Bengaluru Water Shutdwon: ತಿಂಗಳ ಮೊದಲ ದಿನವೇ ಬೆಂಗಳೂರಲ್ಲಿ ಕಾವೇರಿ ನೀರು ವ್ಯತ್ಯಯ! ಎಲ್ಲೆಲ್ಲಿ?

ಬೆಂಗಳೂರು, ಆಗಸ್ಟ್ 01: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಇಡೀ ನಗರಕ್ಕೆ ನೀರು ಸರಬರಾಜು ಮಾಡುತ್ತಿದೆ. ಈ ಜಲಮಂಡಳಿ ವ್ಯಾಪ್ತಿಯ ಬೆಂಗಳೂರು ಪಶ್ಚಿಮ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ದೊಡ್ಡಗಾತ್ರದ ವಾಲ್ ಕೆಟ್ಟು ಹೋಗಿದೆ. ಈ ಹಿನ್ನೆಲೆ ಸದರಿ ವಾಲ್ ತುರ್ತಾಗಿ ದುರಸ್ತಿಪಡಿಸಬೇಕಾದ ಅಗತ್ಯವಿದೆ. ಹೀಗಾಗಿ ಪಶ್ಚಿಮ ಪ್ರದೇಶಕ್ಕೆ ಇಂದು ಶುಕ್ರವಾರ (ಆಗಸ್ಟ್ 01) ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ದೊಡ್ಡ ಗಾತ್ರದ ವಾಲ್ ಕೆಟ್ಟು ಹೋಗಿರುವುದರಿಂದ ಸದರಿ ಪ್ರದೇಶಕ್ಕೆ ನೀರು ಸರಬರಾಜನ್ನು ಸ್ಥಗಿತಗೊಳಿಸಿ ತುರ್ತಾಗಿ ಇಂದು ಬೆಳಗ್ಗೆ 6ಗಂಟೆಯಿಂದ ಸದರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪಶ್ಚಿಮ ಪ್ರದೇಶಕ್ಕೆ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಇದಕ್ಕೆ ಜಲಮಂಡಳಿ ವಿಷಾದ ವ್ಯಕ್ತಪಡಿಸಿದೆ. ನೀರು ವ್ಯತ್ಯಯದ ಸ್ಥಳಗಳು ಹೀಗಿವೆ.

BWSSB Bengaluru Cauvery Water Shutdwon Today for this Reason Affected Places Here

ನೀರು ವ್ಯತ್ಯಯದ ಪ್ರದೇಶಗಳು

ಚಂದ್ರಾ ಲೇಔಟ್ ಮೊದಲು ಮತ್ತು ಎರಡನೇ ಹಂತ, ಬಿಸಿಸಿ ಲೇಔಟ್, ಅತ್ತಿಗುಪ್ಪೆ, ಮಾರುತಿ ನಗರ, ಜ್ಯೋತಿನಗರ, ವಿದ್ಯಾ ಗಿರಿ ಲೇಔಟ್, ಗಂಗೋಂಡನಹಳ್ಳಿ, ನಾಯಂಡಳ್ಳಿ, ಮೆಟ್ರೋ ಲೇಔಟ್, ವಿಡಿಯೋ ಬಡಾವಣೆ, ಕೆಪಿಎ ಬ್ಲಾಕ್, ಬಸವೇಶ್ವರ ಲೇಔಟ್, ವಿನಾಯಕ ಲೇಔಟ್ ನಾಯಂಡಳ್ಳಿ, ಐಟಿಐ ಲೇಔಟ್ ನಾಯಂಡಳ್ಳಿ, ಪಂತರಪಾಳ್ಯ, ಮೈಸೂರು ರಸ್ತೆ ITI ಲೇಔಟ್, ಎಫ್‌ಸಿಐ ಲೇಔಟ್, ರೋಷನ್ ನಗರ, ಅರುಂಧತಿ ನಗರ, ಮಾಗಡಿ ರಸ್ತೆಯ 16 ರಿಂದ 20ನೇ ಅಡ್ಡರಸ್ತೆ, ಎರಡನೇ ಅಡ್ಡರಸ್ತೆಯಿಂದ 12ನೇ ಅಡ್ಡರಸ್ತೆ.

ಕೆಂಪಾಪುರ ಅಗ್ರಹಾರ, ಅವಲಮ್ಮ ಛತ್ರ, ಬಂಡೆ ಕೊಳಚೆ ಪ್ರದೇಶ, ವಿ ಎಸ್ ಟಿ ಕಾಲೋನಿ,ಅಶ್ವತ್ ನಗರ, ಭುವನೇಶ್ವರಿ ನಗರ, ಕೇಶವ ನಗರ, ಕಸ್ತೂರಿಬಾ ನಗರಆರ್ ಪಿ ಸಿ ಬಡಾವಣೆ, ಹಂಪಿ ನಗರ, ನ್ಯೂ ಕಾಲೋನಿ, ಕವಿಕಾ ಬಡಾವಣೆ, ದೀಪಾಂಜಲಿ ನಗರ, ಮತ್ತು ವೆಂಕಟೇಶ್ವರ ನಗರ ಕೊಳಚೆ ಪ್ರದೇಶ, ಪ್ರಕಾಶ್ ನಗರ, ಮಹಾಲಕ್ಷ್ಮೀ ಲೇಔಟ್, ರಾಜಾಜಿನಗರ 1ಸ್ಟೇಟಸ್ ಬ್ಲಾಕ್, ಸುಬ್ರಮಣ್ಯ ನಗರ,ಗಾಯತ್ರಿ ನಗರ, ನಂದಿನಿ ಲೇಔಟ್ ಮತ್ತು ದಾಸರಹಳ್ಳಿ ವ್ಯಾಪ್ತಿಯಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ಅಡಚಣೆ ಆಗಲಿದೆ ಎಂದು BWSSB ಪ್ರಕಟಣೆಯಲ್ಲಿ ತಿಳಿಸಿದೆ.

ಕಾವೇರಿ 5 ನೇ ಹಂತದ‌ ನೀರು ಸರಬರಾಜುವಿನಲ್ಲಿ ವ್ಯತ್ಯಯ

ಬೆಂಗಳೂರು ಮಹಾನಗರಕ್ಕೆ ಕಾವೇರಿ ನೀರು ಪೂರೈಕೆಯಾಗುವ ತಾತಗುಣಿ ಜಲಚೇರಕ ಯಂತ್ರಗಾರ(ಪಂಪಿಂಗ್ ಹೌಸ್)ದಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದಿಂದ ಆ.1ರಂದು(ಇಂದು) ಕಾವೇರಿ 5ನೇ ಹಂತದ ಯೋಜನೆ ಅಡಿ ನೀರು ಸರಬರಾಗುವ ಪ್ರದೇಶಗಳಲ್ಲಿ ನೀರು ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.

ಮಂಡಳಿಯ ತಂಡದಿಂದ ತಾಂತ್ರಿಕ ದೋಷ ಸರಿಪಡಿಸುವ ಕೆಲಸ ನಡೆಯುತ್ತಿದೆ. ಬೆಂಗಳೂರು ದಕ್ಷಿಣ,ಬೆಂಗಳೂರು ಪೂರ್ವ ಸೇರಿದಂತೆ ಕಾವೇರಿ 5ನೇ ಹಂತದ ನೀರು ಸರಬರಾಜಾಗುವ ಪ್ರದೇಶಗಳಲ್ಲಿ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದ್ದು,ಇದಕ್ಕೆ ಜಲಮಂಡಳಿ ವಿಷಾದ ವ್ಯಕ್ತಪಡಿಸಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+