ಬೆಂಗಳೂರು : ಜೆಪಿ ನಗರದಲ್ಲಿ ಹಾಡುಹಗಲೇ 5 ಲಕ್ಷ ದರೋಡೆ
ಬೆಂಗಳೂರು, ಫೆ. 20 : ಉದ್ಯಮಿಯೊಬ್ಬರ ಗಮನ ಬೇರೆಡೆ ಸೆಳೆದು 5 ಲಕ್ಷ ಹಣ ದೋಚಿರುವ ಘಟನೆ ಜೆಪಿ ನಗರದಲ್ಲಿ ನಡೆದಿದೆ. ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಶುಕ್ರವಾರ ಮಧ್ಯಾಹ್ನ ಉದ್ಯಮಿ ರಮೇಶ್ ಖಬ್ರ ಎಂಬುವವರು ಜೆಪಿ ನಗರದ ಕೆನರಾ ಬ್ಯಾಂಕ್‌ನಲ್ಲಿ 5.27 ಲಕ್ಷ ಹಣವನ್ನು ಡ್ರಾ ಮಾಡಿದ್ದರು. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಹಣವನ್ನು ದೋಚಿ ಪರಾರಿಯಾಗಿದ್ದಾರೆ. [ಮಂಗಳೂರು ನಿವಾಸಿ ಅಪಹರಿಸಿ ಮಡಿಕೇರಿಯಲ್ಲಿ ಬಿಟ್ಟರು]

ರಮೇಶ್ ಖಬ್ರ ಅವರು ಈ ಕುರಿತು ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. [ಬೆಂಗಳೂರು : ಎಟಿಎಂ ದೋಚಲು ಬಂದು ಸಿಕ್ಕಿಬಿದ್ದರು]
ಡಿಕ್ಕಿ ಹೊಡೆದು ಕಿರಿಕ್ ಮಾಡಿದರು : ರಮೇಶ್ ಅವರು ಹಣವನ್ನು ಡ್ರಾ ಮಾಡಿ ಅದನ್ನು ತಂದು ಕಾರಿನಲ್ಲಿಟ್ಟು ಹೊರಡಲು ಸಿದ್ಧವಾಗುತ್ತಿದ್ದಂತೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ಬಗ್ಗೆ ವಿಚಾರಿಸಲು ರಮೇಶ್ ಕೆಳಗಿಳಿಯುತ್ತಿದ್ದಂತೆ ಅವರ ಜೊತೆ ಬೈಕ್‌ನಲ್ಲಿ ಬಂದವರು ಜಗಳವಾಡಿದ್ದಾರೆ.
ಈ ಸಮಯದಲ್ಲಿಯೇ ಇದೇ ಗುಂಪಿನಲ್ಲಿದ್ದ ಮತ್ತೊಬ್ಬ ಕಾರಿನಲ್ಲಿದ್ದ ಹಣದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ರಮೇಶ್ ಈ ಕುರಿತು ಮಧ್ಯಾಹ್ನ 2 ಗಂಟೆ ವೇಳೆಗೆ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ.











Click it and Unblock the Notifications