Property: ಈ ಕಾರಣಕ್ಕೆ ಬೆಂಗಳೂರಿನಲ್ಲಿ ಮನೆ ಖರೀದಿ ಮಾಡುವುದು ಬೆಸ್ಟ್: ಸಾಲ ತೀರಿಸಲು ಎಷ್ಟು ವರ್ಷ ಬೇಕು ?
ಬೆಂಗಳೂರಿನಲ್ಲಿ ಮನೆ ಖರೀದಿ ಮಾಡುವುದಕ್ಕೆ ಸಂಬಂಧಿಸಿದಂತೆ ಭರ್ಜರಿ ಗುಡ್‌ನ್ಯೂಸ್‌ವೊಂದು ಇಲ್ಲಿದೆ. ಬೆಂಗಳೂರಿನಲ್ಲಿ ಆಸ್ತಿ ಖರೀದಿ ಮಾಡಬೇಕು ಎನ್ನುವುದು ಬಾಡಿಗೆ ಮನೆಯಲ್ಲಿ ಇರುವ ಪ್ರತಿಯೊಬ್ಬರ ಆಸೆಯಾಗಿದೆ. ಮನೆ ಬಾಡಿಗೆ ಕಟ್ಟಿ ಬೇರೆ ಯಾರನ್ನೋ ಯಾಕೆ ಉದ್ಧಾರ ಮಾಡಬೇಕು ಅಥವಾ ಈ ರೀತಿ ಬಾಡಿಗೆ ಕಟ್ಟುತ್ತಲ್ಲೇ ಇದ್ದರೆ ದುಡ್ಡು ಉಳಿಸುವುದು ಯಾವಾಗ ಎನ್ನುವ ಪ್ರಶ್ನೆಗಳು ಬರುತ್ತಿರುತ್ತವೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಮನೆಗಳನ್ನು ಭೋಗ್ಯಕ್ಕೆ ಕೊಡುವುದಕ್ಕೂ ಕೆಲವು ಮನೆ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.
ಈ ಎಲ್ಲಾ ಪ್ರಶ್ನೆಗಳಿಗೂ ಅಧ್ಯಯನ ವರದಿಯೊಂದು ಫೂಲ್‌ಸ್ಟಾಪ್ ಇರಿಸಿದೆ. ಉಳಿದ ನಗರಗಳಿಗಿಂತ ಬೆಂಗಳೂರಿನಲ್ಲಿ ಮನೆ ಖರೀದಿ ಮಾಡುವುದು ಉತ್ತಮ ಹಾಗೂ ಅತ್ಯಂತ ಕಡಿಮೆ ಅವಧಿಯಲ್ಲಿ ಮನೆಯ ಮೇಲೆ ಮಾಡುವ ಸಾಲವನ್ನು ತೀರಿಸಬಹುದು ಎಂದೂ ಅಧ್ಯಯನ ವರದಿ ಹೇಳಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಜಾಗ ಮತ್ತು ಮನೆ ಖರೀದಿ ಮಾಡಬೇಕು ಎನ್ನುವುದು ಹಲವರ ಆಸೆ. ಆದರೆ ಬೆಲೆ ಏರಿಕೆ ಹಾಗೂ ಪ್ರಾಪರ್ಟಿ ಬೆಲೆ ಹೆಚ್ಚಳವಾಗುತ್ತಿರುವುದರಿಂದ ಹಲವರಿಗೆ ಹೊಸ ಪ್ರಾಪರ್ಟಿಯನ್ನು ಖರೀದಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ, ಉಳಿದ ನಗರಗಳಿಗಿಂತ ಬೆಂಗಳೂರಿನಲ್ಲಿ ಪ್ರಾಪರ್ಟಿ ಖರೀದಿ ಮಾಡುವುದು ಸುಲಭ ಹಾಗೂ 3ರಿಂದ 8 ವರ್ಷದ ಅವಧಿಯಲ್ಲಿ ಮನೆಯ ಮೇಲೆ ಮಾಡಿರುವ ಸಾಲವನ್ನು ಸುಲಭವಾಗಿ ತೀರಿಸಬಹುದು ಅಂತಲೂ ಅಧ್ಯಯನ ವರದಿ ಹೇಳಿದೆ. ಬೆಂಗಳೂರಿನಲ್ಲಿ ಪ್ರಾಪರ್ಟಿ ಖರೀದಿಗೆ ವಾತಾವರಣ ಹೇಗಿದೆ ಎನ್ನುವ ಬಗ್ಗೆ 1 Finance Research ಕೆಲವೊಂದು ಇಂಟ್ರಸ್ಟಿಂಗ್ ಪಾಯಿಂಟ್ಸ್ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಮನೆ ಖರೀದಿ ಮಾಡುವುದು ಅಥವಾ ಮನೆ ಕಟ್ಟುವುದು ತುಂಬಾ ಕಷ್ಟದ ಕೆಲಸ. ಇದಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚವಾಗಲಿದೆ. ಅಲ್ಲದೇ ಮನೆ ಖರೀದಿ ಮಾಡಿದರೆ, ತುಂಬಾ ಸಾಲವಾಗಲಿದೆ ಎನ್ನುವುದು ಹಲವರ ಅಭಿಪ್ರಾಯ. ಆದರೆ, ಆ ರೀತಿ ಇಲ್ಲ ಎನ್ನುತ್ತದೆ ಅಧ್ಯಯನ ವರದಿ.
