Get Updates
Get notified of breaking news, exclusive insights, and must-see stories!

ಮಾನಸಿಕ ಸ್ವಾಸ್ತ್ಯ ಕಾಪಾಡಲು ದೇಶದಲ್ಲಿ 23 ಟೆಲಿ ಸೆಂಟರ್: ನಿಮ್ಹಾನ್ಸ್- ಐಐಐಟಿಬಿ ಆಧಾರಸ್ತಂಭ

ಬೆಂಗಳೂರು, ಫೆ. 03: ದೇಶದಲ್ಲಿ ಪ್ರತಿ ಹತ್ತು ಮಂದಿಯಲ್ಲಿ ಒಬ್ಬ ಮನೋರೋಗಕ್ಕೆಒಳಗಾಗುತ್ತಿದ್ದಾರೆ. ಭಾರತದಲ್ಲಿ ಮನೋರೋಗ ಶಮನಕ್ಕೆ ಬೆಂಗಳೂರಿನ ಎರಡು ಸಂಸ್ಥೆಗಳೇ ಆಧಾರ ಸ್ತಂಭ ಎಂಬ ಅಚ್ಚರಿ ಸಂಗತಿ ಹೊರ ಬಿದ್ದಿದೆ.
ಅವುಗಳಲ್ಲಿ ಒಂದು ನಿಮ್ಹಾನ್ಸ್ ಸಂಸ್ಥೆ. ಮತ್ತೊಂದು ಬೆಂಗಳೂರಿನ ಐಐಐಟಿಬಿ ಸಂಸ್ಥೆ. ಬೆಂಗಳೂರಿನ ಐಐಐಟಿಬಿ ಒದಗಸಲಿರುವ ತಂತ್ರಜ್ಞಾನ ಹಾಗೂ ಬೆಂಗಳೂರಿನ ನಿಮ್ಹಾನ್ಸ ಸಂಸ್ಥೆ ಕಾರ್ಯ ಯೋಜನೆಯೇ ದೇಶದಲ್ಲಿ ಆರಂಭವಾಗಲಿರುವ 23 ಮಾನಸಿಕ ರೋಗ ನಿವಾರಣೆ ಟೆಲಿ ಮೆಡಿಸಿನ್ ಸೆಂಟರ್‌ಗಳಿಗೆ ಮೂಲಾಧಾರವಾಗಿದೆ. ಈ ಕುರಿತ ಸಮಗ್ರ ವಿವರ ಇಲ್ಲಿದೆ.
ಭಾರತದಲ್ಲಿ ಮನೋರೋಗದಿಂದ ಬಳಲುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ಹತ್ತು ಭಾರತೀಯರಲ್ಲಿ ಒಬ್ಬ ಮಾನಸಿಕ ರೋಗದಿಂದ ಬಳಲುತ್ಗಿದ್ದಾರೆ ಎನ್ನುತ್ತವೆ ಅಧ್ಯಯನ ವರದಿಗಳು. ಭಾರತದ ಮಾನಸಿಕ ಸ್ವಾಸ್ತ ಕಾಪಾಡಲು ಕೇಂದ್ರ ಸರ್ಕಾರ ದೇಶದಾದ್ಯಂತ 23 ಮನೋರೋಗ ನಿವಾರಕ ಟೆಲಿ ಸೆಂಟರ್ ಗಳನ್ನು ತೆರೆಯುವುದಾಗಿ ಘೋಷಣೆ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಈ ವಿಷಯವನ್ನು ಪ್ರಕಟಿಸಿದ್ದರು. ಅವರೇ ಉಲ್ಲೇಖಿಸಿದಂತೆ ಬೆಂಗಳೂರಿನ ನಿಮ್ಹಾನ್ಸ್ಮತ್ತು ಐಐಐಟಿಬಿ ನೆರವಿನಿಂದ ರೂಪಿಸಲಾದ ಯೋಜನೆಯಂತೆ ಈ ಸೆಂಟರ್‌ಗಳು ಕಾರ್ಯ ನಿರ್ವಹಿಸಲಿವೆ ಎಂಬ ಸಂಗತಿಯನ್ನು ಸಹ ಬಹಿರಂಗಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಆರಂಭವಾಗಲಿರುವ 23 ಮೆಂಟಲ್ ಹೆಲ್ತ ಕೇರ್ ಟೆಲಿ ಮೆಡಿಸನ್ ಸೆಂಟರ್‌ಗಳಿಗೆ ನಿಮಾನ್ಸ್ ರೂಪಿಸಿರುವ ಕಾರ್ಯ ಯೋಜನೆಗೆ ಐಐಟಿಬಿ ತಾಂತ್ರಿಕ ಸೇವೆ ಒದಗಿಸಲಿದೆ. ನಿಮ್ಹಾನ್ಸ್ ಮತ್ತು ಐಐಐಟಿಬಿ ಜಂಟಿಯಾಗಿ ರೂಪಿಸಿರುವ ಯೋಜನೆ ಅನ್ವಯ ದೇಶದ 23 ಮೆಂಟಲ್ ಹೆಲ್ತ ಟೆಲಿ ಸರ್ವೀಸ್ ಸೆಂಟರ್ ಗಳು ಕಾರ್ಯ ನಿರ್ವಹಿಸಲಿವೆ ಬಗ್ಗೆ ಪ್ರೊಫೆಸರ್ ಶ್ರೀಕಾಂತ್ ತಿಳಿಸಿದ್ದಾರೆ.

