜಾಗದಲ್ಲಿ ನಿಂತು ಪ್ರಚಾರ ಮಾಡಿ

Recommended Video

      Karnataka Elections 2018 : ರಾಜಕೀಯ ನಾಯಕರಿಗಾಗಿ ಬೆಂಗಳೂರಿನಲ್ಲೊಂದು ಅಭಿಯಾನ | Oneindia Kannada

      ಬೆಂಗಳೂರು, ಏಪ್ರಿಲ್ 03: ವಿವಿಧ ಪಕ್ಷದ ಅಭ್ಯರ್ಥಿಗಳು ಮತ ಯಾಚನೆ ಸಂದರ್ಭದಲ್ಲಿ ಯಾವುದಾದರೊಂದು ಮೈದಾನವನ್ನು ಆರಿಸಿಕೊಳ್ಳುತ್ತಾರೆ, ನಂತರ ಭಾಷಣ ಮುಗಿಸಿ ಹೊರಟುಬಿಡುತ್ತಾರೆ.

      ಅದರಿಂದ ಸ್ಥಳೀಯ ಸಮಸ್ಯೆಗಳು ದೂರವಾಗುವುದಿಲ್ಲ, ಅಭ್ಯರ್ಥಿಗಳು ಆಯಾ ಕ್ಷೇತ್ರದಲ್ಲಿರುವ ಕಲುಷಿತ ಕೆರೆ, ತ್ಯಾಜ್ಯ ಸುರಿಯುವ ಪ್ರದೇಶ, ಕೆಟ್ಟ ರಸ್ತೆ ಇಂತಹ ಪ್ರದೇಶದಲ್ಲಿ ನಿಂತು ಭಾಷಣ ಮಾಡಲು ಸಾರ್ವಜನಿಕರು ಒತ್ತಾಯಿಸಬೇಕಿದೆ ಎಂದು ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಷನ್ ನಾಗರಿಕರಲ್ಲಿ ಮನವಿ ಮಾಡಿದೆ.

      ಸಾರ್ವಜನಿಕರು ಅಭ್ಯರ್ಥಿಗಳು ನೀಡುವ ಸುಳ್ಳು ಭರವಸೆಗಳ ಹೊರತಾಗಿಯೂ ಆಲೋಚಿಸಬೇಕಿದೆ. ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಷನ್ ಸಾರ್ವಜನಿಕರಿಗೆ ಒಂದು ಕೆಲಸವನ್ನು ನೀಡಿದೆ ಅದೇನೆಂದರೆ ತಾವು ಇರುವ ಸುತ್ತಮುತ್ತದಲ್ಲಿರುವ ಸಮಸ್ಯೆಯ ಫೋಟೊವನ್ನು ತೆಗೆದು ಉತ್ತರಹಳ್ಳಿ ರೈಸಿಂಗ್ ಟ್ವಿಟ್ಟರ್ ಹ್ಯಾಂಡಲ್‌ನೊಂದಿಗೆ ಟ್ವೀಟ್ ಮಾಡಬೇಕು.

      Campaign at black spots: RWAs

      ಈ ಕುರಿತಾಗಿ ಸಾಕಷ್ಟು ಚಿತ್ರಗಳನ್ನು ಟ್ವೀಟ್ ಮಾಡಲಾಗಿದೆ. ಬೆಳ್ಳಂದೂರು ನಾಗರಿಕರು ಎದುರಿಸುತ್ತಿರುವ ಕಲುಷಿತ ನೀರಿನ ತೊಂದರೆ, ವೈಟ್‌ ಫೀಲ್ಡ್‌ನಲ್ಲಿ ಪಾದಚಾರಿ ಮಾರ್ಗದ ಮೇಲೆ ಕಟ್ಟಡ ಕಾಮಗಾರಿಯ ಕಚ್ಚಾ ವಸ್ತುಗಗಳನ್ನು ತಂದು ಸುರಿಸಿರುವುದು.ಗುಬ್ಬಲಾಳದ ಬಳಿ ರಸ್ತೆಯೇ ಚರಂಡಿಯಾಗಿರುವುದು ಹೀಗೆ ಅನೇಕ ಸಮಸ್ಯೆಗಳ ಕುರಿತು ಫೋಟೊಗಳು ಲಭ್ಯವಾಗಿದೆ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

      ಇದೆಲ್ಲವನ್ನಿಟ್ಟುಕೊಂಡು ರೆಸಿಡೆಂಟ್ಸ್ ವೆಲ್ ಫೇರ್ ಅಸೋಸೊಯೇಷನ್ ಅವರು ಜನಪ್ರತಿನಿಧಿಗಳಿಗೆ ಸವಾಲೆಸಿದಿದ್ದಾರೆ. ವಿವಿಧ ಪಕ್ಷಗಳ ಅಭ್ಯರ್ಥಿಗಳು, ರೋಡ್ ಶೋ ನಡೆಸುವ ಬದಲು ಇಲ್ಲಿರುವ ಸಮಸ್ಯೆಗಳ ಕುರಿತು ಅದನ್ನು ಹೋಗಲಾಡಿಸುವ ಕುರಿತು ಸಲಹೆ ನೀಡಲಿ ಎಂದು ಸವಾಲು ಹಾಕಿದ್ದಾರೆ. ಅಭ್ಯರ್ಥಿಗಳು ಈ ಸವಾಲನ್ನು ಸ್ವೀಕರಿಸಲಿದ್ದಾರೆಯೇ ಎಂದು ಕಾದುನೋಡಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+