2021 ರ ವೇಳೆಗೆ ಬೆಂಗಳೂರು ಕೆರೆಗಳೆಲ್ಲಾ ಕ್ಲೀನ್: ಒಳಚರಂಡಿ ಮಂಡಳಿ
ಬೆಂಗಳೂರು, ಅಕ್ಟೋಬರ್ 30: ಬೆಂಗಳೂರು ಯುನೈಟೆಡ್ ಸಂಸ್ಥೆ ನೀಡಿದ್ದ ದೂರಿಗೆ ಉತ್ತರಿಸಿರುವ ಬೆಂಗಳೂರು ಜಲ ಹಾಗೂ ಒಳಚರಂಡಿ ಮಂಡಳಿ ಇನ್ನು ಮೂರು ವರ್ಷಗಳಲ್ಲಿ ಬೆಂಗಳೂರಿನ ಎಲ್ಲ ಕೆರೆಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಭರವಸೆ ನೀಡಿದೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮೇಲೆ ಬೆಂಗಳೂರು ಯುನೈಟೆಡ್ ಸಂಸ್ಥೆ ನೀಡಿದ್ದ ದೂರಿಗೂ ಪ್ರತಿಕ್ರಿಯೆ ಬಂದಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯು ಮಾಲಿನ್ಯ ಹಾಗೂ ನೀರಿನ ಶುದ್ಧತೆ ಬಗ್ಗೆ ವರದಿಗಳನ್ನು ನೀಡಿದೆ.
ವರದಿಗಳ ಪ್ರಕಾರ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ 110 ಹಳ್ಳಿಗಳಲ್ಲಿ ಸೂಕ್ತವಾದ ಮೂಲಸೌಕರ್ಯ ಈಗಲೂ ಇಲ್ಲ. ಈ ಹಳ್ಳಿಗಳಲ್ಲಿ ವೈಜ್ಞಾನಿಕ ಚರಂಡಿ ವ್ಯವಸ್ಥೆಯೂ ಇಲ್ಲ ಎಂಬುದು ವರದಿಯಲ್ಲಿದೆ.

ಲೋಕಾಯುಕ್ತಕ್ಕೆ ಬೆಂಗಳೂರು ಜಲ ಹಾಗೂ ಒಳಚರಂಡಿ ಮಂಡಳಿ ನೀಡಿರುವ ಹೇಳಿಕೆ ಪ್ರಕಾರ ಅವರು ಸೆಪ್ಟೆಂಬರ್ 2021ರ ವೇಳೆಗೆ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುತ್ತಾರೆ ಹಾಗೂ ಎಲ್ಲ ಕೆರೆಗಳ ಶುದ್ಧೀಕರಣ ಮಾಡುತ್ತಾರೆ.












Click it and Unblock the Notifications