ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಶೀಘ್ರ ಬಸ್‌ ಬೇ ಆರಂಭ

|
Google Oneindia Kannada News

ಬೆಂಗಳೂರು, ಜುಲೈ 19: ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಮುಂದಿನ 3 ತಿಂಗಳಲ್ಲಿ ಬಸ್‌ ಬೇ ಆರಂಭಗೊಳ್ಳಲಿದೆ.

ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿದ್ದ ನಿಲ್ದಾಣದ ತುಮಕೂರು ಬದಿಯಲ್ಲಿರುವ ಬಸ್ ನಿಲ್ದಾಣದ ಕಾಮಗಾರಿ ಪುನರಾರಂಭಗೊಂಡಿದೆ ಎಂದು ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರೈಲು ನಿಲ್ದಾಣದ ಮುಖ್ಯ ಕಟ್ಟಡದ ಛಾವಣಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಛಾವಣಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ.

Bus Bay At Yesvantpur Railway Station To Be Readied In 3 Months

ಸುಮಾರು 200 ಮೀಟರ್ ಉದ್ದದ ಛಾವಣಿ ಇದಾಗಿದೆ. ನಿಲ್ದಾಣದ ಆವರಣದಲ್ಲಿ ಬಸ್ ಬೇ ನಿರ್ಮಿಸಲಾಗುತ್ತಿದ್ದು, ಬಿಎಂಟಿಸಿ ಬಸ್‌ಗಳು ನೇರವಾಗಿ ಟರ್ಮಿನಲ್ ಒಳಗೆ ಬರಲಿವೆ. ಇದರಿಂದ ಪ್ರಯಾಣಿಕರು ಕೆಲವೇ ನಿಮಿಷಗಳಲ್ಲಿ ನಿಲ್ದಾಣ ಪ್ರವೇಶಿ, ರೈಲು ಹಿಡಿಯಲು ಅನುಕೂಲವಾಗಲಿದೆ. ಯಶವಂತಪುರ ಮೆಟ್ರೋ ರೈಲು ನಿಲ್ದಾಣದ ಸಂರ್ಕವೂ ಸಲುಭವಾಗಲಿದೆ.

ನಮ್ಮ ಕಡೆಯಿಂದ ಬಸ್ ನಿಲ್ದಾಣ ಸಿದ್ಧವಾಗಲು ಸುಮಾರು ಮೂರು ತಿಂಗಳು ತೆಗೆದುಕೊಳ್ಳುತ್ತದೆ. ಗರಿಷ್ಠ ಆರು ಬಸ್‌ಗಳನ್ನು ಇಲ್ಲಿ ನಿಲ್ಲಿಸಬಹುದು. ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರು, ಪ್ರಸ್ತುತ ತುಮಕೂರು ರಸ್ತೆಯವರೆಗೆ ತೆರಳಲು ಬಯಸುತ್ತಾರೆ, ರೈಲ್ವೆ ನಿಲ್ದಾಣದಿಂದ ಸುಲಭವಾಗಿ ವಿವಿಧ ಪ್ರದೇಶಗಳಿಗೆ ತೆರಳಬಹುದಾಗಿದೆ.

ತುಮಕೂರು ರಸ್ತೆ ಬದಿಯಲ್ಲಿರುವ ಮೆಟ್ರೋ ಮತ್ತು ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸುವ ಎಫ್‌ಒಬಿ ಇನ್ನೂ ಪ್ರಾರಂಭವಾಗಿಲ್ಲ , ರಚನಾತ್ಮಕ ವಿನ್ಯಾಸಗಳನ್ನು ಬಿಎಂಆರ್ಸಿಎಲ್ ಸಲ್ಲಿಸಬೇಕಾಗಿದೆ ಮತ್ತು ಇದನ್ನು ಐಐಟಿಯ ತಜ್ಞರು ಅನುಮೋದಿಸಬೇಕಾಗಿದೆ. ಎಲ್ಲಾ ತಾಂತ್ರಿಕ ಅನುಮತಿ ಪಡೆದ ನಂತರ ಬಿಎಂಆರ್ಸಿಎಲ್ ಕೆಲಸವನ್ನು ಕೈಗೆತ್ತಿಕೊಳ್ಳುತ್ತದೆ. " ಎಂದು ಹೇಳಿದ್ದು ಅದನ್ನು ಪೂರ್ಣಗೊಳಿಸಲು ಅವರು ಯಾವುದೇ ಗಡುವನ್ನು ಕೂಡ ನೀಡಿಲ್ಲ.

ರೈಲ್ವೆ ನಿಲ್ದಾಣ ಮತ್ತು ಮೆಟ್ರೊವನ್ನು ಒಂದೇ ಕಡೆ ಸಂಪರ್ಕಿಸಬಲ್ಲ ದೀರ್ಘ-ಯೋಜಿತ ಫುಟ್ ಓವರ್ ಬ್ರಿಡ್ಜ್ (ಎಫ್‌ಒಬಿ) - ಎಂಟು ವರ್ಷದ ಬೇಡಿಕೆಯಾಗಿದ್ದು ಇನ್ನೂ ಯಾವುದೇ ಪ್ರಗತಿಯನ್ನು ಕಾಣುತ್ತಿಲ್ಲ. ನಿಲ್ದಾಣದ ಎರಡೂ ಬದಿಗಳನ್ನು ಎಲ್ಲಾ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಂಪರ್ಕಿಸಲು ಪ್ರಸ್ತಾಪಿಸಲಾದ ಮತ್ತೊಂದು ಸೇತುವೆಯನ್ನು ಸದ್ಯಕ್ಕೆ ಮುಚ್ಚುವ ಸಾಧ್ಯತೆಯಿದೆ.

Recommended Video

ಮುಂಗಾರು ಅಧಿವೇಶನಕ್ಕೂ ಮುನ್ನ ಹೊಸಮುಖಗಳಿಗೆ ಮಣೆ ಹಾಕಿದ Sonia Gandhi | Oneindia Kannada

ಹಿರಿಯ ಬಿಎಂಟಿಸಿ ಅಧಿಕಾರಿಯೊಬ್ಬರು ಮಾತನಾಡಿ, ನಾವು ನಿಲ್ದಾಣದ ಆವರಣದಿಂದ ಅಲ್ಪ ದೂರದ ಬಸ್ಸುಗಳನ್ನು ಮಾತ್ರ ಓಡಿಸಲು ನೋಡುತ್ತಿದ್ದೇವೆ, ಅದು ಗರಿಷ್ಠ 7 ರಿಂದ 8 ಕಿ.ಮೀ. ಪ್ರಸ್ತುತ, ಸುಮಾರು 2,000 ಬಸ್ಸುಗಳು ತುಮಕೂರು ರಸ್ತೆಯಲ್ಲಿ ಹಾದುಹೋಗುತ್ತವೆ, ಇದು ರೈಲ್ವೆ ನಿಲ್ದಾಣದಿಂದ ನಡೆಯಬಹುದಾದ ದೂರದಲ್ಲಿದೆ.

English summary
Work on a bus bay at the Yesvantpur railway station that can accommodate a maximum of six buses is set to start shortly after a four-month covid induced lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X