ಬೆಂಗಳೂರಿನಲ್ಲಿ ಮನೆ ಖರೀದಿ ಮಾಡಿದರೆ ಅದರ ಸಾಲವನ್ನು 3ರಿಂದ 8 ವರ್ಷದಲ್ಲಿ ತೀರಿಸಬಹುದು. ಆದರೆ, ಮುಂಬೈ ಹಾಗೂ ದೆಹಲಿಯಂತಹ ನಗರಗಳಲ್ಲಿ ಮನೆ ಹಾಗೂ ಪ್ರಾಪರ್ಟಿಯನ್ನು ಖರೀದಿ ಮಾಡುವುದು ಅಷ್ಟೊಂದು ಸುಲಭಲ್ಲ ಎಂದು ಈ ವರದಿ ಹೇಳಿದೆ. ಮುಂಬೈ - ದೆಹಲಿಯಲ್ಲಿ ಆಸ್ತಿ ಮನೆಗಳನ್ನು ಖರೀದಿ ಮಾಡಿದರೆ ಅದನ್ನು ಸಾಲದಿಂದ ಹೊರ ಬರುವುದಕ್ಕೆ ಬರೋಬ್ಬರಿ 30 ವರ್ಷಗಳೇ ಆಗಲಿವೆ.
ಈ ಅಧ್ಯಯನ ವರದಿಯನ್ನು ಬೆಂಗಳೂರು ಹಾಗೂ ವಿವಿಧ ಪ್ರಮುಖ ನಗರಗಳಲ್ಲಿ 2 ಮತ್ತು 3 ಬಿಎಚ್‌ಕೆ ಗಳಿಗೆ ಇರುವ ಬಾಡಿಗೆ, ಪ್ರಾಪರ್ಟಿ ಬೆಲೆ ಹಾಗೂ ಆಸ್ತಿ ಬೆಲೆಯ ಮೇಲೆ ಮಾಡಲಾಗಿದೆ. ಇದರೊಂದಿಗೆ ಆಸ್ತಿಗಳ ಖರೀದಿ ಹಾಗೂ ಮಾರಾಟದ ಲೆಕ್ಕಾಚಾರವನ್ನೂ ಮಾಡಲಾಗಿದೆ. ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಯಂತಹ ನಗರಗಳಲ್ಲಿ ಮನೆ ಖರೀದಿ ಮಾಡಿದರೆ, 3 ರಿಂದ 8 ವರ್ಷಗಳ ಒಳಗೆ ಸಾಲ ಮುಕ್ತರಾಗಬಹುದು.
ಮನೆ ಕಟ್ಟಿದ ಮೇಲೆ ಬೆಂಗಳೂರಿನಂತಹ ನಗರದಲ್ಲಿ ಬಾಡಿಗೆ ಮನೆಗಳಿಗೆ ಹೆಚ್ಚು ಬೇಡಿಕೆ ಇದೆ. ಅಲ್ಲದೇ ಅಡ್ವಾನ್ಸ್ ಹಾಗೂ ಲೋನ್‌ಗಳು ಸಿಗುತ್ತವೆ ಎಂದು ಅಧ್ಯಯನ ವರದಿ ಹೇಳಿದೆ.












Click it and Unblock the Notifications