ನೀರಿನ ದರ ಏರಿಕೆ, ಇಂದು ತೀರ್ಮಾನ

ಬೆಂಗಳೂರು, ಮೇ 14 : ಬಿಎಂಟಿಸಿ, ಟೋಲ್, ವಿದ್ಯುತ್ ದರಗಳ ಏರಿಕೆ ನಂತರ ಬೆಂಗಳೂರಿಗರಿಗೆ ನೀರಿನ ದರ ಏರಿಕೆ ಶಾಕ್ ಕಾದಿದೆ. ಬುಧವಾರ ಜಲಮಂಡಳಿ ಸಭೆ ನಡೆಯಲಿದ್ದು, ದರ ಏರಿಕೆ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.ಸರ್ಕಾರ ಸಹ ದರ ಏರಿಕೆಗೆ ಈಗಾಗಲೇ ಮೌಖಿಕ ಒಪ್ಪಿಗೆ ನೀಡಿದೆ.

ಬುಧವಾರ ಬೆಂಗಳೂರು ಜಲಮಂಡಳಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಯಲಿದ್ದು, ನೀರಿನ ದರ ಏರಿಕೆ ಮಾಡುವ ಕುರಿತು ತೀರ್ಮಾನ ಕೈಗೊಂಡು ಅಂತಿಮ ಒಪ್ಪಿಗೆಗಾಗಿ ಸರ್ಕಾರಕ್ಕೆ ಕಳುಹಿಸುವ ಸಾಧ್ಯತೆ ಇದೆ. ಸದ್ಯ ವಿದ್ಯುತ್ ದರವೂ ಏರಿಕೆ ಯಾಗಿರುವುದರಿಂದ ನೀರನ ಎಂಬುದು ಮೂರು ಗಂಟೆಗೆ ನಡೆಯಿರುವ ಸಭೆಯಲ್ಲಿ ಅಂತಿಮಗೊಳ್ಳಲಿದೆ.

bwssb

ಸದ್ಯ ಜಲಮಂಡಳಿ ಆದಾಯ ಮಾಸಿಕ ಸರಾಸರಿ 50 ಕೋಟಿ ರೂ. ಇದ್ದರೆ ಅದರಲ್ಲಿ 35 ರಿಂದ 37 ಕೋಟಿ ರೂ. ವಿದ್ಯುತ್ ಬಿಲ್ ಪಾವತಿಸಲಾಗುತ್ತದೆ. ನೀರು ಸರಬರಾಜು ನಿರ್ವಹಣೆಗೆ ಸುಮಾರು 10 ಕೋಟಿ ರೂ. ಖರ್ಚಾಗುತ್ತದೆ. ಆದ್ದರಿಂದ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುದಾನದ ಕೊರತೆ ಕಾಡುತ್ತಿದ್ದು, ದರ ಹೆಚ್ಚಿಸಿ ಅನುದಾನ ಸಂಗ್ರಹ ಮಾಡಲು ಮಂಡಳಿ ಮಂದಾಗಿದೆ. [ಜನರಿಗೆ ವಿದ್ಯುತ್ ದರ ಏರಿಕೆ ಶಾಕ್]

ಜಲಮಂಡಳಿ ಮೂಲಗಳ ಪ್ರಕಾರ ಗೃಹ ಬಳಕೆಗಿಂತ ವಾಣಿಜ್ಯ ಬಳಕೆಗೆ ಹೆಚ್ಚಿನ ದರ ನಿಗದಿ ಮಾಡಲು ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ. ನೀರಿನ ದರದ ಜತೆಗೆ ಒಳಚರಂಡಿ ಶುಲ್ಕವನ್ನೂ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಈ ಕುರಿತು ಸಭೆಯಲ್ಲಿ ಇಂದು ವಿವರವಾದ ಚರ್ಚೆ ನಡೆಯಲಿದೆ.

2005ರ ನಂತರ ಹೆಚ್ಚಾಗಿಲ್ಲ : ಬೆಂಗಳೂರು ಜಲಮಂಡಳಿ 2005ರಲ್ಲಿ ನೀರನ ದರವನ್ನು ಪರಿಷ್ಕರಣೆ ಮಾಡಿತ್ತು. ನಂತರ ಯಾವುದೇ ದರ ಹೆಚ್ಚಳವಾಗಿಲ್ಲ. ಈ ನಡುವೆ 8 ಬಾರಿ ವಿದ್ಯುತ್ ದರ ಏರಿಕೆಯಾಗಿದೆ. ಗ್ರಾಹಕನ ಮನೆಗೆ ಒಂದು ಸಾವಿರ ಲೀ. ನೀರು ತಲುಪಿಸಲು ಮಂಡಳಿಗೆ 36 ರೂ. ಖರ್ಚು ಬರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯದ ದರವೆಷ್ಟು : ಜಲಮಂಡಳಿ ಸದ್ಯ 8 ಸಾವಿರ ಲೀ. ಒಳಗಿನ ಬಳಕೆದಾರರಿಗೆ ಪ್ರತಿ ಸಾವಿರ ಲೀ.ಗೆ 6 ರೂ., 8-15 ಸಾವಿರ ಲೀ. ಒಳಗಿನ ಬಳಕೆದಾರರಿಗೆ ಪ್ರತಿ ಸಾವಿರ ಲೀ.ಗೆ 9 ರೂ., 25-50 ಸಾವಿರ ಲೀ. ಬಳಕೆದಾರರಿಗೆ ಪ್ರತಿ ಸಾವಿರ ಲೀ.ಗೆ 15 ರೂ. ದರ ನಿಗದಿ ಮಾಡಿದೆ. ಇಂದಿನ ಸಭೆಯಲ್ಲಿ ಶೇ 10ರಿಂದ 15ರಷ್ಟು ದರ ಏರಿಕೆ ಮಾಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+