ಬೆಂಗಳೂರು ಕ್ರೈಂ: ನಾದಿನಿ ಮೇಲೆ ಕಣ್ಣಾಕಿದ್ದವನ ಕೈಕಟ್‌ ಮಾಡಿದವ ಅಂದರ್!

ಬೆಂಗಳೂರು, ಅಕ್ಟೋಬರ್ 04: ನಾದಿನಿಯನ್ನು ಪ್ರೀತ್ಸೆ ಪ್ರೀತ್ಸೆ ಎಂದು ಪೀಡಿಸುತ್ತಿದ್ದವನನ್ನು ನಡುರಸ್ತೆಯಲ್ಲೇ ಅಡ್ಡಾಡಿಸಿಕೊಂಡು ಬಂದವ ಕೈಕಟ್ ಬಾಯ್ ಮುಚ್ ಎನ್ನುವಂತೆ ಮಾಡಿದ್ದ. ಗ್ಯಾಂಗ್‌ ಕರೆದುಕೊಂಡು ಬಂದು ಯುವಕನ ಮೇಲೆ ಹಲ್ಲೆ ಮಾಡಿದ ತಪ್ಪಿಗೆ ಜೈಲು ಸೇರಿದ್ದಾನೆ.

ಬ್ಯಾಟರಾಯನ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆಗೊಳಗಾದ ಶೋಯೆಬ್ ಎಂಬಾತ ತನ್ನ ಚಿಕ್ಕಪ್ಪನ ಫ್ಯಾಕ್ಟರಿಯನ್ನು ನೋಡಿಕೊಂಡಿದ್ದ. ಆರೋಪಿ ಮುಬಾರಕ್ ಎಂಬಾತನ ಹೆಂಡತಿಯ ತಂಗಿ ಅಂದರೆ ನಾದನಿಯನ್ನು ಚುಡಾಯಿಸುತ್ತಿದ್ದ. ಇಷ್ಟೇಯಲ್ಲದೇ ಪ್ರೀತಿಸುವಂತೆ ಪೀಡಿಸುತ್ತಿದ್ದ. ಈ ವಿಚಾರ ಮುಬಾರಕ್‌ಗೆ ತಿಳಿದು ವಾರ್ನ್‌ ಮಾಡಿದ್ದರು ಸಹ ಶೋಯಬ್ ಯುವತಿಯನ್ನು ಕಾಡುವುದನ್ನು ಬಿಟ್ಟಿರಲಿಲ್ಲ.

ಇದರ ನಡುವೆ ಶೋಯಬ್ ತನ್ನ ಗ್ಯಾಂಗ್‌ ಅನ್ನು ಕರೆದುಕೊಂಡು ಬಂದು ಮುಬಾರಕ್‌ನ ಸಂಬಂಧಿ ಜಿಲನ್ ಎಂಬಾತನ ಮೇಲೆ ಹಲ್ಲೆಯನ್ನು ನಡೆಸಿದ್ದ. ಒಂದೆಡೆ ನಾದಿನಿಯನ್ನು ಪ್ರೀತ್ಸೆ ಪ್ರೀತ್ಸೆ ಎಂದು ಎಷ್ಟೇ ವಾರ್ನ್‌ ಮಾಡಿದ್ದರು ಕಾಟ. ಮತ್ತೊಂದೆಡೆ ತನ್ನ ಸಂಬಂಧಿ ಜಿಲನ್ ಗೆ ಹಲ್ಲೆ. ಈ ಎರಡು ಕೃತ್ಯದಿಂದ ರೋಸಿಹೋಗಿದ್ದ ಮುಬಾರಕ್ ಶೋಯಬ್‌ಗೆ ಹೇಗಾದರು ಮಾಡಿ ಬುದ್ದಿ ಕಲಿಸಬೇಕು. ಆತನನ್ನು ಜೀವಂತವಾಗಿ ಬಿಡಲೇಬಾರದು ಎಂದು ನಿರ್ಧಾರವನ್ನು ಮಾಡಿಬಿಟ್ಟಿದ್ದ.

 ಶೋಯಬ್‌ನ ಕೈಕತ್ತರಿಸಿ ಎಸ್ಕೇಪ್

ಶೋಯಬ್‌ನ ಕೈಕತ್ತರಿಸಿ ಎಸ್ಕೇಪ್

ತನ್ನ ನಾದಿನಿ ಮೇಲೆ ಕಣ್ಣಾಕಿದ್ದ ಶೋಯಬ್‌ಗೆ ಬುದ್ದಿ ಕಲಿಸಲು ನಿರ್ಧರಿಸಿದ್ದ ಮುಬಾರಕ್ ಸ್ಕೆಚ್‌ ಹಾಕಿದ್ದ. ಸೆಪ್ಟೆಂಬರ್ 27ನೇ ತಾರೀಕಿನ ನಡುರಾತ್ರಿಯಲ್ಲಿ ಬಾಪೂಜಿನಗರದಲ್ಲಿ ಶೋಯಬ್ ನ ಕೈಯನ್ನ ದುಷ್ಕರ್ಮಿಗಳು ಕಟ್ ಮಾಡಿ ಪರಾರಿಯಾಗಿದ್ದರು. ಪ್ರಕರಣವನ್ನ ದಾಖಲಿಸಿಕೊಂಡ ಬ್ಯಾಟರಾಯನಪುರ ಪೊಲೀಸರು ತನಿಖೆಯನ್ನು ನಡೆಸಿದ್ದರು. ಹತ್ಯೆಗೆ ಸ್ಕೆಚ್ ಹಾಕಿ ಕೈಕತ್ತರಿಸಿದ್ದಾರೆ ಎಂಬುದು ಪೊಲೀಸರಿಗೆ ತಿಳಿದು ಬಂದಿತ್ತು.

