ನೀರು ಸೋರಿಕೆ ತಡೆಗೆ, ಅಕ್ರಮ ಸಂಪರ್ಕ ಪತ್ತೆಗೆ BWSSB ಮಾಸ್ಟರ್ ಪ್ಲಾನ್: ಕಾರ್ಯಕ್ರಮಕ್ಕೆ ಇಂದು ಡಿಸಿಎಂ ಚಾಲನೆ

ಬೆಂಗಳೂರು, ನವೆಂಬರ್ 19: ಬೆಂಗಳೂರಿಗೆ ದೂರದ ಪ್ರದೇಶದಿಂದ ಕಾವೇರಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕಾವೇರಿ ಐದನೇ ಹಂತದ ಯೋಜನೆಯಿಂದ ಬೆಂಗಳೂರಿಗೆ ನೀರು ಬರುತ್ತಿದೆ. ಆದರೆ ಪೈಪ್‌ಗಳಲ್ಲಿ ಆಗಾಗ ನೀರು ಸೋರಿಕೆ, ಸರಬರಾಜಿನಲ್ಲಿ ವ್ಯತ್ಯಯದಂತಹ ಸಮಸ್ಯೆಗಳು ಆಗಾಗ ಉಂಟಾಗುತ್ತವೆ. ನೀರು ಸೋರಿಕೆ ತಡೆಗೆ ಇದೀಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ತಂತ್ರಜ್ಞಾನ ಅಳವಡಿಸಿಕೊಂಡಿದೆ. ವಿನೂತನ ಕಾರ್ಯಕ್ರಮ ರೂಪಿಸಿದೆ. ಅದಕ್ಕೆ ಇಂದು ಚಾಲನೆ ದೊರೆಯಲಿದೆ.

ಈ ಬಗ್ಗೆ ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ಅವರು ಮಾಹಿತಿ ನೀಡಿದರು. ಬೆಂಗಳೂರಿನಾದ್ಯಂತ ನೀರು ಸೋರಿಕೆ ತಡೆಯಲು ಮತ್ತು ಅನಧಿಕೃತ ನೀರು ಹಾಗೂ ಒಳಚರಂಡಿ (ಸೀವೇಜ್) ಸಂಪರ್ಕಗಳನ್ನು ಪತ್ತೆ ಹಚ್ಚಲು BWSSB ಒಂದು ಮಹತ್ವದ ಮತ್ತು ವಿನೂತನ ಕಾರ್ಯಕ್ರಮ ರೂಪಿಸಿದೆ. ಅದಕ್ಕೆ ಇಂದು (ನ.19) ಬುಧವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

BWSSB introduces Blue Force teams and advanced robotic and AI technology to detect water leakage illegal connections and reduce Cauvery water loss

ಈ ಯೋಜನೆಯು ಎರಡು ಪ್ರಮುಖ ಅಂಶಗಳನ್ನು ಒಳಗೊಂಡಿದೆ. 'ಬ್ಲೂ ಫೋರ್ಸ್' ವಿಶೇಷ ದಳದ ಪ್ರಾರಂಭ ಬಿಡಬ್ಲ್ಯೂ ಎಸ್ ಎಸ್ ಬಿಯು ತನ್ನ ಪ್ರತಿಯೊಂದು ಉಪವಿಭಾಗಕ್ಕೆ ಒಂದು ವಿಶೇಷ 'ಬ್ಲೂ ಫೋರ್ಸ್' ತಂಡವನ್ನು (ಒಟ್ಟು 16 ಮೂವರು ಸದಸ್ಯರು) ರಚಿಸಿದೆ. ಈ ವಿಶೇಷ ದಳವು ಈ ವಾರದಿಂದಲೇ ತನ್ನ ಕಾರ್ಯಾಚರಣೆ ಆರಂಭಿಸಲಿದೆ ಎಂದರು.

ಸೋರಿಕೆ ತಡೆಯ ಕಾರ್ಯ ಹೇಗೆ?

