Breaking: ಬೆಂಗಳೂರಿನ ಅಬ್ಬಿಗೆರೆ ಪತಿಯ ನಿವಾಸಕ್ಕೆ ಸೌಂದರ್ಯ ಮೃತದೇಹ
ಬೆಂಗಳೂರು, ಜನವರಿ 28: ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮೊಮ್ಮಗಳು ಡಾ ಸೌಂದರ್ಯ ಮೃತದೇಹದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಸಂಬಂಧಿಕರಿಗೆ ಸೌಂದರ್ಯ ಮೃತದೇಹವನ್ನು ಹಸ್ತಾಂತರಿಸಲಾಗಿದೆ.
ಬೆಂಗಳೂರು ಉತ್ತರ ಜಿಲ್ಲೆಯ ಅಬ್ಬಿಗೆರೆಯಲ್ಲಿರುವ ಡಾ. ನೀರಜ್ ನಿವಾಸಕ್ಕೆ ಆಂಬುಲೆನ್ಸ್ ಮೂಲಕ ಸೌಂದರ್ಯ ಮೃತದೇಹವನ್ನು ರವಾನಿಸಲಾಗಿದೆ. ಫಾರ್ಮ್ ಹೌಸ್‌ನಲ್ಲಿ ಸೌಂದರ್ಯ ಅಂತಿಮ ಕಾರ್ಯ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಲಿಂಗಾಯತ ಸಂಪ್ರದಾಯದಂತೆ ಅಂತಿಮಾ ವಿಧಿವಿಧಾನ ನೆರವೇರಿಸಲಾಗುತ್ತದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರ ಜೊತೆಗೆ ಈಗಾಗಲೇ ಅಬ್ಬಿಗೆರೆಯಲ್ಲಿರುವ ಡಾ ನೀರಜ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಬಿಎಸ್ ವೈ ಸೇರಿದಂತೆ ಕುಟುಂಬ ಸದಸ್ಯರು ಅಬ್ಬಿಗೆರೆ ನಿವಾಸದತ್ತ ಧಾವಿಸುತ್ತಿದ್ದಾರೆ.

ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೌಂಟ್ ಕಾರ್ಮಲ್ ಕಾಲೇಜು ಸಮೀಪ ಬಳಿ ಪ್ಲಾಟ್ ನಲ್ಲಿ ತಂಗಿದ್ದ ಸೌಂದರ್ಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಸೌಂದರ್ಯ ಯಡಿಯೂರಪ್ಪ ಅವರ ಮಗಳು ಪದ್ಮಾವತಿ ಅವರ ಪುತ್ರಿ ಆಗಿದ್ದಾರೆ. 2018 ರಲ್ಲಿ ವೃತ್ತಿಯಲ್ಲಿ ವೈದ್ಯರಾಗಿದ್ದ ನೀರಜ್ ರನ್ನು ಮದುವೆಯಾಗಿದ್ದು, ಸೌಂದರ್ಯ ಹಾಗೂ ನೀರಜ್ ದಂಪತಿಗೆ ಒಂದು ಮಗು ಕೂಡ ಇದ್ದು, ಸೌಂದರ್ಯ ಕೂಡ ವೃತ್ತಿಯಲ್ಲಿ ವೈದ್ಯರಾಗಿದ್ದರು.
ಶುಕ್ರವಾರ ಬೆಳಗ್ಗೆ ನಡೆದ ಘಟನೆ ಏನು?:
ಪತಿ ಹಾಗೂ ಮಗುವಿನೊಂದಿಗೆ ಶಾಂಗ್ರಿಲಾ ಹೋಟೆಲ್ ಸಮೀಪ ಫ್ಲಾಟ್‌ನಲ್ಲಿ ತಂಗಿದ್ದರು. ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೀರಜ್ ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ತೆರಳಿದ್ದರು. ಇದಾದ ಬಳಿಕ ಮನೆಗೆ ತೆರಳಿದ್ದ ಮನೆ ಕೆಲಸದವರು ಹೋಗಿ ಮನೆ ಬಾಗಿಲು ತೆಗೆಯಲು ಕೇಳಿದ್ದಾರೆ. ಎಷ್ಟೊತ್ತಾದರೂ ಬಾಗಿಲು ತೆಗೆದಿಲ್ಲ. ಮನೆ ಕೆಲಸದವರು ವಿಚಾರವನ್ನು ಪತಿ ಡಾ.ನೀರಜ್ ಗೆ ತಿಳಿಸಿದ್ದಾರೆ. ಬಂದು ನೋಡಿದಾಗ ಕೊಠಡಿಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಗುವನ್ನು ಒಂದು ಕೋಣೆಯಲ್ಲಿರಿಸಿ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಲ್ಲಿಗೆ ಆಸ್ಪತ್ರೆಯಲ್ಲಿ ಜೀವ ಉಳಿಸುವ ಪ್ರಯತ್ನ:
ಡಾ. ಸೌಂದರ್ಯ ಅವರನ್ನು ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ವಿಚಾರವನ್ನು ವೈದ್ಯರು ದೃಢಪಡಿಸಿದ್ದಾರೆ. ಆ ಬಳಿಕ ಮೃತ ದೇಹವನ್ನು ಬೌರಿಂಗ್ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಸಚಿವ ಗೋವಿಂದ ಕಾರಜೋಳ ಸೇರಿದಂತೆ ಸಚಿವರ ದಂಡು ಬೌರಿಂಗ್ ಆಸ್ಪತ್ರೆಯತ್ತ ತೆರಳಿದ್ದರು. ಹೈಗ್ರೌಂಡ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected];












Click it and Unblock the Notifications