ಬೆಂಗಳೂರಲ್ಲಿ 100 ಹೊಸ ಸಿಗ್ನಲ್‌ಗಳ ಅಳವಡಿಕೆ, ಹಳೆ ಸಿಗ್ನಲ್‌ಗಳು ಮೇಲ್ದರ್ಜೆಗೆ
ಬೆಂಗಳೂರು, ಅಕ್ಟೋಬರ್ 9: ಬೆಂಗಳೂರಲ್ಲಿರುವ ಟ್ರಾಫಿಕ್ ಸಿಗ್ನಲ್‌ಗಳನ್ನು ಮೇಲ್ದರ್ಜೆಗೇರಿಸುವುದರ ಜತೆಗೆ ಹೊಸ 100 ಸಿಗ್ನಲ್ ಅಳವಡಿಕೆಗೆ ಸಂಚಾರ ಪೊಲೀಸರು ಮುಂದಾಗಿದ್ದಾರೆ.
ಈ ಕುರಿತು ಸಂಚಾರ ಪೊಲೀಸ್ ವಿಭಾಗದ ಹೆಚ್ಚುವರಿ ಆಯುಕ್ತ ಆರ. ಹಿತೇಂದ್ರ ಅವರು ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಜತೆಗೂಡಿ ನಗರದಲ್ಲಿರುವ ಟ್ರಾಫಿಕ್ ಸಿಗ್ನಲ್ ಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಜತೆಗೆ 100 ಹೊಸ ಸಿಗ್ನಲ್ ಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 400 ಕ್ಕೂ ಹೆಚ್ಚು ಟ್ರಾಫಿಕ್ ಸಿಗ್ನಲ್‌ಗಳಿವೆ ಆದರೆ ಎಷ್ಟು ಸಿಗ್ನಲ್‌ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೇಳಿದರೆ ಯಾರ ಬಳಿಯೂ ಉತ್ತರವಿಲ್ಲ, ಒಂದು ದಿನ ಸರಿ ಇದ್ದರೆ ಮತ್ತೊಂದು ದಿನ ಸಿಗ್ನಲ್ ಕೆಟ್ಟಿ ನಿಂತಿರುತ್ತದೆ, ಸಂಚಾರ ಪೊಲೀಸರು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಿರುವ ಸಿಗ್ನಲ್‌ಗಳಲ್ಲಿ ಸಮಯವನ್ನು ತೋರಿಸುವ ಸಿಗ್ನಲ್‌ಗಳು ಕಡಿಮೆ ಇದೆ, ಇನ್ನೊಂದೆಡೆ ಸಿಗ್ನಲ್ ಗೆ ಕಾಯುತ್ತಿರುವ ವಾಹನ ಸವಾರರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ, ಸಮಯವನ್ನು ತೋರಿಸುವ ಸಿಗ್ನಲ್‌ಗಳನ್ನು ಹೆಚ್ಚೆಚ್ಚು ಅಳವಡಿಸಬೇಕಿದೆ. ಆಗ ಇಂಧನವನ್ನೂ ಹೆಚ್ಚು ಉಳಿತಾಯಮಾಡಬಹುದು. ಇನ್ನು ಎಷ್ಟು ಸಮಯ ಇದೆ ಎಂದು ಮೊದಲೇ ತಿಳಿದರೆ ವಾಹನವನ್ನು ಆಫ್ ಮಾಡಿಕೊಂಡು ನಿಲ್ಲಬಹುದಾಗಿದೆ.
ಬೆಂಗಳೂರಲ್ಲಿ 2019ರ ವೇಳೆ ಜಪಾನ್ ಮಾದರಿಯ 29 ಸಿಗ್ನಲ್ ಗಳು ಬೆಂಗಳೂರಿಗೆ ಕಾಲಿಡಲಿವೆ. ಜಪಾನ್ ಇಂಟರ್ ನ್ಯಾಷನಲ್ ಕಾರ್ಪೊರೇಷನ್ ಏಜೆನ್ಸಿಯು ಸುಮಾರು 72 ಕೋಟಿ ಹಣವನ್ನು ಹೂಡಿಕೆ ಮಾಡಲಿದೆ. ಕಾಂಬೋಡಿಯಾ, ಮಯನ್ಮಾರ್, ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶಗಳಲ್ಲಿ ಸ್ಮಾರ್ಟ್ ಸಿಗ್ನಲ್ ವ್ಯವಸ್ಥೆಯನ್ನು ಜೆಐಸಿಎ ಅಭಿವೃದ್ಧಿಗೊಳಿಸಿದ್ದು ಯಶಸ್ವಿಯಾಗಿದೆ. ಈಗ ಬೆಂಗಳೂರು ನಗರದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.












Click it and Unblock the Notifications