ಬೆಂಗಳೂರು ಹಾಗೂ ಈ ಭಾಗದಲ್ಲಿ ಆಸ್ತಿಗೆ ಬಂಪರ್ ಬೆಲೆ, ಭೂಮಿಗೆ ಬಂಗಾರದ ಬೆಲೆ!

ಬೆಂಗಳೂರಿನ ವಿವಿಧ ಭಾಗದಲ್ಲಿ ರಿಯಲ್ ಎಸ್ಟೇಟ್ ಬೆಳೆಯುತ್ತಿದ್ದು. ಆಸ್ತಿ ಖರೀದಿ ಹಾಗೂ ಮಾರಾಟ ಪ್ರಕ್ರಿಯೆ ಜೋರಾಗಿದೆ. ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಪ್ರಕ್ರಿಯೆ ಚರ್ಚೆ ಪ್ರಾರಂಭವಾದ ಮೇಲೆ ವಿವಿಧ ಭಾಗದಲ್ಲಿ ಭೂಮಿ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಈ ರೀತಿ ಭೂಮಿಯ ಬೆಲೆ ಹೆಚ್ಚಳವಾದ ಪ್ರದೇಶಗಳಲ್ಲಿ ಬೆಂಗಳೂರಿನ ಒಳಗಿನ ಹಾಗೂ ಬೆಂಗಳೂರಿನ ಹೊರ ವಲಯದ ಪ್ರದೇಶಗಳು ಸಹ ಸೇರಿವೆ. ಯಾವೆಲ್ಲಾ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ ಹಾಗೂ ರಿಯಲ್ ಎಸ್ಟೇಟ್ ಬೂಸ್ಟ್‌ ಆಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ನೂರಾರು ಯೋಜನೆಗಳು ಏಕಕಾಲಕ್ಕೆ ನಡೆಯುತ್ತಿದ್ದು. ಅಭಿವೃದ್ಧಿ ವೇಗವಾಗಿ ನಡೆಯುತ್ತಿರುವುದರಿಂದ ಭೂಮಿಗೂ ಹಲವು ಪ್ರದೇಶಗಳಲ್ಲಿ ಒಳ್ಳೆಯ ಬೆಲೆ ಇದೆ. ಇನ್ನು ನೆಲಮಂಗಲ ತಾಲ್ಲೂಕಿನ ಭಾಗದಲ್ಲೂ ಭೂಮಿಗೆ ಒಳ್ಳೆಯ ಬೆಲೆ ಇದೆ. ನೆಲಮಂಗಲದ ಉತ್ತರದ ಹೊರವಲಯದಲ್ಲಿ ಭೂಮಿ ಬೆಲೆ ಗಗನಮುಖಿಯಾಗಿದೆ. ರಿಯಲ್ ಎಸ್ಟೇಟ್ ವಲಯಗಳಲ್ಲಿ ಇದು ಸಹ ಒಂದಾಗಿದ್ದು. ಜನ ಈ ಭಾಗದಲ್ಲಿ ಭೂಮಿಯೆ ಮೇಲೆ ಹೂಡಿಕೆ ಮಾಡುವುದು ಹಾಗೂ ಭೂಮಿ, ಆಸ್ತಿ ಖರೀದಿ ಮಾಡುವುದು ಹೆಚ್ಚಾಗಿದೆ. ಹುರುಳಿಹಳ್ಳಿ ಹಾಗೂ ಸಮೀಪದ ಪ್ರದೇಶಗಳ ಸುತ್ತಮುತ್ತಲಿನ ಪ್ಲಾಟ್‌ಗಳಲ್ಲಿ ಬೇಡಿಕೆ ಹೆಚ್ಚಳವಾಗಿದೆ. ಈಗಾಗಲೇ ಈ ಭಾಗದಲ್ಲಿ ಭೂಮಿ ಖರೀದಿ ಮಾಡಿರುವವರು ಲಾಭದ ನಿರೀಕ್ಷೆಯಲ್ಲಿದ್ದಾರೆ.

Bumper prices for property in Bengaluru and around What is the reason for Property Boost

ಬೆಂಗಳೂರಿನ ಮಧ್ಯ ಭಾಗದಿಂದ ಅಂದಾಜು 40 ಕಿ.ಮೀ ದೂರದಲ್ಲಿರುವ ಹಾಗೂ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಶಾರ್ಟ್‌ ಲಿಸ್ಟ್‌ನಲ್ಲಿ ಇರುವ ಕಾರಣಕ್ಕೆ ಈ ಭಾಗದಲ್ಲಿ ಭೂಮಿಗೆ ಒಳ್ಳೆಯ ಬೆಲೆ ಬರುತ್ತಿದೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರು ದಕ್ಷಿಣ ಜಿಲ್ಲೆಯ ಯಾವುದಾದರೂ ಒಂದು ಪ್ರದೇಶದಲ್ಲಿ ನಿರ್ಮಾಣವಾಗಲಿದೆ ಎನ್ನುವ ಲೆಕ್ಕಾಚಾರ ಜೋರಾಗಿದೆ. ಈ ಕಾರಣವೂ ಸೇರಿದಂತೆ ವಿವಿಧ ಪ್ರಮುಖ ಪ್ರದೇಶಗಳಿಗೆ ತುಂಬಾ ಸಮೀಪವಾಗಿರುವುದರಿಂದಲೂ ಈ ಭಾಗದಲ್ಲಿ ಭೂಮಿಯ ಬೆಲೆ ಹೆಚ್ಚಳವಾಗಿದೆ.

ನೆಲಮಂಗಲ ಹಾಗೂ ನೆಲಮಂಗಲದ ಸುತ್ತಮುತ್ತಲಿನ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಬೂಸ್ಟ್‌ ಆಗುವುದಕ್ಕೆ ಮತ್ತೊಂದು ಕಾರಣ ಈ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಆಗುತ್ತಿರುವುದು. ತುಮಕೂರು ಟೋಲ್‌ಗೇಟ್, ಮಾಗಡಿ ರಸ್ತೆ ಹಾಗೂ ಸೊಂಡಿಕೊಪ್ಪ ಸೇರಿದಂತೆ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಯ ಬೆಲೆ ಭಾರೀ ಹೆಚ್ಚಳವಾಗಿದೆ. ಈ ಭಾಗದಲ್ಲಿ ಭವಿಷ್ಯದಲ್ಲಿ ಭೂಮಿಯ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ಅಲ್ಲದೇ ನೆಲಮಂಗಲ - ದಾಸನಪುರ, ಅರಸಿನಕುಂಟೆ, ಆದರ್ಶ ನಗರ, ತುಮಕೂರು ರಸ್ತೆ, ದಾಬಸ್‌ಪೇಟೆ ಕೈಗಾರಿಕಾ ಪ್ರದೇಶ ಹಾಗೂ ಚಿಕ್ಕ ಮಧುರೈ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ತುಂಬಾ ಸಮೀಪದಲ್ಲೇ ಇದೆ. ನಾಗಸಂದ್ರ ಮೊಟ್ರೋ ನಿಲ್ದಾಣ ಹಾಗೂ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವು ಕಾರಣಗಳಿಗೆ ಈ ಭಾಗದಲ್ಲಿ ಭೂಮಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+