ಬೆಂಗಳೂರು: ಏರ್‌ಪೋರ್ಟ್‌ನಲ್ಲಿ ಕಳೆದ ವಸ್ತುಗಳನ್ನು ಪಡೆಯಲು ಹೀಗೆ ಮಾಡಿ

Recommended Video

      ಏರ್‌ಪೋರ್ಟ್‌ನಲ್ಲಿ ಕಳೆದ ವಸ್ತುಗಳನ್ನು ಪಡೆಯಲು ಹೀಗೆ ಮಾಡಿ | Oneindia Kannada

      ಬೆಂಗಳೂರು, ಜು.24: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2017-18ನೇ ಸಾಲಿನಲ್ಲಿ ಪ್ರಯಾಣಿಕರು ಮರೆತುಹೋದ 20,413 ವಸ್ತುಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ವೀಕರಿಸಿ ಇವುಗಳಲ್ಲಿ 5,686 ವಸ್ತುಗಳನ್ನು ಅಧಿಕೃತ ಮಾಲೀಕರಿಗೆ ಮರಳಿಸಿದೆ.

      7153 ವಸ್ತುಗಳನ್ನು ವಿಲೇವಾರಿಗಾಗಿ ತನ್ನ ಬಳಿ ಇರಿಸಿಕೊಂಡಿದೆ. ಬಿಐಎಎಲ್‌ ಮುಖ್ಯ ಕಾರ್ಯಾಚರಣರ ಅಧಿಕಾರಿ ಜಾವೇದ್‌ ಮಲಿಕ್‌ ಮಾತನಾಡಿ, ಕೆಐಎ ಪ್ರಯಾಣಿಕರು ವಿಮಾನ ನಿಲ್ದಾಣದ ಹಲವು ಪ್ರದೇಶಗಳಲ್ಲಿ ಮರೆತು ಬಿಟ್ಟುಹೋಗಿದ್ದ ಅಥವಾ ನಿಷೇಧಿತ ವಸ್ತುಗಳನ್ನು ಒಪ್ಪಿಸಲಾಗಿತ್ತು. ಅವುಗಳಲ್ಲಿ ಹಲವು ಅಧಿಕೃತ ವಾರಸುದಾರರಿಗೆ ವಿಲೇವಾರಿ ಮಾಡಿದ್ದು ಉಳಿದ ವಸ್ತುಗಳನ್ನು ಮೂಲಕ ಮಾಲೀಕರು ಸ್ವೀಕರಿಸದಿದ್ದರೆ 90 ದಿನಗಳ ನಂತರ ದಾನ ಇಲ್ಲವೇ ಬಿಎಲ್‌ಆರ್‌ ವಿಮಾನ ನಿಲ್ದಾಣ ಸಿಬ್ಬಂದಿಗೆ ಹರಾಜಿನಲ್ಲಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

      ಕೆಐಎನಲ್ಲಿ ಪ್ರಯಾಣಿಕರ ಸಂಚಾರ ಹೆಚ್ಚುತ್ತಿದ್ದು ಅದಕ್ಕೆ ತಕ್ಕಂತೆ ನಿಲ್ದಾಣದಲ್ಲಿ ಕಳೆದುಹೋದ ವಸ್ತುಗಳ ಸಂಖ್ಯೆಯು ಅಧಿಕವಾಗುತ್ತಿದೆ. ಇಂತಹ ವಸ್ತುಗಳನ್ನು ಸುರಕ್ಷಿತವಾಗಿ ನಿಭಾಯಿಸಿ ಅಧಿಕೃತ ಮಾಲಿಕರಿಗೆ ಮರಳಿಸುವ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

      Busy flyers left behind phones, laptops at KIA

      ಪಡೆಯುವುದು ಹೇಗೆ: ಬೋರ್ರ್ಡಿಂಗ್‌ ಪಾಸ್‌, ಪ್ರಯಾಣದ ದಾಖಲೆ ನೀಡಬೇಕು, ವಸ್ತುಗಳ ಮಾಲೀಕತ್ವ ಬಿಲ್‌ ಸೇರಿದಂತೆ ಇನ್ನಿತರೆ ವಿವರ ನೀಡಬೇಕು, ಸರ್ಕಾರದಿಂದ ವಿತರಿಸಲಾದ ಐಡಿ ಪ್ರೂಫ್‌ ತೋರಿಸಬೇಕು.
      ನಿಲ್ದಾಣದಲ್ಲಿ ಸಿಕ್ಕ ವಸ್ತುಗಳ ವಿವರಗಳನ್ನು ಬೆಂಗಳೂರು ವಿಮಾನ ನಿಲ್ದಾಣದ ವೆಬ್‌ಸೈಟ್‌ನ ಲಾಸ್ಟ್‌ ಅಂಡ್‌ ಫೌಂಡ್‌ ವಿಭಾಗದಲ್ಲಿ ದಾಖಲು ಮಾಡಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+