Budget 2022: Centre to launch network of 23 tele mental health centres of excellence across the country

ದೇಶದಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ 23 ಮೆಂಟಲ್ ಹೆಲ್ತ್ ಟೆಲಿ ಸರ್ವೀಸ್ ಸೆಂಟರ್‌ಗಳಿಗೆ ತಂತ್ರಜ್ಞಾನವನ್ನು ಐಐಐಟಿಬಿ ಒದಗಿಸುತ್ತಿದೆ. ಇನ್ನು ಯಾವ ರೀತಿ ರೋಗಿಗಳಿಗೆ ಆಪ್ತ ಸಮಾಲೋಚನೆ ನಡೆಸಲಿದೆ ಎಂಬುದನ್ನು ನಿಮ್ಹಾನ್ಸ್ ಕಾರ್ಯಯೋಜನೆ ರೂಪಿಸಿ ನಿಮ್ಹಾನ್ಸ್ ಮತ್ತು ಐಐಐಟಿಬಿಯ ನೆರವಿನಿಂದ ಈ ಮನೋರೋಗ ನಿವಾರಕ ಟೆಲಿ ಸರ್ವೀಸ್ ಸೆಂಟರ್‌ಗಳು ಕಾರ್ಯ ನಿರ್ವಹಿಸಲಿವೆ ಎಂದು ಐಐಟಿಬಿ ಇ ಹೆಲ್ತ್ ಸಂಶೋಧನಾ ಕೇಂದ್ರದ ಪ್ರೊಫೆಸರ್ ಟಿ.ಕೆ. ಶ್ರೀಕಾಂತ್ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

Budget 2022: Centre to launch network of 23 tele mental health centres of excellence across the country

ಕೇಂದ್ರ ಸರ್ಕಾರ ರಾಷ್ಟ್ರೀಯ ಮಟ್ಟದಲ್ಲಿ 23 ಮಾನಸಿಕ ಹೆಲ್ತ್ ಕೇರ್ ಟೆಲಿ ಹೆಲ್ತ್ ಸರ್ವೀಸ್ ಸೆಂಟರ್‌ಗಳನ್ನು ಪ್ರಾರಂಭಿಸಿದ್ದು, ಅದಕ್ಕೆ ಬೇಕಾದ ಸಿಬ್ಬಂದಿ, ಕಾರ್ಯ ನಿರ್ವಹಣೆ ನಿಮ್ಹಾನ್ಸ್ ಮಾಡಲಿದೆ. ಸ್ಥಳೀಯ ಭಾಷೆಗಳಲ್ಲಿ ಈ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ. ಈ 23 ಸೆಂಟರ್ ಗಳಿಗೆ ಅಗತ್ಯ ತಂತ್ರಜ್ಞಾನ, ಸಾಫ್ಟ್ ವೇರ್ ಗಳನ್ನು ಐಐಐಟಿಬಿ ಒದಗಿಸಲಿದೆ. ಈ ಮೂಲಕ ದೇಶ ಎದುರಿಸುತ್ತಿರುವ ಮಾನಸಿಕ ಖಿನ್ನತೆ ಕಾಯಿಲೆಗೆ ತಂತ್ರಜ್ಞಾನ ನೆರವನ್ನು ಐಐಐಟಿಬಿ ಒದಗಿಸಲಿದೆ ಎಂದು ಪ್ರೊಫೆಸರ್ ಶ್ರೀಕಾಂತ್ ಸ್ಪಷ್ಟಪಡಿಸಿದ್ದಾರೆ.

Budget 2022: Centre to launch network of 23 tele mental health centres of excellence across the country

