ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಾಳ ಕಾಂಗ್ರೆಸ್ ಟಿಕೆಟ್‌ : ರೇವಣ್ಣ, ಭೈರತಿ ಸುರೇಶ್ ಜಟಾಪಟಿ

|
Google Oneindia Kannada News

ಬೆಂಗಳೂರು, ಜನವರಿ 19 : ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಟಿಕೆಟ್ ಪಡೆಯಲು ಎಚ್.ಎಂ.ರೇವಣ್ಣ ಮತ್ತು ಭೈರತಿ ಸುರೇಶ್ ಪೈಪೋಟಿ ನಡೆಸುತ್ತಿದ್ದಾರೆ.

ಮಂಗಳವಾರ ಭೈರತಿ ಸುರೇಶ್ ಅವರು, ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಎಚ್.ಎಂ.ರೇವಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ, ಚುನಾವಣೆಗೆ ಸ್ಪರ್ಧಿಸದಂತೆ ಮನವೊಲಿಸುವ ಪ್ರಯತ್ನ ಮಾಡಿದರು. ಚುನಾವಣೆಗೆ ಸ್ಪರ್ಧಿಸುವ ಕುರಿತು ಉಭಯ ನಾಯಕರ ನಡುವೆ ವಾಕ್ಸಮರ ನಡೆದು ಸಭೆ ವಿಫಲವಾಯಿತು. [ಹೆಬ್ಬಾಳ ಉಪ ಚುನಾವಣೆ : ಟಿಕೆಟ್ ಪಡೆಯಲು ಪೈಪೋಟಿ]

hebbal

'ಹೆಬ್ಬಾಳ ನನ್ನ ಕ್ಷೇತ್ರ. ನನ್ನ ಕ್ಷೇತ್ರದಲ್ಲಿ ನಿನಗೇನು ಕೆಲಸ?' ಎಂದು ರೇವಣ್ಣ ಅವರು ಸುರೇಶ್ ಅವರನ್ನು ಪ್ರಶ್ನಿಸಿದ್ದು, ಇಬ್ಬರು ನಾಯಕರ ನಡುವಿನ ಸಂಧಾನ ಸಭೆ ವಿಫಲವಾಗಿದೆ. ನಂತರ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾಗೆ ಸ್ಥಳಾಂತರವಾಗಿದೆ. ಯಾರಿಗೆ ಟಿಕೆಟ್? ಎನ್ನುವುದು ಇನ್ನೂ ನಿಗೂಢವಾಗಿದೆ. [ಉಪ ಚುನಾವಣೆ ವೇಳಾಪಟ್ಟಿ]

ಅಣ್ಣಾ ಒಂದು ಅವಕಾಶ ಕೊಡಿ : ಎಚ್.ಎಂ.ರೇವಣ್ಣ ಅವರ ಬಳಿ ಭೈರತಿ ಸುರೇಶ್ ಅವರು, 'ಅಣ್ಣಾ ನನಗೂ ಒಂದು ಅವಕಾಶ ಕೊಡಿ. ಚುನಾವಣೆ ಕಣದಿಂದ ಹಿಂದೆ ಸರಿಯಿರಿ ಎಂದು' ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, 'ನಿನಗೂ ಇನ್ನೂ ಬೆಳೆಯಲು ಅವಕಾಶವಿದೆ. ಬೇರೆ ಕ್ಷೇತ್ರವನ್ನು ಹುಡುಕಿಕೋ' ಎಂದು ರೇವಣ್ಣ ಅವರು ಭೈರತಿ ಸುರೇಶ್ ಅವರಿಗೆ ಸೂಚಿಸಿದರು. [ಹೆಬ್ಬಾಳದಲ್ಲಿ ಬಿಜೆಪಿ ಅಭ್ಯರ್ಥಿ ಯಾರು?]

2013ರ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರೆಹಮಾನ್ ಷರೀಫ್ ಬಿಜೆಪಿಯ ಜಗದೀಶ್ ಕುಮಾರ್ ಅವರ ವಿರುದ್ಧ ಸ್ಪರ್ಧಿಸಿದ್ದರು. 33,026 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಈ ಬಾರಿಯೂ ಮೊಮ್ಮಗನಿಗೆ ಟಿಕೆಟ್ ಕೊಡಿಸಲು ಹಿರಿಯ ನಾಯಕ ಜಾಫರ್ ಷರೀಫ್ ಪ್ರಯತ್ನ ನಡೆಸುತ್ತಿದ್ದಾರೆ. [ಮಾಹಿತಿ : ಇಂಡಿಯಾ ವೋಟ್ಸ್]

ಬಿಜೆಪಿಯಲ್ಲೂ ಒಮ್ಮತ ಮೂಡಿಲ್ಲ : ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿಯಲ್ಲೂ ಒಮ್ಮತ ಮೂಡಿಲ್ಲ. ನಿಧನರಾದ ಶಾಸಕ ಜಗದೀಶ್ ಕುಮಾರ್ ಪತ್ನಿ ಲತಾ ಮತ್ತು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡ ಅವರ ಸೊಸೆ ಸೌಮ್ಯ ಜಗದೀಶ್ ಹೆಸರುಗಳು ಕೇಳಿಬರುತ್ತಿವೆ. ಅಭ್ಯರ್ಥಿ ಯಾರು? ಎಂಬುದು ಜನವರಿ 21ರಂದು ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರವಾಗಲಿದೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಿಂದ ಜಗದೀಶ್ ಕುಮಾರ್ (ಬಿಜೆಪಿ) ಜಯಗಳಿಸಿದ್ದರು. ಅವರ ಅಕಾಲಿಕ ಮರಣದಿಂದಾಗಿ ಉಪ ಚುನಾವಣೆ ಎದುರಾಗಿದೆ. ಜನವರಿ 20ರಂದು ಚುನಾವಣೆ ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಫೆ.13ರಂದು ಮತದಾನ ನಡೆಯಲಿದೆ. ಫೆಬ್ರವರಿ 16ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

English summary
Lobbying has intensified within the Congress party for a ticket to contest the Hebbal assembly constituency by poll scheduled on February 13, 2016. Byrathi Suresh and H.M Revanna lobbying for ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X