ಈ ಕಾರ್ಯಕ್ರಮ ಮೂಲಕ ಅಕ್ರಮ ನೀರು ಬಳಕೆ ಮತ್ತು ಒಳಚರಂಡಿ ಸಂಪರ್ಕಗಳನ್ನು ಪತ್ತೆಹಚ್ಚುವುದು. ಅನಧಿಕೃತವಾಗಿ ನೀರು ಸೋರುವಿಕೆ ಮತ್ತು ಬೈಪಾಸ್ ಸಂಪರ್ಕಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ನೀರಿನ ಸೋರಿಕೆಯಿಂದ ಮಂಡಳಿಗೆ ಆಗುತ್ತಿರುವ ಭಾರಿ ಆರ್ಥಿಕ ನಷ್ಟವನ್ನು ತಡೆಗಟ್ಟುವುದು. ನೀರಿನ ನ್ಯಾಯಯುತ ವಿತರಣೆ ಖಚಿತಪಡಿಸುವುದು ಈ ವಿಶೇಷ ದಳದ ಉದ್ದೇಶವಾಗಿದೆ ಎಂದು ವಿವರಿಸಿದರು.

ರೋಬೋಟಿಕ್ ಮತ್ತು ಎಐ ತಂತ್ರಜ್ಞಾನ ಅಳವಡಿಕೆ

ಕುಡಿಯುವ ನೀರಿನ ಸೋರಿಕೆಯ ನಿಖರ ಸ್ಥಳವನ್ನು ಪತ್ತೆಹಚ್ಚಲು ಮತ್ತು ಅನಗತ್ಯ ರಸ್ತೆ ತೋಡುವಿಕೆಗೆ ಕಡಿವಾಣ ಹಾಕಲು ಮಂಡಳಿಯು ಪ್ರಮುಖ ರೋಬೋಟಿಕ್ ತಂತ್ರಜ್ಞಾನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಈ ರೋಬೋಟ್ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದೆ. ರೋಬೋ ಪರೀಕ್ಷೆಯಿಂದ ನಿಖರವಾದ ದೋಷದ ಸ್ಥಳ ಪತ್ತೆ ಆಗುತ್ತದೆ. ರಸ್ತೆ ತೋಡುವಿಕೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳು ಗಣನೀಯವಾಗಿ ಕಡಿಮೆ ಆಗುತ್ತವೆ. ದೂರು ಪರಿಹಾರ ಪ್ರಕ್ರಿಯೆಯು ವೇಗಗೊಳ್ಳುತ್ತದೆ.

ಅಕ್ರಮ ಸಂಪರ್ಕಗಳಿಂದ ಮಂಡಳಿಗೆ ಭಾರಿ ನಷ್ಟ ಉಂಟಾಗುತ್ತದೆ. ತಂತ್ರಜ್ಞಾನ ಮತ್ತು ಕಾನೂನು ಜಾರಿಗೊಂಡು ಎಲ್ಲ ಉಲ್ಲಂಘನೆಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಈ ವಿನೂತನ ಉಪಕ್ರಮದಿಂದ ಸುಮಾರು ಶೇಕಡ 28ರಷ್ಟು ನೀರಿನ ನಷ್ಟವನ್ನು ಗಣನೀಯವಾಗಿ ಕಡಿತಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.

ತಂತ್ರಜ್ಞಾನದ ಉಪಯೋಗಗಳನ್ನು ನೋಡುವುದಾದರೆ, ಪೈಪ್‌ಲೈನ್‌ಗಳ ಒಳಭಾಗದ ನಿಖರ ಪರಿಶೀಲನೆ ನಡೆಸಲು ಸಾಧ್ಯವಾಗುತ್ತದೆ. ಎಐ ನಿಖರವಾದ ಲೀಕೇಜ್ ಸ್ಥಳ ಪತ್ತೆ ಜೊತೆಗೆ ಆಧಾರಿತ ದೋಷ ಪತ್ತೆಹಚ್ಚುವಿಕೆ ಮತ್ತು ಸಂಪೂರ್ಣ ಪೈಪ್‌ಲೈನ್ ಜಾಲದ ಡಿಜಿಟಲ್ ಮ್ಯಾಪಿಂಗ್ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+