ನಿಮ್ಹಾನ್ಸ್ ಮತ್ತು ಐಐಐಟಿಬಿ ಜಂಟಿಯಾಗಿ ಕಳೆದ ಒಂಭತ್ತು ವರ್ಷದಿಂದ ಮಾನಸಿಕ ಖಿನ್ನತೆ ನಿವಾರಣೆ ನಿಟ್ಟಿನಲ್ಲಿ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಮಾನಸಿಕ ಖಿನ್ನತೆ ನಿವಾರಣೆ ಸಂಬಂಧ ಕರ್ನಾಟಕ ಸರ್ಕಾರ ಇ - ಮಾನಸ ಜಾರಿಗೆ ತಂದಿದೆ. ಮಾನಸಿಕ ಖಿನ್ನತೆಗೆ ಒಗಾಗುವ ರೋಗಿಗಳ ಡಾಟಾ ನಿರ್ವಹಣೆ, ವೈದ್ಯರ ವಿವರ ಮತ್ತಿತರ ದಾಖಲೆಗಳನ್ನು ಒದಗಿಸವ ಸಂಬಂಧ ಇ ಮಾನಸ ತಂತ್ರಜ್ಞಾನವನ್ನು ಐಐಐಟಿಬಿ ಅಭಿವೃದ್ಧಿ ಪಡಿಸಿದ್ದು, ಇದನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ. ಅದೇ ರೀತಿ ರಾಷ್ಟ್ರ ಮಟ್ಟದಲ್ಲಿ ಪ್ರಾರಂಭವಾಗಲಿರುವ ಮಾನಸಿಕ ಖಿನ್ನತೆ ಟೆಲಿ ಹೆಲ್ತ್ ಸರ್ವೀಸ್ ಸೆಂಟರ್ ಗಳಿಗೆ ಅಗತ್ಯ ತಂತ್ರಜ್ಞಾನವನ್ನು ಐಐಐಟಿಬಿ ಒದಗಿಸಲಿದೆ. ವೈದ್ಯರ ಆಪ್ತ ಸಮಾಲೋಚನೆ, ವಿಡಿಯೋ ಅಪ್ತ ಸಮಾಲೋಚನೆ, ರೋಗಿಗಳ ದಾಖಲಾತಿ ಸಂಗ್ರಹ, ಡಾಟಾ ನಿರ್ವಹಣೆ ಸೇರಿದಂತೆ ಅಗತ್ಯ ತಾಂತ್ರಿಕ ನೆರವನ್ನು ಐಐಐಟಿ ಒದಗಿಸಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

Budget 2022: Centre to launch network of 23 tele mental health centres of excellence across the country

ಮನೋರೋಗಕ್ಕೆ ಮದ್ದಿಲ್ಲ. ಮನೋ ವೈದ್ಯರ ಆಪ್ತ ಸಲಹೆ ಅಗತ್ಯ. ಎಲ್ಲರಿಗೂ ವೈದ್ಯರನ್ನು ಭೇಟಿ ಮಾಡುವ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ರೋಗಿಗಳ ಅವಶ್ಯಕತೆಗೆ ತಕ್ಕಂತೆ ಅವರಿಗೆ ಆಪ್ತ ಸಮಾಲೋಚನೆ, ಚಿಕಿತ್ಸೆ, ಮನೋವೈದ್ಯರ ವಿವರ ಒದಗಿಸುವ ಸಂಬಂಧ ಸಮಗ್ರ ತಂತ್ರಜ್ಞಾನವನ್ನು ಐಐಐಟಿಬಿ ಅಭಿವೃದ್ಧಿ ಪಡಿಸಲಿದೆ. ದೇಶ ಎದುರಿಸುತ್ತಿರುವ ಮಾನಸಿಕ ಖಿನನೆ ಬೆಂಗಳೂರಿನಲ್ಲಿರುವ ಐಐಐಟಿಬಿ ಹಾಗೂ ನಿಮ್ಹಾನ್ಸ್ ಸಹಾಯದಿಂದ ದೇಶದಲ್ಲಿ ಮಾನಸಿಕ ಖಿನ್ನತೆ ನಿಯಂತ್ರಣಕ್ಕೆ ಅಳಿಲು ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ ಎಂದು ಪ್ರೊಫೇಸರ್ ಶ್ರೀಕಾಂತ್ ಸಂತಸ ವ್ಯಕ್ತಪಡಿಸಿದರು.

ಇನ್ನು ಬೆಂಗಳೂರಿನಲ್ಲಿರುವ ಐಐಐಟಿಬಿ ವಿಶ್ವ ವಿದ್ಯಾಲಯ ಖಾಸಗಿ ವಿಶ್ವ ವಿದ್ಯಾಲಯಗಳ ಪೈಕಿ ದೇಶದ ನಂಬರ್ ಒನ್ ಪಟ್ಟ ಗಳಿಸಿದೆ. 2021 ರಲ್ಲಿ ಎ+ ರ್ಯಾಂಕ್ ಪಡೆದ ಹೆಗ್ಗಳಿಕೆಗೆ ಐಐಐಟಿಬಿ ಪಾತ್ರವಾಗಿದೆ. ಸಮಾಜದ ಪ್ರತಿಯೊಬ್ಬ ಪ್ರಜೆಗೆ ಮಾಹಿತಿ ತಂತ್ರಜ್ಞಾನದ ನೆರವು ತಲುಪುವಂತೆ ಮಾಡುವ ಉದ್ದೇಶ ಈ ಸಂಸ್ಥೆಯದ್ದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+