ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ತಾಜ್ಯ ನಿರ್ವಹಣೆಗಾಗಿ ಒಂದೇ ಬಾರಿಗೆ ಎಲ್ಲ 243ವಾರ್ಡ್‌ನಲ್ಲಿ ಟೆಂಡರ್ ಬಿಡುಗಡೆ: BSWML

ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆಂದು ಜನವರಿ 22ರಂದು ಅಲ್ಪಾವಧಿಯ ಟೆಂಡರ್‌ಗಳನ್ನು ಆಹ್ವಾನಿಸಲಾಗಿತ್ತು. ಅದು ಫೆಬ್ರುವರಿವರೆಗೆ ಮುಂದುವರಿಯಲಿದೆ. ನಗರದಲ್ಲಿ ಎಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತದೆ. ಯಾವ ಕಂಪನಿ ಅದನ್ನು ನಿರ್ವಹಿಸುತ್ತದೆ, ಖರ್ಚು ಎಷ್ಟಾ

|
Google Oneindia Kannada News

ಬೆಂಗಳೂರು, ಜನವರಿ 26: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ (BSWML) ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಎಲ್ಲ ವಾರ್ಡ್‌ಗಳಿಗೆ ಒಂದೇ ಭಾರಿಗೆ ಟೆಂಡರ್‌ಗಳನ್ನು ಬಿಡುಗಡೆ ಮಾಡಿದ್ದು, ಅವು ಫೆಬ್ರುವರಿವರೆಗೂ ಮುಂದುವರಿಯಲಿದೆ.

ಉದ್ಯಾನನಗರಿ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ವಾಣಿಜ್ಯ ಕಟ್ಟಡಗಳು ಸೇರಿದಂತೆ 42 ಲಕ್ಷಕ್ಕೂ ಹೆಚ್ಚು ಮನೆಗಳು ಇವೆ. ಒಟ್ಟು 243 ವಾರ್ಡ್‌ಗಳಿಂದ ತ್ಯಾಜ್ಯ ಸಂಗ್ರಹಿಸಲು, ಸೂಕ್ತ ವಿಲೇವಾರಿಗಾಗಿ ಇದೇ ಜನವರಿ 22ರಂದು ಅಲ್ಪಾವಧಿಯ ಟೆಂಡರ್‌ಗಳನ್ನು ನಡೆಸಲಾಗಿತ್ತು.

ಥಣಿಸಂದ್ರದ ಅಪಾರ್ಟ್‌ಮೆಂಟ್‌ಗೆ ನೀಡಿದ್ದ ಭೂಸ್ವಾಧೀನಾನುಭವ ಪತ್ರ ಬಿಬಿಎಂಪಿ ಹಿಂಪಡೆದಿದೆಥಣಿಸಂದ್ರದ ಅಪಾರ್ಟ್‌ಮೆಂಟ್‌ಗೆ ನೀಡಿದ್ದ ಭೂಸ್ವಾಧೀನಾನುಭವ ಪತ್ರ ಬಿಬಿಎಂಪಿ ಹಿಂಪಡೆದಿದೆ

ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ (BSWML) ಇದು ಬಿಬಿಎಂಪಿ ಪರವಾಗಿ ಕಾರ್ಯ ನಿರ್ವಹಿಸಲು 2021 ರಲ್ಲಿ ರಚಿಸಲಾದ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದೆ. ಕಂಪನಿಯು ನವೆಂಬರ್‌ನಲ್ಲಿ ನಡೆದ ಟೆಂಡರ್‌ನಲ್ಲಿ ಹೆಚ್ಚಿನ ಬಿಡ್‌ದಾರರು ಕಡ್ಡಾಯ ನಿಯತಾಂಕಗಳನ್ನು ಪೂರೈಸಲು ವಿಫಲವಾದ ಕಾರಣ ರದ್ದು ಮಾಡಿತ್ತು. ಸದ್ಯ ಕರೆದಿರುವ ಅಲ್ಪಾವಧಿ ಟೆಂಡರ್ ಮುಂದಿನ ತಿಂಗಳ ಫೆಬ್ರವರಿ 8 ರವರೆಗೆ ಮುಂದುವರಿಯಲಿದೆ. ಕಂಪನಿಯು ಮಾರ್ಚ್‌ನಲ್ಲಿ ನಿಗದಿಯಾಗಿರುವ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನವೇ ಈ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

BSWML has released tender for waste management in all 243 wards under BBMP for a single Time

ಬೆಂಗಳೂರಾದ್ಯಂತ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಣೆ, ಅದರ ಸಾಗಣೆ ಮತ್ತು ಅದರ ಸಂಸ್ಕರಣೆಯನ್ನು ಕಾರ್ಯಗತಗೊಳಿಸುವಲ್ಲಿ ಕಂಪನಿ ನಿರತವಾಗಿದೆ ಎಂದು ಅಲ್ಪಾವಧಿ ಟೆಂಡರ್ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.

