ಬೆಂಗಳೂರು ಜಲಮಂಡಳಿ ನೇರ-ಫೋನ್ ಇನ್: ಗ್ರಾಹಕರ ಸಮಸ್ಯೆಗಳಿಗೆ ಅಧ್ಯಕ್ಷರಿಂದಲೇ ನೇರ ಪರಿಹಾರ
ಬೆಂಗಳೂರು: ಬೆಂಗಳೂರು ನಗರಕ್ಕೆ ನೀರು ಕುಡಿಯುವ ಕಾವೇರಿ ನೀರು ಪೂರೈಕೆ ಮಾಡುವ 'ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ' (BWSSB) ತನ್ನ ಗ್ರಾಹಕರ ಕುಂದು ಕೊರತೆಗಳನ್ನು ಆಲಿಸಲು ಏಪ್ರಿಲ್ 10ರಂದು ಶುಕ್ರವಾರ ಸಾರ್ವಜನಿಕರೊಂದಿಗೆ ನೇರ-ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡಿದೆ.
ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳಗ್ಗೆ 09:30 ರಿಂದ 10:30 ಗಂಟೆವರೆಗೆ ಒಟ್ಟು ಒಂದು ಗಂಟೆ ಕಾಲ ನೇರ ಫೋನ್-ಇನ್ ಕಾರ್ಯಕ್ರಮ ಜರುಗಲಿದೆ. ನಿಮ್ಮ ಓಣಿ, ಬಡಾವಣೆಗಳು ಅಥವಾ ನಿಮ್ಮ ಮನೆಯ ನೀರಿನ ಸಂಪರ್ಕ, ಹೊಸ ಸಂಪರ್ಕ, ನೀರಿನ ಬಾಕಿ ಬಿಲ್ ಪಾವತಿ, ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊಳವೆ/ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಬಗ್ಗೆ, ಜಲಮಾಪನ ಜಲಮಂಡಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ನೀವು ನೇರವಾಗಿ ಅಧ್ಯಕ್ಷರಿಗೆ ತಿಳಿಸಬಹುದು. ತ್ವರಿತವಾಗಿ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಲು ಈ ಕಾರ್ಯಕ್ರಮ ಹೆಚ್ಚು ಸಹಕಾರಿಯಾಗುತ್ತದೆ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು
ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ ಇಲ್ಲಿವೆ. ದೂರವಾಣಿ 080-22945119 ಮತ್ತು 080-22229639ಗೆ ಸಂಪರ್ಕಿಸಿ ನಿಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ದೂರು ನೀಡುವವರಿದ್ದರೆ ನೀರಿನ ಸಂಪರ್ಕ ಹೊಂದಿರುವ ತಮ್ಮ ಸಂಪರ್ಕದ ಆರ್.ಆರ್.ಸಂಖ್ಯೆಯನ್ನು ತಿಳಿಸಿ ದೂರನ್ನು ನೀಡುವಂತೆ ತಿಳಿಸಲಾಗಿದೆ. ಸಾರ್ವಜನಿಕರು ಸದರಿ ನೇರ ಫೋನ್-ಇನ್ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳುವಂತೆ ಬೆಂಗಳೂರು ಜಲಮಂಡಳಿಯು ಪ್ರಕಟಣೆಯಲ್ಲಿ ಕೋರಿದೆ.
"ವಿಶ್ವ ಜಲ ದಿನ': ನೀರಿನ ಬಳಕೆ ಮೇಲಿರಲಿ ಇತಿ-ಮಿತಿ
ನೀರು ಅಮೂಲ್ಯ. ಪ್ರತಿಯೊಬ್ಬರಿಗೂ ಗುಣಮಟ್ಟ, ಶುದ್ಧ ಕುಡಿಯುವ ನೀರು ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ಸಾಧ್ಯವಾದಷ್ಟು ಇತಿ ಮಿತಿಯಲ್ಲಿ ನೀರಿನ ಬಳಕೆ ಮಾಡುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB) ಅಧ್ಯಕ್ಷರಾದ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ಹೇಳಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಬೆಂಗಳೂರು ಜಲಮಂಡಳಿ ಅಭಿಯಂತರರ ಸಂಘ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿಯಲ್ಲಿ ಆಯೋಜಿಸಿದ್ದ "ವಿಶ್ವ ಜಲ ದಿನ" ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರಿನ ಜನರಿಗೆ ಶುದ್ಧ ಕುಡಿಯುವ ನೀರು ಮಾತು ಒಳಚರಂಡಿ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಗುಣಮಟ್ಟ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೂ, ಜನರು ನೀರನ್ನು ಪೋಲು ಮಾಡಬಾರದು. ಇತಿ ಮಿತಿಯಲ್ಲಿ ಬಳಕೆ ಮಾಡಬೇಕು. ನೀರು ಇದೆ ಎಂಬ ಕಾರಣಕ್ಕೆ ದುರ್ಬಳಕೆ ಮೂಡುವುದು ತಪ್ಪು. ಇದಕ್ಕೆ ದಂಡ ಕೂಡ ವಿಧಿಸುದ್ದೇವೆ ಎಂದು ಅವರು ಎಚ್ಚರಿಸಿದ್ದಾರೆ.
ನೀರನ್ನು ನಾವು ಗಂಗೆ ಎಂದು ಮಾತೃ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ. ನಾವು ನದಿಯನ್ನು ಮಾಲಿನ್ಯ ಮಾಡುವುದನ್ನು ನಿಲ್ಲಿಸಬೇಕು. ಏಕೆಂದರೆ, ಮಾಲಿನ್ಯ ಮಾಡುವುದು ಸುಲಭ. ಆದರೆ, ಅದನ್ನು ಸಂಸ್ಕೃರಿಸಿ ಇತರೆ ಕಾರ್ಯಕ್ಕೆ ಬಳಕೆ ಮಾಡುವದು ಕಷ್ಟದ ಕೆಲಸ. ಹೀಗಾಗಿ ಎಲ್ಲರೂ ನೀರಿನ ಮಹತ್ವ ಅರಿತು ಬಳಕೆ ಮಾಡಿ ಎಂದು ವಿನಂತಿಸಿಕೊಂಡರು.












Click it and Unblock the Notifications