 ನಾದಿನಿ ಮೇಲೆ ಕಣ್ಣಾಕಿದವಮ ಕೈಕಟ್

ನಾದಿನಿ ಮೇಲೆ ಕಣ್ಣಾಕಿದವಮ ಕೈಕಟ್

ನಾದಿನಿ ಮೇಲೆ ಕಣ್ಣಾಕಿದವನನ್ನು ಬಾಪೂಜಿನಗರದಲ್ಲಿ ತಡರಾತ್ರಿ ಅಟ್ಟಡಿಸಿಕೊಂಡು ಹೋದ ಗ್ಯಾಂಗ್ ಮನಸೋಯಿಚ್ಛೆ ಮಚ್ಚನ್ನು ಬೀಸಿತ್ತು. ಆದರೆ ಈ ವೇಳೆ ಶೋಯಬ್‌ನ ಕೈ ಕತ್ತರಿಸಿಹೋಗಿತ್ತು. ಅದೃಷ್ಟವಶಾತ್ ಶೋಯಬ್ ಪ್ರಾಣಾಪಾಯದಿಂದ ಪಾರಾಗಿದ್ದ. ಈ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮುಬಾರಕ್ ಖಾನ್, ಮಹಮ್ಮದ್ ಸಲೀಂ, ಅಬೂಬಕ್ಕರ್ ಸಿದ್ದಿಕಿ ಎಂಬ ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

 ಆರೋಪಿಯ ಸಂಬಂಧಿಯ ಮೇಲೆ ಹಲ್ಲೆ ಮಾಡಿದ್ದ ಶೋಯಬ್

ಆರೋಪಿಯ ಸಂಬಂಧಿಯ ಮೇಲೆ ಹಲ್ಲೆ ಮಾಡಿದ್ದ ಶೋಯಬ್

ಹಲ್ಲೆಗೊಳಗಾದ ಶೋಹೆಬ್ ತನ್ನ ಚಿಕ್ಕಪ್ಪನ ಫ್ಯಾಕ್ಟರಿಯನ್ನ ನೋಡಿಕೊಂಡಿದ್ದ. ಹೀಗಿದ್ದ ಶೋಯಬ್ ಆರೋಪಿ ಮುಬಾರಕ್ ನ ಹೆಂಡತಿಯ ತಂಗಿಯನ್ನ ಚುಡಾಯಿಸ್ತಿದ್ದ. ಅಷ್ಟೇ ಅಲ್ಲದೇ ಪ್ರೀತ್ಸೇ ಪ್ರೀತ್ಸೇ ಅಂತ ಪೀಡಿಸೋಕೆ ಶುರುಮಾಡಿದ್ದ. ಯಾವಾಗ ಶೋಯಬ್ ತನ್ನ ಪತ್ನಿಯ ತಂಗಿಯನ್ನೇ ಚುಡಾಯಿಸೋಕೆ ಶುರುವಾದನೋ ಮುಬಾರಕ್ ನ ಕೋಪ ಎಲ್ಲೆ ಮೀರಿತ್ತು. ಇದೇ ಟೈಮಲ್ಲಿ ಶೋಯಬ್ ಮುಬಾರಕ್ ನ ಸಂಬಂಧಿ ಜಿಲನ್ ಎಂಬಾತನ ಮೇಲೆ ತನ್ನ ಗ್ಯಾಂಗ್ ಕರೆದುಕೊಂಡು ಬಂದು ಹಲ್ಲೆಯನ್ನ ನಡೆಸಿದ್ದ. ಬೆಂಕಿಗೆ ತುಪ್ಪ ಸುರಿದಂತೆ ಕೆಂಡಾಮಂಡಲನಾದ ಮುಬಾರಕ್ ತನ್ನ ಸಂಗಡಿಗರಾದ ಮಹಮ್ಮದ್ ಸಲೀಂ ಹಾಗೂ ಅಬೂಬಕ್ಕರ್ ನನ್ನ ಸೇರಿಸಿಕೊಂಡು ಶೋಹೆಬ್ ನನ್ನ ಕೊಲೆಗೈಯಲು ಪ್ಲ್ಯಾನ್ ರೂಪಿಸಿ ಅಟ್ಯಾಕ್ ಕೂಡ ಮಾಡಿಸಿದ್ದ ಅದೃಷ್ಟವಶಾತ್ ಶೋಹೆಬ್ ಬಚಾವಾಗಿದ್ದಾನೆ.

 ಮೂವರ ಬಂಧನ, ಶೋಯಬ್ ಪ್ರಾಣಾಪಾಯದಿಂದ ಪಾರು

ಮೂವರ ಬಂಧನ, ಶೋಯಬ್ ಪ್ರಾಣಾಪಾಯದಿಂದ ಪಾರು

ಸೆ. 27ರಂದು ಶೋಯಬ್ ಎಂಬಾತನ ಮೇಲೆ ಮಾರಣಂತಿಕ ಹಲ್ಲೆಯಾಗಿತ್ತು. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಗಿತ್ತು. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆಯನ್ನು ಮುಂದುವರೆಸಲಾಗಿದೆ. ಹಲ್ಲೆಗೊಳಗಾದ ಶೋಯಬ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+