ವಾರ್ಷಿಕ ವೆಚ್ಚ 590 ಕೋಟಿ ರೂ.ವೆಚ್ಚ

ಬಿಬಿಎಂಪಿಯು BSWML ಕಂಪನಿಯ ಕಾರ್ಯವನ್ನು ಒಟ್ಟು 89 ವಿಭಾಗಗಳಾಗಿ ವಿಂಗಡಿಸಿದೆ. ಜೊತೆಗೆ ವಾರ್ಡ್‌ಗಳನ್ನು ಹಂಚಿಕೆ ಮಾಡಲಾಗಿದೆ. ಐದು ವರ್ಷಗಳ ಒಪ್ಪಂದದ ತ್ಯಾಜ್ಯ ವಿಲೇವಾರಿಗೆ ವಾರ್ಡ್‌ಗೆ ತಿಂಗಳಿಗೆ ಸುಮಾರು 20 ಲಕ್ಷ ರೂ.ನಂತೆ ವಾರ್ಷಿಕ ವೆಚ್ಚ 590 ಕೋಟಿ ರೂ.ತಲುಲಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಎಲ್ಲ ವಾರ್ಡ್‌ಗಳಿಗೆ ಒಂದೇ ಬಾರಿಗೆ ತ್ಯಾಜ್ಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಉದ್ದೇಶಿಸಿರುವುದು ಇದೇ ಮೊದಲು. ಟೆಂಡರ್ ಪ್ರಕ್ರಿಯೆ ಯಶಸ್ವಿಯಾಗಲಿದೆ. ಲಾಭಿ ನಿವಾರಣೆಯಿಂದ ಟೆಂಡರ್‌ನಲ್ಲಿ ಭಾಗವಹಿಸುವಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಕಸ ಸಂಗ್ರಹ ಹಾಗೂ ತ್ಯಾಜ್ಯ ಬೇರ್ಪಡಿಸುವಿಕೆ ಸುಗಮಗೊಳಿಸಲು ಸಹಾಯ ಮಾಡುತ್ತದೆ ಎಂದು ಘನತ್ಯಾಜ್ಯ ನಿರ್ವಹಣಾ ತಜ್ಞ ರಾಮಪ್ರಸಾದ್ ವಿವರಿಸಿದರು.

BSWML has released tender for waste management in all 243 wards under BBMP for a single Time

ಸಿಲಿಕಾನ್ ಸಿಟಿಯಲ್ಲಿ ನಿತ್ಯ 5,500 ರಿಂದ 6,000 ಟನ್‌ಗಳಷ್ಟು ತ್ಯಾಜ್ಯ ಉತ್ಪತ್ತಿ ಆಗುತ್ತಿದೆ. ಮನೆಗಳು ಸುಮಾರು 4,000-4,500 ಟನ್‌ಗಳಷ್ಟು ಕಸ ಡಂಪ್ ಮಾಡುತ್ತವೆ. ಬೃಹತ್ ತ್ಯಾಜ್ಯ ಉತ್ಪಾದಕಗಳು 1,500-200 ಟನ್‌ಗಳಷ್ಟು ಕಸವನ್ನು ಕೊಡುಗೆಯಾಗಿ ನೀಡುತ್ತವೆ. ಈ ಎಲ್ಲ ತ್ಯಾಜ್ಯವನ್ನು ಎಲ್ಲ ವಾರ್ಡ್‌ಗಳಲ್ಲಿ ಕಂಪನಿಯಿಂದ ಸಂಗ್ರಹಿಸಲಾಗುತ್ತದೆ.ಮನೆ, ವಾಣಿಜ್ಯ ಸಂಸ್ಥೆಗಳಿಂದ ತ್ಯಾಜ್ಯ ಸಂಗ್ರಹ ಖರ್ಚನ್ನು ಸರ್ಕಾರ ತಿಂಗಳಿಗೆ ಇಂತಿಷ್ಟು ಎಂದು ಭರಿಸುತ್ತದೆ.

English summary
Bengaluru Solid Waste Management Limited (BSWML) has released tender for waste management in all 243 wards under BBMP for a single Time,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X